ಸಂಜೆ ಹೊತ್ತಲ್ಲಿ ಕೊರೋನಾ ರಣಕೇಕೆ: ಬೆಚ್ಚಿಬಿದ್ದ ಕಲಬುರಗಿ ಜನತೆ..!

By Suvarna News  |  First Published Apr 27, 2020, 10:34 PM IST

ಕೊರೋನಾ ಹೆಮ್ಮಾರಿ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಹೆಚ್ಚುಸುತ್ತಲೇ ಇದೆ. ಅದರಲ್ಲೂ ಕಲನುರಗಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದೆ.


ಕಲಬುರಗಿ, (ಏ.27): ನಿನ್ನೆ ಅಂದ್ರೆ ಬಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ ಕಲಬುರಗಿಯಲ್ಲಿ ಎರಡು ಕೊರೋನಾ ಕೇಸ್‌ ಮಾತ್ರ ಪತ್ತೆಯಾಗಿದ್ದವು. ಆದ್ರೆ, ಹೊತ್ತು ಕಳೆಯುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಕೊರೋನಾ ವಕ್ಕರಿಸಿಕೊಂಡಿರುವುದು ದೃಢವಾಗಿದೆ.

ಈ ಮೂಲಕ ಕಲಬುರಗಿಯ ಜಿಲ್ಲೆ ಮಾತ್ರ ಕೊರೋನಾ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯಾದ್ಯಂತ ಕೊರೊನಾ 518ಕ್ಕೆ ಏರಿಸಿಕೊಂಡಿದೆ.

Tap to resize

Latest Videos

ಇಂದು ಸೋಮವಾರ) ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 8 ಜನಕ್ಕೆ ಮತ್ತು ಸಂಜೆ ಬುಲೆಟಿನ್ ನಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿರುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿತ್ತು. ಆದ್ರೆ ಸಂಜೆ ಹೊತ್ತಿಗಾಗಲೇ ಒಟ್ಟು ಕೊರೋನಾ ಕೊರೋನಾ ಸೋಂಕಿತರ ಸಂಖ್ಯೆ 15 ಆಗಿದೆ.

ಈ ಬಗ್ಗೆ ಕಲಬುರಗಿ ಜಿಲ್ಲಾಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಆರು ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಸೋಂಕಿತರ ವಿವರವನ್ನು ಜಿಲ್ಲಾಡಳಿತ ಪ್ರಕಟಿಸಿಲ್ಲ. ಇಂದಿನ ಆರು ಹೊಸ ಪ್ರಕರಣಗಳ ಮೂಲಕ ಕಲಬುರಗಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

click me!