Bidar: ಭೂಮಿಯೊಳಗಿಂದ ಸ್ಫೋಟದಂಥ ಶಬ್ದ: ಭಯಗೊಂಡ ಗ್ರಾಮಸ್ಥರು

By Kannadaprabha News  |  First Published Jan 3, 2022, 10:40 AM IST

*   ಮಂಗಲಗಿ, ಸಿರಕಟನಳ್ಳಿ ಗ್ರಾಮಗಳಿಗೆ ಖಾಶೆಂಪೂರ ಭೇಟಿ
*  ಇದು ಭೂಕಂಪನವಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ
*  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಸೀಲ್ದಾರ್‌
 


ಬೀದರ್‌(ಡಿ.03):  ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಲಗಿ, ಮಂಗಲಗಿವಾಡಿ, ಸಿರಕಟನಳ್ಳಿ ಭಾಗದಲ್ಲಿ ಇತ್ತೀಚೆಗೆ ಭೂಮಿಯೊಳಗಿನಿಂದ(Earth) ಸ್ಫೋಟದ ರೀತಿಯ ಶಬ್ದ(Sound) ಕೇಳಿಬಂದಿದ್ದು, ಆತಂಕದಲ್ಲಿದ್ದ ಗ್ರಾಮಗಳಿಗೆ ಶಾಸಕ ಬಂಡೆಪ್ಪ ಖಾಶೆಂಪೂರ(Bandeppa Kashempur) ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಮಂಗಲಗಿ, ಮಂಗಲಗಿವಾಡಿ, ಸಿರಕಟನಳ್ಳಿ ಗ್ರಾಮಗಳಿಗೆ ಶನಿವಾರ ರಾತ್ರಿಯೇ ಭೇಟಿ ನೀಡಿದ ಶಾಸಕ ಖಾಶೆಂಪೂರ ಅವರು, ಸ್ಫೋಟದ ರೀತಿಯ ಶಬ್ದದಿಂದ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿ, ಗ್ರಾಮಸ್ಥರಿಗೆ(Villagers) ಧೈರ್ಯ ತುಂಬಿದರು. ಘಟನೆಗೆ ಸಂಬಂಧಿಸಿದಂತೆ ಸಿರಕಟನಳ್ಳಿ, ಮಂಗಲಗಿ, ಮಂಗಲಗಿವಾಡಿ ಗ್ರಾಮಗಳಿಂದ ನನಗೆ ಪೋನ್‌ ಬಂದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಹಸೀಲ್ದಾರ್‌, ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿದ್ದೇನೆ ಎಂದರು.

Latest Videos

undefined

Boom in Bengaluru: ಬೆಂಗಳೂರಿನ ಹಲವೆಡೆ ಭಾರೀ ಶಬ್ಧ, ಭೂಕಂಪದ ಅನುಭವ, ಬೆಚ್ಚಿಬಿದ್ದ ಜನ

ನಾನು ಭೇಟಿ ನೀಡುವ ಮುಂಚೆಯೇ ತಹಸೀಲ್ದಾರರು ಸಿರಕಟನಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಮಟ್ಟದ ಹಾನಿ ಏನೂ ಆಗಿಲ್ಲ. ಭೂಮಿಯಲ್ಲಿ ಶಬ್ದ ಕೇಳಿಸಿರುವುದು ನಿಜವೆಂದು ತಹಸೀಲ್ದಾರರು ಹೇಳಿದ್ದಾರೆ. ಸಂಬಂಧಿಸಿದ ತಜ್ಞರನ್ನು(Experts) ಕರೆಯಿಸಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಇಲ್ಲಿನ ಘಟನೆಗಳ ವರದಿ(Report) ತರಸಿಕೊಂಡಿದ್ದಾರೆ ಎಂದರು.

