ಹಬ್ಬದ ಖುಷಿಯನ್ನೇ ಕಸಿದ ಜವರಾಯ, ತುಮಕೂರು ಬಳಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ: 6 ಮಂದಿ ದುರ್ಮರಣ..!

By Girish GoudarFirst Published Sep 9, 2024, 7:44 AM IST
Highlights

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಎತ್ತಿನಹಳ್ಳಿ ಮೂಲದ ಜನಾರ್ಧನ್ ರೆಡ್ಡಿ ಕುಟುಂಬ ಊರಿನಲ್ಲಿ ಸಂಭ್ರಮದಿಂದ ಹಬ್ಬವನ್ನ ಮುಗಿಸಿ ಖುಷಿ ಖುಷಿಯಾಗಿ ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ರು. ಆದ್ರೆ ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮಾರ್ಗ ಮದ್ಯೆದಲ್ಲಿ ಕಾದುಕುಳಿತಿದ್ದ ಜವರಾಯ ಈ ಕುಟುಂಬದ ಮೂವರನ್ನ ಬಲಿ ತೆಗೆದುಕೊಂಡಿದ್ದಾನೆ. ಜೊತೆಗೆ ಕೆಲಸಕ್ಕೆ ಹೋಗಿ ಮನೆಗೆ ತೆರಳುತ್ತಿದ್ದವರು ಕೂಡ ಸಾವಿಗೀಡಾಗಿದ್ದಾರೆ.

ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಸೆ.09): ಅವರೆಲ್ಲ ಹಬ್ಬಕ್ಕೆಂದು ಊರಿಗೆ ಬಂದಿದ್ರು. ಖುಷಿ ಖುಷಿಯಾಗಿ ಹಬ್ಬ ಮುಗಿಸಿಕೊಂಡು ವಾಪಾಸ್ ಬೆಂಗಳೂರು ಕಡೆಗೆ ಹೊರಟಿದ್ರು. ಆದ್ರೆ ರಸ್ತೆ ಮಧ್ಯದಲ್ಲಿ ಕಾದುಕುಳಿತಿದ್ದ ಜವರಾಯ ಆ ಕುಟುಂಬದ ಖುಷಿಯನ್ನೇ ಕಿತ್ತುಕೊಂಡುಬಿಟ್ಟಿದ್ದಾನೆ. ಕೆಲಸ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುತ್ತಿದ್ದೋರು ಕೂಡ ಸಾವಿನ ಮನೆ ಸೇರಿದ್ದಾರೆ.

Latest Videos

ಎರಡು ಕಾರುಗಳ ನಡುವೆ ಭೀಕರ ಅಪಘಾತ..!

ಗೌರಿ ಗಣೇಶ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಯಿತ್ತು. ಹೀಗಾಗಿ ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಿದ್ದ ಜನಾರ್ಧನ್ ರೆಡ್ಡಿ ಕುಟುಂಬ ತವರಿಗೆ ತೆರಳಿತ್ತು. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಎತ್ತಿನಹಳ್ಳಿ ಮೂಲದ ಜನಾರ್ಧನ್ ರೆಡ್ಡಿ ಕುಟುಂಬ ಊರಿನಲ್ಲಿ ಸಂಭ್ರಮದಿಂದ ಹಬ್ಬವನ್ನ ಮುಗಿಸಿ ಖುಷಿ ಖುಷಿಯಾಗಿ ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ರು. ಆದ್ರೆ ಈ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮಾರ್ಗ ಮದ್ಯೆದಲ್ಲಿ ಕಾದುಕುಳಿತಿದ್ದ ಜವರಾಯ ಈ ಕುಟುಂಬದ ಮೂವರನ್ನ ಬಲಿ ತೆಗೆದುಕೊಂಡಿದ್ದಾನೆ. ಜೊತೆಗೆ ಕೆಲಸಕ್ಕೆ ಹೋಗಿ ಮನೆಗೆ ತೆರಳುತ್ತಿದ್ದವರು ಕೂಡ ಸಾವಿಗೀಡಾಗಿದ್ದಾರೆ.

Mangaluru: ರಸ್ತೆ ದಾಟುವಾಗ ತಾಯಿಯ ಮೇಲೆ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು!

ಜನಾರ್ದನ ರೆಡ್ಡಿ ಕುಟುಂಬ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಕಡೆಯಿಂದ ಮಾರುತಿ ಸಿಯಾಜ್ ಕಾರಿನಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಇನ್ನೊಂದು ಕಡೆಯಿಂದ ಮಧುಗಿರಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಟಾಟಾ ಟಿಯಾಗೋ ಕಾರಿನಲ್ಲಿ ಮಧುಗಿರಿ ಕಡೆಗೆ ತೆರಳುತ್ತಿದ್ರು. ಈ ವೇಳೆ ಸಿಯಾಜ್ ಕಾರು ಓವರ್ ಟೇಕ್ ಮಾಡಲು ಹೋಗಿ ಟಿಯಾಗೋ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸಿಯಾಜ್ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಜನಾರ್ಧನ್ ರೆಡ್ಡಿ, ಪುತ್ರಿ ಸಿಂಧೂಜಾ, ಸಿಂಧೂಜಾ ಪುತ್ರ ವೇದಾಂತ ರೆಡ್ಡಿ ಮೃತ ದುರ್ದೈವಿಗಳು. ಟಿಯಾಗೋ ಕಾರಿನಲ್ಲಿದ್ದ ಸಿದ್ದಗಂಗಪ್ಪ ಮತ್ತು ನಾಗರಾಜು ಕೂಡ ಸಾವನ್ನಪ್ಪಿದ್ದಾರೆ.

ಇನ್ನು ಮತ್ತೊಂದೆಡೆ ಸಿಯಾಜ್ ಕಾರಿನಲ್ಲಿದ್ದ ಗೀತಾ (38), ಗೀತಾ ಪುತ್ರ ಯೋಧ, ಚಾಲಕ ಆನಂದ್, ಹಾಗೂ ಒಂದು ವರ್ಷ ಗಂಡು ಮಗುವಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದೆ. ಗಂಭೀರ ಗಾಯಗೊಂಡಿದ್ದ ಕಾರು ಚಾಲಕನ ಆನಂದ್ (30) ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಹಾಗೂ ತುಮಕೂರು ಎಸ್.ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಮಧುಗಿರಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. 

ಒಟ್ನಲ್ಲಿ ಅದೇನೇ ಇರಲಿ. ಹಬ್ಬದ ಖುಷಿಯಲ್ಲಿದ್ದವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರೋದು ಮಾತ್ರ ದುರಂತ.

click me!