ಗ್ರೀನ್ ಝೋನ್‌ನಲ್ಲಿರುವ ರಾಯಚೂರಿಗೆ ಸಂಕಷ್ಟ ತಂದಿಟ್ಟಿದ್ದಾರೆ ವಲಸೆ ಕಾರ್ಮಿಕರು. ರಾಯಚೂರಿನಲ್ಲಿ 6 ಜನರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ವಿವಿಧ ರಾಜ್ಯಗಳಿಂದ 800 ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು (ಮೇ. 18): ಗ್ರೀನ್ ಝೋನ್‌ನಲ್ಲಿರುವ ರಾಯಚೂರಿಗೆ ಸಂಕಷ್ಟ ತಂದಿಟ್ಟಿದ್ದಾರೆ ವಲಸೆ ಕಾರ್ಮಿಕರು. ರಾಯಚೂರಿನಲ್ಲಿ 6 ಜನರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ವಿವಿಧ ರಾಜ್ಯಗಳಿಂದ 800 ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ.
ಕಲಬುರಗಿಯಲ್ಲಿ ಐವರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಮುಂಬೈ ಸಂಪರ್ಕ ಕಂಟಕವಾಗುತ್ತಿದೆ. ಕಳೆದ 1 ವಾರದಲ್ಲಿ ಜಿಲ್ಲೆಯಲ್ಲಿ 37 ಜನರಿಗೆ ಕೊರೋನಾ ಬಂದಿದೆ. ಇಲ್ಲಿಯವರೆಗೆ 104 ಜನರಿಗೆ ಪಾಸಿಟೀವ್ ಬಂದಿದೆ.
ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಲ್ಲಿ ಕೊರೊನಾ ಶಂಕೆ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡಕ್ಕೆ ಆಘಾತ ಎದುರಾಗಿದೆ. ಹೊನ್ನಾವರ, ಮುಂಡಗೋಡಿಗೂ ಕೊರೊನಾ ಎಂಟ್ರಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಾಸನಕ್ಕೆ ಕೊರೊನಾ ಹೊತ್ತು ತಂದಿದ್ದಾರೆ ಕಾರ್ಮಿಕರು. ಮುಂಬೈನಿಂದ ಬಂದ ನಾಲ್ವರಿಗೆ ಪಾಸಿಟೀವ್ ಬಂದಿದೆ ಎನ್ನಲಾಗಿದೆ. ಹಾಸನದಲ್ಲಿ ಸೋಂಕಿತರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.
ಬಳ್ಳಾರಿಯ ಸತ್ಯನಾರಾಯಣ ಪೇಟೆಯ ವ್ಯಕ್ತಿಗೆ ಕೊರೋನಾ ಬಂದಿದೆ. ಸತ್ಯನಾರಾಯಣ ಪೇಟೆಯ 6 ನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ. ಇಡೀ ಏರಿಯಾವನ್ನು ಕಂಪ್ಲೀಟ್ ಸ್ಯಾನಿಟೈಸ್ ಮಾಡಲಾಗಿದೆ.