ರಸ್ತೆ ಅಪಘಾತ: ಹಜ್‌ ಯಾತ್ರೆ ಹೊರಟಿದ್ದ ಕುಟುಂಬದ 7 ಜನ ಸಾವು

By Web DeskFirst Published Jul 31, 2019, 1:58 PM IST
Highlights

ಕುಟುಂಬ ಸಮೇತ ಹಜ್ ಯಾತ್ರೆಗೆ ಹೊರಟಿದ್ದ ಒಂದೇ ಕುಟುಂಬದ ಏಳು ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿರುವುದಾಗಿ ಮಾಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಧಾರವಾಡ(ಜು.31): ಕುಟುಂಬ ಸಮೇತ ಹಜ್ ಯಾತ್ರೆಗೆ ಹೊರಟಿದ್ದ ಒಂದೇ ಕುಟುಂಬದ ಏಳು ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾತ್ರಿ 2 ಗಂಟೆಯ ಹೊತ್ತಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಮಾಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸತಾರಾ ಬಳಿ  ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಧಾರವಾಡದ ಕುಟುಂಬದ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಧಾರವಾಡದ ನಿಜಾಮುದ್ದೀನ‌ ಸೌದಾಗರ ಎಂಬ ಕುಟುಂಬದ ಸದಸ್ಯರು ಭೀಕರ ಅಪಘಾತದಲ್ಲಿ ಮೃತಪಟ್ಟವರು.

ಕುಟುಂಬ ಸಮೇತ ಹಜ್ ಯಾತ್ರೆಗೆ ಹೊರಟಿದ್ದರು:

ಕಳೆದ ರಾತ್ರಿ 8 ಗಂಟೆಗೆ ಧಾರವಾಡದ ಮದಿಹಾಳದಿಂದ ನಿಜಾಮುದ್ದಿನ ಸೌದಾಗರ ಕುಟುಂಬ ಹಜ್‌ ಯಾತ್ರೆ ಹೊರಟಿದ್ದರು. ನಾಳೆ ಮುಂಬೈಯಿಂದ ಹಜ್ ಯಾತ್ರೆ ಹೊರಡುವುದಕ್ಕಿದ್ದರು. ನಿಜಾಮುದ್ದಿನ ಸೌದಾಗರ್(65), ಸಪುರಾ ಬೇಗಂ ಸೌದಾಗರ್(58) ಹಾಗೂ ಇವರ ಮಕ್ಕಳಾದ ಮನ್ಸುಫ್ ಅಲಿ(45), ಸೊಸೆ ನಫಿಸಾ, ಮೊಮ್ಮಕ್ಕಳಾದ ಗುಲ್ನಾರ್(6), ತೈಬಾ(4) ಹಾಗೂ ಅಹ್ಮದ ರಝಾ(2) ಸಾವನ್ನಪ್ಪಿದ ದುದೈರ್ವಿಗಳು ಎಂದು ತಿಳಿದು ಬಂದಿದೆ.

ತುಮಕೂರು ರಸ್ತೆ ಅಪಘಾತದಲ್ಲಿ ಅಗಲಿದ ಅಭಿಮಾನಿಗೆ ಕಂಬನಿ ಮಿಡಿದ ಸುದೀಪ್!

ನಿನ್ನೆಯಷ್ಟೇ ಬಂಧುಗಳ ಹಾರೈಕೆಯೊಂದಿಗೆ ಯಾತ್ರೆ ಹೊರಟಿದ್ದರು:

ಘಟನೆ ವಿಷಯ ತಿಳಿದು ಧಾರವಾಡದಿಂದ ಅವರ ಕುಟುಂಬದವರು ಸತಾರಾಗೆಬಂದಿದ್ದು, ಸಂಜೆ ಮೃತ ದೇಹಗಳು ಧಾರವಾಡಕ್ಕೆ ಬಂದ ಮೇಲೆ ಅಂತ್ಯಕ್ರಿಯೆ ನಡೆಯಲಿದೆ. ಮೃತರ ಮನೆಯ ಮುಂದೆ ಸೂತಕದ ಛಾಯೆ ಆವರಿಸಿದೆ. ನಿನ್ನೆಯಷ್ಟೇ ಈ ಮೃತರ ಕುಟುಂಬದ ಆಪ್ತರು ಹಾಗೂ ಹಿತೈಶಿಗಳು ಇವರನ್ನ ಹಜ್ ಯಾತ್ರೆಗೆ ಬಿಳ್ಕೊಟ್ಟಿದ್ದರು. ಮಹಾರಾಷ್ಟ್ರದ ಬೊರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!