ದುಬೈಯಿಂದ 52 ಮಂದಿಯ ಮೊದಲ ತಂಡ ಉಡುಪಿಗೆ

By Kannadaprabha NewsFirst Published May 14, 2020, 7:43 AM IST
Highlights

ಕೊರೋನಾ ಲಾಕ್‌ಡೌನ್‌ನಿಂದಾಗಿ ಊರಿಗೆ ಬರಲಾಗದೆ ದುಬೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 52 ಮಂದಿ ಮೊದಲ ಹಂತದಲ್ಲಿ ಬುಧವಾರ ಮುಂಜಾನೆ ಉಡುಪಿ ತಲುಪಿದ್ದಾರೆ. ತಕ್ಷಣ ಅವರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಉಡುಪಿ(ಮೇ 14): ಕೊರೋನಾ ಲಾಕ್‌ಡೌನ್‌ನಿಂದಾಗಿ ಊರಿಗೆ ಬರಲಾಗದೆ ದುಬೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 52 ಮಂದಿ ಮೊದಲ ಹಂತದಲ್ಲಿ ಬುಧವಾರ ಮುಂಜಾನೆ ಉಡುಪಿ ತಲುಪಿದ್ದಾರೆ. ತಕ್ಷಣ ಅವರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಮಧ್ಯರಾತ್ರಿಯ ಹೊತ್ತಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಲ್ಲಿಯೇ ವಿಶೇಷ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಅವರಿಗೆ ಹಣ ವರ್ಗಾವಣೆ, ಸಿಮ್‌ ವಿತರಣೆ, ಆರೋಗ್ಯ ಕಿಟ್‌ ವಿತರಣೆ, ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಕ್ವಾರಂಟೈನ್‌ ಸ್ಟಾಂಪಿಂಗ್‌ ಮಾಡಿ, ಇಮಿಗ್ರೇಷನ್‌ ಪ್ರಕ್ರಿಯೆ ನಡೆಸಲಾಯಿತು.

ಕೊರೋನಾಕ್ಕೆ ಬೆಚ್ಚಿ ಬಿದ್ದ ಜನ ಈಗ ಡೆಂಘೀ ಜ್ವರಕ್ಕೆ ತತ್ತರ..!

ನಂತರ ಅವರ ವಿವರಗಳನ್ನು ದಾಖಲಿಸಿಕೊಂಡು ವಿಶೇಷ ಬಸ್ಸುಗಳಲ್ಲಿ ಉಡುಪಿಗೆ ಕರೆ ತರಲಾಯಿತು. ಅವರು ದುಬೈಯಲ್ಲಿರುವಾಗಲೇ ಆನ್‌ಲೈನ್‌ನಲ್ಲಿಯೇ ಹೊಟೇಲ್‌ ಕ್ವಾರಂಟೈನ್‌ ಅಥವಾ ಸರ್ಕಾರಿ ಕ್ವಾರಂಟೈನ್‌ ಆಯ್ಕೆ ಮಾಡಿಕೊಂಡಿದ್ದರು.

ಅದರಂತೆ 9 ಮಂದಿಗೆ ಜಿಲ್ಲಾಡಳಿತ ಸರ್ಕಾರದ ಖರ್ಚಿನಲ್ಲಿ ಮಾಡಿರುವ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಉಳಿದ 43 ಮಂದಿ ಖಾಸಗಿ ಹೊಟೇಲುಗಳಲ್ಲಿ ಕ್ವಾರಂಟೈನ್‌ಗೆ ಬಯಸಿದ್ದು, ಅದರ ಖರ್ಚುವೆಚ್ಚಗಳನ್ನು ಅವರೇ ಭರಿಸುವ ಷರತ್ತಿನೊಂದಿಗೆ ಹೊಟೇಲುಗಳಲ್ಲಿ ಕ್ವಾರಂಟೈನ್‌ಗೆ ಕಳಹಿಸಲಾಗಿದೆ.

'ಮಹಾಪ್ರಭುಗಳೇ ನೀವೇನು ಇಲ್ಲಿ' ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ

ಉಡುಪಿ ಜಿಲ್ಲೆಗೆ ಬಂದ 52 ಮಂದಿಯಲ್ಲಿ ಬೈಂದೂರು ತಾಲೂಕಿನ 8, ಕುಂದಾಪುರದ 11, ಬ್ರಹ್ಮಾವರದ 3, ಉಡುಪಿಯ 11, ಕಾಪುವಿನ 16 ಮತ್ತು ಕಾರ್ಕಳದ 3 ಮಂದಿ ಇದ್ದರು. ಅವರನ್ನೆಲ್ಲ ಆಯಾಯ ತಾಲೂಕುಗಳಲ್ಲಿಯೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ 14 ದಿನಗಳ ಕಾಲ ಅವರು ಯಾರನ್ನೂ ಭೇಟಿಯಾಗುವಂತಿಲ್ಲ, ಮನೆಯವರೂ ಅವರನ್ನು ನೋಡುವುದಕ್ಕೂ ಅವಕಾಶ ಇಲ್ಲ.

click me!