* ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪರ ತಾಲೂಕಿನ ಶಿರ್ಲೆ ಜಲಪಾತದ ಬಳಿ ನಡೆದ ಘಟನೆ
* ಹುಬ್ಬಳ್ಳಿ ಕಡೆಯಿಂದ ಮೂರು ಬೈಕ್‌ಗಳಲ್ಲಿ ಬಂದಿದ್ದ ಒಟ್ಟು ಆರು ಜನರು
* ಗುಡ್ಡ ಕುಸಿತ ಹಾಗೂ ಪ್ರವಾಹದಿಂದ ಸಂಚಾರ ಸ್ಥಗಿತ
ಕಾರವಾರ(ಜು.23): ಯಲ್ಲಾಪರ ತಾಲೂಕಿನ ಶಿರ್ಲೆ ಕ್ಕೆ ಆಗಮಿಸಿದ 6 ಜನರು ಮರಳಿ ಬಾರದೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ಕಡೆಯಿಂದ ಮೂರು ಬೈಕ್‌ಗಳಲ್ಲಿ ಮೂವರು ಯುವಕರು, ಮೂರು ಯುವತಿಯರು ಬೆಳಗ್ಗೆ ಬಂದು ಪಾಲ್ಸ್‌ನತ್ತ ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಆದರೆ ಗುರುವಾರ ರಾತ್ರಿ 10 ಗಂಟೆಯಾದರೂ ಮರಳಿ ಬಂದಿಲ್ಲ. ಬೈಕ್‌ಗಳು ಹೆದ್ದಾರಿ ಸಮೀಪದಲ್ಲೆ ಇವೆ. ಭಾರಿ ಮಳೆ, ಪ್ರವಾಹದಿಂದ ಫಾಲ್ಸ್ ನತ್ತ ತೆರಳಲೂ ಸಾಧ್ಯವಾಗುತ್ತಿಲ್ಲ. ಜಲಪಾತಕ್ಕೆ ತೆರಳಿದ ಆರು ಜನರ ಬಗ್ಗೆ ಶಂಕೆ ಉಂಟಾಗಿದೆ.
undefined
ಅಪ್ಸರೆಯಂತೆ ಕಂಗೊಳಿಸುವ ಅಪ್ಸರಕೊಂಡವನ್ನು ನೋಡ ಬನ್ನಿ..!
ಸ್ವರ್ಣವಲ್ಲಿ ಮಠದ ಬಳಿ ಸೇತುವೆಯ ಮೇಲೆ ನೀರು ನುಗ್ಗಿದ್ದರಿಂದ ಯಲ್ಲಾಪುರದಿಂದ ಮಠಕ್ಕೆ ತೆರಳುತ್ತಿದ್ದ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಗುಡ್ಡದ ದಾರಿಯಲ್ಲಿ 2 ಕಿಮೀ ಸುತ್ತು ಬಳಸಿ ಕ್ಕೆ ತಲುಪಬೇಕಾಯಿತು.
ಜಿಲ್ಲೆಯ ಕರಾವಳಿಯಿಂದ ಕ್ಕೆ ಕೊಂಡಿಯಾಗಿರುವ ಎರಡು ಪ್ರಮುಖ ರಸ್ತೆಗಳಲ್ಲಿ ಗುಡ್ಡ ಕುಸಿತ ಹಾಗೂ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ-ಕಾರವಾರ ನಡುವಣ ರಾಜ್ಯ ಹೆದ್ದಾರಿಯಲ್ಲಿ ಅಣಶಿ ಕದ್ರಾ ನಡುವೆ ಗುಡ್ಡ, ಮರಗಳು ಬಿದ್ದು ಸಂಚಾರ ಕಡಿತಗೊಂಡಿದೆ. ಅಂಕೋಲಾ-ಹುಬ್ಬಳ್ಳಿ ನಡುವಣ ಹೆದ್ದಾರಿಯಲ್ಲಿ ಹೈಲ್ಯಾಂಡ್ ಹೋಟೆಲ್ ಹಾಗೂ ಮೊಗೆದ್ದೆ ಬಳಿ ನೀರು ನುಗ್ಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ವಾಹನಗಳು ಕುಮಟಾ-ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿವೆ. ಗುಳ್ಳಾಪುರ ಹೆಗ್ಗಾರ ನಡುವೆ ಸೇತುವೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ.