ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ: ಬಿಡಿಎ, ಬಿಎಂಆರ್‌ಡಿಎ ಹೆಸರಿನಲ್ಲಿ 3,000ಕ್ಕೂ ಅನಧಿಕೃತ ಬಡಾವಣೆ!

By Sathish Kumar KH  |  First Published Sep 8, 2024, 9:41 PM IST

ಬೆಂಗಳೂರಿನಲ್ಲಿ 3,000ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಸರ್ಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಲಕ್ಷಾಂತರ ಜನರಿಗೆ ವಂಚಿಸಿದ್ದಾರೆ. ಈ ಬಡಾವಣೆಗಳಲ್ಲಿ ನಿವೇಶನಗಳನ್ನು ನೋಂದಣಿ ಮಾಡಿಕೊಳ್ಳದಂತೆ ಸರ್ಕಾರ ಆದೇಶಿಸಿದ್ದರೂ, ಅಕ್ರಮ ಬಡಾವಣೆಗಳು ನಿರ್ಮಾಣವಾಗುತ್ತಲೇ ಇವೆ.


ಬೆಂಗಳೂರು (ಸೆ.08): ಭಾರತದಲ್ಲಿ ವಾಸಯೋಗ್ಯ ನಗರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 3,000ಕ್ಕೂ ಅಧಿಕ ಅನಧಿಕೃತ ಬಡಾವಣೆಗಳಿವೆ. ನಗರಾಭಿವೃದ್ಧಿಗೆ ಸ್ಥಾಪಸಲಾದ ಸರ್ಕಾರಿ ಅಭಿವೃದ್ಧಿ ಸಂಸ್ಥೆಗಳ ಹೆಸರಿನಲ್ಲಿಯೇ ಅನಧಿಕೃತ ಬಡಾವಣೆ ನಿರ್ಮಾಣ ಮಾಡಲಾಗುತ್ತಿದ್ದರೂ, ಇದಕ್ಕೆ ಬಿಡಿಎ, ಬಿಎಂಆರ್‌ಡಿಎ ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳೇ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿರುವುದು ಕಂಡುಬಂದಿದೆ. ಈ ಮೂಲಕ ಬೆಂಗಳೂರಿನಲ್ಲಿ ಆಸ್ತಿ ಮಾಡಬೇಕೆಂದು ಬಂದ ಲಕ್ಷಾಂತರ ಜನರಿಗೆ ಲಕ್ಷೋಪಲಕ್ಷ ಹಣವನ್ನು ಉಂಡೆ ನಾಮ ಹಾಕಿ ಬರ್ಬಾದ್ ಮಾಡಿ ಕಳಿಸಿದ್ದಾರೆ.

ಹೌದು, ಗಲ್ಲಿಗಳಿಗೊಂದು ರಿಯಲ್ ಎಸ್ಟೇಟ್ ಉದ್ಯಮಗಳು ತಲೆ ಎತ್ತಿವೆ. ಚೆಂದದ ನಾಲ್ಕು ಮಾತನಾಡಿ, ಖಾಲಿ ಸೈಟು, ಅಪಾರ್ಟ್ಮೆಂಟ್ ಫ್ಲಾಟು, ಬಾಡಿಗೆ, ಭೋಗ್ಯ ಸೇರಿ ಇತರೆ ನಿವೇಶನ ಮಾರಾಟ ಮತ್ತು ಖರೀದಿ ವ್ಯವಹಾರಗಳನ್ನು ಮಾಡುವವ ಜನರಿಗೆ ಉಂಡೆ ನಾಮ ಹಾಕುವವರೂ ಸಾಕಷ್ಟಿದ್ದಾರೆ. ಇದರಲ್ಲಿ ಶೇ.50ಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಅನಧಿಕೃತ ನಿವೇಶನಗಳನ್ನು ನಿಮಗೆ ಖರೀದಿ ಮಾಡುವಂತೆ ಮಾಡುವರೇ ಇದ್ದಾರೆ. ನಿವೇಶನ ಖರೀದಿ ಮಾಡಿ ಮನೆ ಕಟ್ಟಬೇಕು ಎನ್ನುವಾಗ ಕೈಕೊಟ್ಟು ಹೋಗುತ್ತಾರೆ. ಇನ್ನು ಒಂದು ವೇಳೆ ಸೈಟು ಕೊಟ್ಟರೂ, ಅದು ಯಾವುದೇ ಸರ್ಕಾರಿ ಇಲಾಖೆಯಿಂದ ಒಪ್ಪಿಗೆಯನ್ನೂ ಪಡೆದಿರದೇ ನೀವೇ ನಿಮ್ಮ ನಿವೇಶನಕ್ಕೆ ಸರ್ಕಾರಿ ಸೇವೆ, ಮೂಲ ಸೌಕರ್ಯಗಳನ್ನು ಹೊಂದಿಸಿಕೊಳ್ಳಲು ಜೀವನಪೂರ್ತಿ ಪರದಾಡಬೇಕಾಗುತ್ತದೆ. ಇನ್ನು ನಿಮ್ಮ ಮನೆಯ ಬಳಿ ಪ್ರತಿನಿತ್ಯ ಬರುವ ಮಧ್ಯವರ್ತಿಗಳು ಕೂಡ ನಿಮ್ಮನ್ನು ಉದ್ಧಾರ ಮಾಡಬೇಕೆಂದು ಬರುವುದಿಲ್ಲ. ಅವರಿಗೆ ಎರಡು ಕಡೆಯಿಂದಲೂ ಕಮಿಷನ್ ಬರುತ್ತದೆಂದು ಗ್ರಾಹಕರನ್ನು ಹುಡುಕಿ ಹಳ್ಳಕ್ಕೆ ತಳ್ಳುವವರೇ ಹೆಚ್ಚಾಗಿದ್ದಾರೆ.

Tap to resize

Latest Videos

undefined

ರಸ್ತೆಗುಂಡಿ ಮುಚ್ಚದಿದ್ರೆ ಎಷ್ಟು ಜನ ಸಸ್ಪೆಂಡ್ ಆಗ್ತೀರೋ ಗೊತ್ತಿಲ್ಲ; ಡಿಕೆಶಿ ಖಡಕ್ ವಾರ್ನಿಂಗ್!

ಬೆಂಗಳೂರಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು, ಸರ್ಕಾರಕ್ಕೆ ನೂರಾರು ಕೋಟಿ ರೂ. ಆದಾಯ ನಷ್ಟವಾಗಿದೆ. ಬೆಂಗಳೂರಿಗೆ ಬಂದು ಹತ್ತಾರು ವರ್ಷಗಳ ಕಾಲ ದುಡಿಮೆ ಮಾಡಿ ಸ್ವಂತ ಸೂರಿನ ಕನಸು ಕಂಡು ನಿವೇಶನ ಖರೀದಿ ಮಾಡಿ ವಂಚನೆಗೊಳಗಾಗುತ್ತಿದ್ದಾರೆ. ಇನ್ನು ಈಗಾಗಲೇ ರಾಜ್ಯ ಸರ್ಕಾರದಿಂದ ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನಗಳನ್ನು ನೋಂದಣಿ ಮಾಡಿಕೊಡದಂತೆ ಉಪ ನೋಂದಣಾಧಿಕಾರಿಗಳಿಗೆ ಆದೇಶಿಸಲಾಗಿದೆ. ಆದರೂ ಭೂ ಪರಿವರ್ತನೆ ಮತ್ತು ನಕ್ಷೆ ಮಂಜೂರಾತಿ ಪಡೆಯದೆಯೇ ಕೃಷಿ ಭೂಮಿಯಲ್ಲೇ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕಡಿಮೆ ಬೆಲೆಗೆ ನಿವೇಶನ ಸಿಗುತ್ತಿದೆ ಎಂದು ಜನರು ಕೂಡ ನಿವೇಶನ ಖರೀದಿಸಿ ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಾರೆ.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 280ಕ್ಕೂ ಅಧಿಕ ಅನಧಿಕೃ ಬಡಾವಣೆಗಳಿದ್ದವು. ಆದರೆ, ಬಿಡಿಎ ನಿರ್ಮಿಸಿದ ಬಡಾವಣೆಗಳಲ್ಲಿ ಅವುಗಳನ್ನು ವಶಕ್ಕೆ ಪಡೆದು ಕೆಲವನ್ನು ಅಧಿಕೃತ ಮಾಡಲಾಗಿದೆ. ಇನ್ನು ಕೆಲವು ಬಡಾವಣೆಗಳಿಗೆ ದಂಡ ವಿಧಿಸಲಾಗಿದೆ. ಆದರೆ, ಪ್ರಸ್ತುತ 172 ಅನಧಿಕೃತ ಬಡಾವಣೆಗಳಿಗೆ ಎಂದು ಬಿಡಿಎ ವರದಿ ನೀಡಿದೆ. ಪ್ರಸ್ತುತ ಬಿಡಿಎ ವ್ಯಾಪ್ತಿಯಲ್ಲಿ 3,109 ಎಕತೆ ಜಮೀನಿನಲ್ಲಿ ಈ 172 ಅನಧಿಕೃತ ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿಯಿದೆ.

