ಬೀಪಿ ಲೋ ಆದ್ರೂ ಬಸ್‌ ನಿಲ್ಲಿಸಿ ಜನರ ರಕ್ಷಿಸಿದ ಚಾಲಕ..!

Kannadaprabha News   | Asianet News
Published : Jul 23, 2021, 07:41 AM ISTUpdated : Jul 23, 2021, 07:46 AM IST
ಬೀಪಿ ಲೋ ಆದ್ರೂ ಬಸ್‌ ನಿಲ್ಲಿಸಿ ಜನರ ರಕ್ಷಿಸಿದ ಚಾಲಕ..!

ಸಾರಾಂಶ

* ಮಂಗಳೂರಿನ ಅಡ್ಯಾರ್‌ನಲ್ಲಿ ನಡೆದ ಘಟನೆ * ಪುತ್ತೂರಿನಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕಿಗೆ ಬರುತ್ತಿದ್ದ ಖಾಸಗಿ ಬಸ್‌   * ಚಾಲಕನ ಸಮಯ ಪ್ರಜ್ಞೆಯಿಂದಾಗಿ ಹಲವಾರು ಜನರ ರಕ್ಷಣೆ  

ಮಂಗಳೂರು(ಜು.23): ಕಿಕ್ಕಿರಿದು ತುಂಬಿದ್ದ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಲೋ ಬಿಪಿಯಿಂದಾಗಿ ಬಸ್‌ ಚಾಲಕ ಸ್ಟೇರಿಂಗ್‌ ಮೇಲೇ ಕುಸಿದಿದ್ದು, ತಕ್ಷಣ ಬಸ್ಸನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಆಗಬಹುದಿದ್ದ ಭಾರೀ ಅನಾಹುತ ತಪ್ಪಿದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ ಗುರುವಾರ ನಡೆದಿದೆ. 

ಪುತ್ತೂರಿನಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕಿಗೆ ಬರುತ್ತಿದ್ದ ಸೇಫ್‌ ವೇ ಟ್ರಾವೆಲ್ಸ್‌ ಹೆಸರಿನ ಖಾಸಗಿ ಬಸ್‌ ಅಡ್ಯಾರ್‌ ಸಮೀಪಿಸುತ್ತಿದ್ದಂತೆ ಲೋ ಬಿಪಿಯಿಂದಾಗಿ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬ್ರೇಕ್‌ ಹಾಕಿ, ಸ್ಟಾಪ್‌ ಬಟನ್‌ ಒತ್ತಿದ್ದು ಬಸ್‌ ನಿಲ್ಲಿಸಿದ್ದಾನೆ. 

ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಕರ್‌ : ಕುಟುಂಬಕ್ಕೆ ಸೋನಿಯಾ ಫೋನ್‌

ಕೂಡಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಹಲವಾರು ಜನರ ಜೀವ ಉಳಿದಿದೆ. 
 

PREV
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