
ಬೆಂಗಳೂರು (ಆ.22) : ಬೆಂಗಳೂರು ನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ಸುಮಾರು 60 ಕೋಟಿ ರುಪಾಯಿ ಮೌಲ್ಯದ 27 ಎಕರೆ ಸರ್ಕಾರಿ ಜಮೀನುಗಳನ್ನು ಬೆಂಗಳೂರು ನಗರ ಜಿಲ್ಲಾಡಳಿತ ವಶಪಡಿಸಿಕೊಂಡಿದೆ.
ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮತ್ತು ತಾಲೂಕುಗಳ ತಹಸೀಲ್ದಾರ್‌ಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಸರ್ಕಾರಿ ಕೆರೆ ಕುಂಟೆ ಗೊಮಾಳ, ಸ್ಮಶಾನ, ರಾಜಕಾಲುವೆ ಒತ್ತುವರಿ ತೆರೆವುಗೊಳಿಸಲಾಗಿದೆ.
ಭೂ ಕುಸಿತ ಭವಿಷ್ಯದ ಅಪಾಯದ ಎಚ್ಚರಿಕೆ ಗಂಟೆ
ಸುಮಾರು 60,71,20 000 ರು ಮೌಲ್ಯದ ಒಟ್ಟು 27 ಎಕರೆ 25 ಗುಂಟೆ ವಿಸ್ತೀರ್ಣದ ಜಮೀನುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಎ. ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಯಲಹಂಕ ತಾಲೂಕಿನ ಜಾಲ ಹೋಬಳಿಯ ಬಾಗಲೂರು ಗ್ರಾಮದಲ್ಲಿ 1.20 ಎಕರೆ ಸರ್ಕಾರಿ ಖರಾಬು, ಯಲಹಂಕ ಹೋಬಳಿಯ ಅಮೃತಹಳ್ಳಿ ಗ್ರಾಮದ 20 ಗುಂಟೆ ಸರ್ಕಾರಿ ಕೆರೆ ಜಾಗ ಹಾಗು ಜಾಲ ಹೋಬಳಿಯ ಬಿಕೆ ಪಾಳ್ಯ ಗ್ರಾಮದ 4 ಎಕರೆ ಸರ್ಕಾರಿ ಗೋಮಾಳ ಸೇರಿ 35.28 ಕೋಟಿ ಮೌಲ್ಯದ 6 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ.
ಆನೇಕಲ್ ತಾಲೂಕಿನಲ್ಲಿ 19.61 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಉತ್ತರದಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.