ಸರ್ಕಾರದಿಂದ ಜಮೀನು ಖರೀದಿಗೆ 15 ಲಕ್ಷ ರು. : ಸದುಪಯೋಗ ಪಡೆಯಿರಿ

By Kannadaprabha News  |  First Published Feb 22, 2021, 9:21 AM IST

ನಾನು ಸರ್ಕಾರಿ ನೌಕರಿ ಸೇರುವ ಮೊದಲು ದಾಸಯ್ಯನ ವೃತ್ತಿ ಮಾಡುತ್ತಿದ್ದೆ. ಗೋಪಾಲ ಬುಟ್ಟಿಯನ್ನು ಹಿಡಿದುಕೊಂಡು ಮನೆ ಮನೆಗೆ ತೆರಳುತ್ತಿದ್ದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೆನಪು ಮಾಡಿಕೊಂಡಿದ್ದಾರೆ. 


ಮುಧೋಳ (ಫೆ.22): ನಾನು ಕೂಡಾ ವೃತ್ತಿಯಿಂದ ದಾಸಯ್ಯನೇ. ನಾನು ಸರ್ಕಾರಿ ನೌಕರಿ ಸೇರುವ ಮೊದಲು ದಾಸಯ್ಯನ ವೃತ್ತಿ ಮಾಡುತ್ತಿದ್ದೆ ಎಂದು ಡಿಸಿಎಂ ಕಾರಜೋಳ ಹೇಳಿದರು.  

ಗೋಪಾಲ ಬುಟ್ಟಿಯನ್ನು ಹಿಡಿದುಕೊಂಡು ಮನೆ ಮನೆಗೆ ತೆರಳುತ್ತಿದ್ದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಮ್ಮ ಹಳೇ ನೆನಪುಗಳನ್ನು ಹಂಚಿಕೊಂಡರು.

Tap to resize

Latest Videos

 ಮುಧೋಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದಾಸರ ಸಮಾಜದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿಯೊಬ್ಬ ಕುಟುಂದ ಸದಸ್ಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. 

ಗಡಿ ಜಿಲ್ಲೆಗಳಲ್ಲಿ ಕೋವಿಡ್‌ ತಪಾಸಣೆಗೆ ಡಿಸಿಎಂ ಕಾರಜೋಳ ಸೂಚನೆ ...

ಅವರನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ದಾಸರ ಸಮಾಜದವರಿಗೆ ಜಮೀನು ಖರೀದಿಸಲು ಸರ್ಕಾರ15 ಲಕ್ಷ ನೀಡುತ್ತದೆ. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

click me!