ಒಂದೇ ಕುಟುಂಬದ 6 ಮಂದಿ ಜೈನ ಧರ್ಮ ಸ್ವೀಕಾರ ಮಾಡಿದ್ದಾರೆ. 3 ತಲೆಮಾರು ಜೈನ ಧರ್ಮ ಸ್ವೀಕಾರ ಮಾಡುವ ಮೂಲಕ ಲೌಕಿಕ ಜೀವನ ತೊರೆದಿದ್ದಾರೆ.
ದಾವಣಗೆರೆ (ಫೆ.22): ಒಂದೇ ಕುಟುಂಬದ ಮೂರು ತಲೆಮಾರಿನ ಸದಸ್ಯರು ನಗರದಲ್ಲಿ ಭಾನುವಾರ ಜೈನ ದೀಕ್ಷೆ ಸ್ವೀಕರಿಸಿದ್ದಾರೆ.
ನಗರದ ನಿವಾಸಿಗಳಾದ ವರದಿಚಂದ್ ಜೀ(75 ವರ್ಷ), ಪುತ್ರ ಅಶೋಕ ಕುಮಾರ ಜೈನ್(41 ವರ್ಷ), ಸೊಸೆ ಭಾವನಾ ಅಶೋಕ ಜೈನ್(45 ವರ್ಷ), ಮೊಮ್ಮಕ್ಕಳಾದ ಪಕ್ಷಾಲ್ ಜೈನ್(17ವರ್ಷ), ಜಿನಾಂಕ್ ಜೈನ್(15ವರ್ಷ) ಭಾನುವಾರ ಜೈನ ದೀಕ್ಷೆ ಸ್ವೀಕರಿಸಿದರೆ, ಚೆನ್ನೈನ ಲಕ್ಷಕುಮಾರ ಜೈನ್(23 ವರ್ಷ) ಸೇರಿ ಒಟ್ಟು 6 ಜನ ಒಂದೇ ಸ್ಥಳದಲ್ಲಿ ಲೌಕಿಕ ಜೀವನ ತೊರೆಯುವ ಮೂಲಕ ಜೈನ ದೀಕ್ಷೆಯನ್ನು ಸ್ವೀಕರಿಸಿದರು.
ವಜ್ರೋದ್ಯಮಿ ಕುಟುಂಬದ ಅಜ್ಜಿ, ಮಗಳು, ಮೊಮ್ಮಗಳು ಜೈನ ಸನ್ಯಾಸತ್ವ! .
ನಗರದ ಚೌಕಿಪೇಟೆಯ ಜೈನ ದೇವಸ್ಥಾನ ಮುಂಭಾಗದಿಂದ ಕೆ.ಆರ್.ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಗಾಂಧಿ ವೃತ್ತ, ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ವರದಿಚಂದ್ ಜೀ ಕುಟುಂಬ ಹಾಗೂ ಚೆನ್ನೈನ ಲಕ್ಷಕುಮಾರ ಸೇರಿ ಆರು ಜನ ತಮ್ಮ ಲೌಕಿಕ ಜೀವನದ ಭವ್ಯ ಮೆರವಣಿಗೆಯಲ್ಲಿ ಸಾಗಿದರು.