ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳು ಅತಂತ್ರ, 60% ಉದ್ಯೋಗ ಕಡಿತ

By Kannadaprabha NewsFirst Published Sep 9, 2019, 12:29 PM IST
Highlights

ದೇಶದ ಹಲವೆಡೆ ಉದ್ಯೋಗ ಕಡಿತದ ಭೀತಿ ತಲೆದೋರಿದ್ದು, ಗಾರ್ಮೆಂಟ್ ಸೇರಿ ಹಲವು ಉದ್ದಿಮೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದೇ ಸಂದರ್ಭ ಕರ್ನಾಟಕ ರಾಜ್ಯ ಸಣ್ಣ‌ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಕರ್ನಾಟಕದಲ್ಲಿಯೂ ಉದ್ಯೋಗ ಕಡಿತದ ಭೀತಿ ಎದುರಾಗಿದೆ.

ಹುಬ್ಬಳ್ಳಿ(ಸೆ.09): ಆರ್ಥಿಕ ಹಿಂಜರಿತ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ ವಿವಿಧ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡುತ್ತಿರುವ 20 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಣ್ಣ‌ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು ಆತಂಕ ವ್ಯಕ್ತಪಡಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಹಿಂಜರಿತದಿಂದ ರಾಜ್ಯದ ಶೇ 40ರಷ್ಟು ಸಣ್ಣ ಕೈಗಾರಿಕೆಗಳು ಅತಂತ್ರವಾಗುತ್ತಿವೆ. ಇದರಿಂದ ಶೇ 60 ರಷ್ಟು ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆರು ಲಕ್ಷ ಸಣ್ಣ ಕೈಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿರುವ 60 ಲಕ್ಷ ಉದ್ಯೋಗಿಗಳಲ್ಲಿ 20 ಲಕ್ಷ ಉದ್ಯೋಗಿಗಳು ಬೀದಿಗೆ ಬರಲಿದ್ದಾರೆ ಎಂದರು.

ಹುಬ್ಬಳ್ಳಿ: ಸಂಚಾರಿ ಠಾಣೆಗೆ ಬರಲು ಪೊಲೀಸರ ಪೈಪೋಟಿ..!

ನೋಟ್ ಅಮಾನ್ಯೀಕರಣ, ಜಿ.ಎಸ್.ಟಿಯಿಂದಾಗಿ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚುವಂತಾಗಿದೆ. ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಅತಿವೃಷ್ಟಿಯಿಂದಾಗಿ ಕೃಷಿಯೇತರ ಕ್ಷೇತ್ರ ಮಾತ್ರವಲ್ಲದೆ ಕೈಗಾರಿಕಾ ವಲಯಕ್ಕೂ ಭಾರಿ ಹಾನಿಯಾಗಿದೆ. 

ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು. ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿಗೆ ಪ್ರಶ್ನೆ ಮಾಡೋದೆ ತಪ್ಪಾ..? ಕೇಸ್ ಹಿಂಪಡೆಯಲು ಒತ್ತಾಯ

click me!