ಇದು ಭೂಕಂಪನವಲ್ಲ(Earthquake). ಭಯ, ಆತಂಕಪಡುವಂತ ಘಟನೆ ಕೂಡ ಅಲ್ಲ. ಈ ಮುಂಚೆ ಜಿಲ್ಲೆಯ ಕೆಲ ಭಾಗಗಳಲ್ಲಿ ಇದೇ ರೀತಿ ಭೂಮಿಯಲ್ಲಿ ಶಬ್ದ ಕೇಳಿ ಬಂದಿತ್ತು. ಅದಕ್ಕೂ ಮುಂಚೆ ಚಿಂಚೋಳಿ(Chincholi) ಭಾಗದಲ್ಲಿ ದೊಡ್ಡಮಟ್ಟದ ಶಬ್ದ ಕೇಳಿ ಬಂದಿತ್ತು. ಈ ಘಟನೆಯ ಬಗ್ಗೆ ತಜ್ಞರನ್ನು ಕರಿಸಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಗ್ರಾಮಸ್ಥರು ಭಯ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.

ವಾತಾವರಣದಲ್ಲಿ ಹೆಚ್ಚು ಕಡಿಮೆಯಾದಾಗ ಭೂಮಿಯಲ್ಲಿ ಏರುಪೇರಾಗಿ ಈ ರೀತಿಯ ಘಟನೆಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ಈ ಘಟನೆಯ ಬಗ್ಗೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಆ ರೀತಿಯ ಎಲ್ಲ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಟಗುಪ್ಪ ಗ್ರೇಡ್‌-2 ತಹಸೀಲ್ದಾರ್‌ ರಾಜೇಶ್ವರಿ, ತಾಪಂ ಇಒ ವೆಂಕಟಸಿಂಧೆ, ಸಂತೋಷ ರಾಸೂರು, ಮಲ್ಲಪ್ಪ ಮನ್ನಾಎಖ್ಖೇಳಿ, ನಾರಾಯಣರೆಡ್ಡಿ, ಮಹಮ್ಮದ್‌ ಪಟೇಲ್‌, ಜಗದೇವಿ ಸುತಾರ್‌, ಗಣಪತಿ ಕುಂಬಾರ, ಪ್ರೀತಿ ಸ್ವಾಮಿ, ನಾಗಶೆಟ್ಟಿ ಕೋಲ್ಲಾಟಿ, ಬಸಪ್ಪ ಧನಶ್ರೀ, ಕಾಶಪ್ಪ ರಂಜೋಳ, ರೇವಣ್ಣಸಿದ್ದಪ್ಪ, ತುಕ್ಕರಾವ್‌ ಇದ್ದರು.

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ, ಆತಂಕದಲ್ಲಿ ಜನತೆ

ವಿಜಯಪುರ: ಜಿಲ್ಲೆಯಲ್ಲಿ ಭೂಕಂಪನದ ಭಯ ಇನ್ನೂ ನಿಲ್ಲುವ ಹಾಗೆ ಕಾಣ್ತಿಲ್ಲ. ಹೌದು, ನ.14ರ ಬೆಳಗಿನ ಜಾವ 6.20 ಕ್ಕೆ ವಿಜಯಪುರ(Vijayapura) ಜಿಲ್ಲೆಯ ಬಸವನ ಬಾಗೇವಾಡಿ(Basavana Bagewadi) ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಮಿ‌ ಕಂಪಿಸಿದ ಅನುಭವವಾಗಿತ್ತು. 

Chikkaballapura Earthquake : ಭೂ ಕಂಪನಕ್ಕೆ ಬಿರುಕು ಬಿಟ್ಟಮನೆದೆ ಇಲ್ಲ ಪರಿಹಾರ

ಇಂದು ಬೆಳಿಗ್ಗೆ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಭೂಕಂಪನದಿಂದ ಮನಗೂಳಿ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಈ ತರಹದ ಶಬ್ದದಿಂದ‌ ಮನಗೂಳಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. 

ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 16ಕ್ಕೂ ಅಧಿಕ ಬಾರಿ ಭೂಕಂಪನವಾಗಿದೆ(Earthquake). 16 ಬಾರಿಯೂ ರಿಕ್ಟರ್ ಮಾಪಕದಲ್ಲಿ(Richter Scale) ಭೂಕಂಪನ ತೀವ್ರತೆ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಭೂ ವಿಜ್ಞಾನಿಗಳ(Earth Scientists) 10 ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಸೂತಿ ಗ್ರಾಮದಲ್ಲಿ ವಿಜ್ಞಾನಿಗಳು ಭೂಕಂಪನ ಮಾಪಕ ಅಳವಡಿಕೆ ಸಾಧನವನ್ನ ಮಾಡಿದ್ದರು. 
 

click me!