ಸರ್ಕಾರದ ಮತ್ತೊಂದು ಸಂಸ್ಥೆಯಾದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) (Bengaluru Metropolitan Region Development Authority-BMRDA) ವ್ಯಾಪ್ತಿಯಲ್ಲಿ 1 ಸಾವಿರಕ್ಕೂ ಅಧಿಕ ರಿಯಲ್‌ ಎಸ್ಟೇಟ್‌ ಉದ್ಯಮಿಗಳು 1,500ಕ್ಕೂ ಅಧಿಕ ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಹೊಸಕೋಟೆ, ಆನೇಕಲ್‌, ನೆಲಮಂಗಲ ಯೋಜನಾ ಪ್ರಾಧಿಕಾರ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) , ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲೂ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ನಿವೇಶನ ಮಾರಾಟ ಮಾಡಲಾಗಿದೆ.

ಬದುಕು ಅಂತ್ಯಗೊಳಿಸಲು ಮೆಟ್ರೋ ಹಳಿಯಲ್ಲಿ ಓಡಿದ ಯುವತಿ, ರೈಲು ನಿಲ್ಲಿಸಿ ಜೀವ ರಕ್ಷಿಸಿದ ಸಿಬ್ಬಂದಿ!

ಗ್ರಾಮ ಪಂಚಾಯಿತಿ ಸಹಿ ಪಡೆದು ಅನಧಿಕೃತ ಬಡಾವಣೆ:  ನಮ್ಮ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದಿದ್ದರೂ ಮನೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ಇಲ್ಲದೆಯೇ 9, 11 'ಎ' ವಿತರಣೆ ಮಾಡಲಾಗುತ್ತದೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ಆದಾಯ ನಷ್ಟ ಆಗುವುದನ್ನು ತಡೆಗಟ್ಟುವ ಮತ್ತು ನಿವೇಶನದ ಬಗ್ಗೆ ದಾಖಲೆಗಳನ್ನು ಇಡುವ ನಿಟ್ಟಿನಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತಾವನ್ನು ವಿತರಣೆ ಮಾಡುತ್ತಿದ್ದಾರೆ. ಇಲ್ಲಿ ಇ-ಸ್ವತ್ತು ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದ್ದರೂ, ಉಪ ನೋಂದಣಾಧಿಕಾರಿಗಳು ನಿವೇಶನಗಳ ನೋಂದಣಿ ಪರಿಶೀಲನೆ ಮಾಡದೇ ಇದು ನಮ್ಮ ಜವಾಬ್ದಾರಿಯಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ನೀಡಿದ ಇ-ಸ್ವತ್ತು ಆಧಾರದಲ್ಲಿ ಉಪ ನೋಂದಣಾಧಿಕಾರಿಗಳು ಹಣ ಪಾವತಿಸಿಕೊಂಡು ಆಸ್ತಿ ನೋಂದಣಿ ಮಾಡಿಕೊಡುವ ಮೂಲಕ ಬಡಾವಣೆ ನಿರ್ಮಾಣಕ್ಕೆ ಕಾರಣರಾಗುತ್ತಿದ್ದಾರೆ. ಆದರೆ, ಇವೆಲ್ಲವೂ ಅನಧಿಕೃತ ಬಡಾವಣೆಗಳಾಗಿ ಸೈಟು ಖರೀದಿ ಮಾಡುವವರಿಗೆ ಮುಳುವಾಗುತ್ತಿವೆ.

click me!