ಪ್ರೀತಿಗೆ ವಯಸ್ಸಿನ ಗಡಿ ಇಲ್ಲ: 75ರ ವಯಸ್ಸಿನಲ್ಲೂ 35ರ ಯುವತಿಗೆ ತಾಳಿ ಕಟ್ಟಿದ ಅಜ್ಜ!

By Govindaraj S  |  First Published Sep 9, 2023, 5:13 PM IST

ಸುಮಾರು 75 ವರ್ಷದ ವ್ಯಕ್ತಿ ಆಶ್ರಯಕ್ಕಾಗಿ 35 ವರ್ಷದ ಮಹಿಳೆಯನ್ನ ಮದುವೆಯಾಗಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. 


ವರದಿ: ರವಿಕುಮಾರ್.ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಸೆ.09): ಸುಮಾರು 75 ವರ್ಷದ ವ್ಯಕ್ತಿ ಆಶ್ರಯಕ್ಕಾಗಿ 35 ವರ್ಷದ ಮಹಿಳೆಯನ್ನ ಮದುವೆಯಾಗಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು! ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದ 75 ವರ್ಷದ ಈರಣ್ಣ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸುಮಾರು 35 ವರ್ಷದ ಅನುಶ್ರೀಯನ್ನು ಮದುವೆಯಾಗುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಸ್ಪರ ಇವರಿಬ್ಬರೂ ಕೂಡ ಮದುವೆಗೆ ಒಪ್ಪಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

Tap to resize

Latest Videos

ಇಳಿ ವಯಸ್ಸಿನಲ್ಲೂ ಯಾಕೆ ಈ ನಿರ್ಧಾರ: ಮೇಲೂರು ಗ್ರಾಮದ ಈರಣ್ಣ ಈ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದು ಪತ್ನಿ ಸಾವನ್ನಪ್ಪಿದ್ದಾರೆ. ಇತ್ತ ಇಬ್ಬರು ಮಕ್ಕಳು ಕೂಡ ಈತನನ್ನು ಲಾಲನೆ ಪಾಲನೆ ಮಾಡದೆ ಇರುವ ಕಾರಣ, ಇಳಿ ವಯಸ್ಸಿನಲ್ಲೂ ಕೂಡ ನೋಡಿಕೊಳ್ಳದೆ ಇರುವ ಕಾರಣ ಮತ್ತೊಂದು ಮದುವೆಯಾಗಲು ನಿರ್ಧಾರ ಮಾಡಿ ವಿವಾಹಿತ ಮಹಿಳೆಯನ್ನೇ ಮದುವೆಯಾಗಲು ಹುಡುಕಾಟ ನಡೆಸುತ್ತಿದ್ದ. ಈ ವೇಳೆ ಈರಣ್ಣಗೆ ತಿಳಿದಿದ್ದು ಅನುಶ್ರೀ. ಈ ಹಿಂದೆ ಅನುಶ್ರೀ ಕೂಡ  ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾನೆ, ಆದರೆ ಅನುಶ್ರೀಯ ಗಂಡ ಕೂಡ ಬಿಟ್ಟು ಬೇರೆ ಕಡೆ ಹೋಗಿದ್ದಾನೆ. ಚಿಕ್ಕಬಳ್ಳಾಪುರದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಅನುಶ್ರೀ ಕೂಡ ಈರಣ್ಣ ಜೊತೆ ಮದುವೆಗೆ ಒಪ್ಪಿಕೊಂಡಿದ್ದಾಳೆ. ಇಬ್ಬರೂ ಕೂಡ ಶಿಡ್ಲಘಟ್ಟ ತಾಲೂಕು, ಅಪ್ಪೆ ಗೌಡನಹಳ್ಳಿ ಗ್ರಾಮದ ದೇವಸ್ಥಾನ ಒಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

ಮಕ್ಕಳಿದ್ದರೂ ಈರಣ್ಣನಿಗೆ ಆಶ್ರಯ ಇರಲಿಲ್ಲ: ಈರಣ್ಣ ಮೊದಲಿನಿಂದಲೂ ಕೂಡ ಒಳ್ಳೆಯ ಬೆಳೆಗಳನ್ನು ಬೆಳೆಯುತ್ತಾ ಜಮೀನನ್ನು ಹೊಂದಿದ್ದ, ಹೀಗಾಗಿ ತನ್ನ ಇಬ್ಬರು ಮಕ್ಕಳಿಗೂ ಒಳ್ಳೆಯ ಸಂಬಂಧ ಹುಡುಕಿ ಮದುವೆ ಕೂಡ ಮಾಡಿದ್ದ, ಮಗಳು ನೋಡಿಕೊಳ್ಳಲಿಲ್ಲ ಮಗನು ಆಶ್ರಯ ನೀಡಲಿಲ್ಲ ಎಂಬ ಕೊರಗು ಈರಣ್ಣನಿಗೆ ಕಾಡುತ್ತಿತ್ತು, ಇದರಿಂದಾಗಿ ಮತ್ತೊಂದು ಮದುವೆ ಆಗುವ ನಿರ್ಧಾರವನ್ನು ಈರಣ್ಣ ತೆಗೆದುಕೊಂಡಿದ್ದ. 

ಸೂರ್ಯ-ಚಂದ್ರ, ಬೆಟ್ಟ-ಗುಡ್ಡ ಶಾಶ್ವತವೇ ಹೊರತು ಸನಾತನ ಧರ್ಮವಲ್ಲ: ನಟ ಚೇತನ್‌

ಈರಣ್ಣ ಮನೆಯಲ್ಲಿ ನವದಂಪತಿ ವಾಸ: ಹೌದು! ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದಲ್ಲಿರುವ ಈರಣ್ಣನವರ ಸ್ವಂತ ಮನೆಯಲ್ಲೇ ಇಬ್ಬರೂ ಕೂಡ ವಾಸವಾಗಿದ್ದಾರೆ. ನಿನ್ನೆಯಷ್ಟೇ ಅಸಮಣೆ ಏರಿದ ಈ ದಂಪತಿ ಈಗ ಈರಣ್ಣನವರ ಮನೆಯಲ್ಲಿ ತಂಗಿದ್ದಾರೆ. ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದರೂ ಕೂಡ ಇನ್ನೊಂದು ಮದುವೆ ಆಗುವ ಮೂಲಕ ಪರಸ್ಪರ ಇಬ್ಬರಿಗೂ ಕೂಡ ಆಶ್ರಯ ಸಿಕ್ಕಂತಾಗಿದೆ. ಇವರ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

click me!