ಯಾದಗಿರಿ: ಮರಳು ತುಂಬಿದ್ದ ಲಾರಿ ಹರಿದು 51 ಕುರಿಗಳ ಸಾವು

Suvarna News   | Asianet News
Published : Dec 20, 2019, 10:05 AM IST
ಯಾದಗಿರಿ: ಮರಳು ತುಂಬಿದ್ದ ಲಾರಿ ಹರಿದು 51 ಕುರಿಗಳ ಸಾವು

ಸಾರಾಂಶ

ಲಾರಿ ಹರಿದು 51 ಕುರಿಗಳ ಸಾವು| ಸುರಪುರ ತಾಲೂಕಿನ ತಿಂಥಣಿ ಬ್ರೀಜ್ ಬಳಿ ನಡೆದ ಘಟನೆ|ಕುರಿಗಳನ್ನ ಸೇತುವೆ ದಾಟಿಸುತ್ತಿದ್ದಾಗ ನಡೆದ ದುರ್ಘಟನೆ| ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಭೇಟಿ ಪರಿಶೀಲನೆ|

ಯಾದಗಿರಿ[ಡಿ.20]: ಮರಳು ಲಾರಿಯೊಂದು ಹರಿದ ಪರಿಣಾಮ 51 ಕುರಿಗಳ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬ್ರೀಜ್ ಬಳಿ ಘಟನೆ ಇಂದು[ಶುಕ್ರವಾರ] ನಡೆದಿದೆ. 

ಕುರಿಗಳನ್ನ ಸೇತುವೆ ದಾಟಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ಥಳದಲ್ಲಿ 51 ಕುರಿ ಮೃತಪಟ್ಟಿದ್ದು 15 ಕುರಿಗಳಿಗೆ ಗಾಯವಾಗಿದೆ. ಭೀಮಣ್ಣ ಹೊಸಮನಿ, ದ್ಯಾಮಣ್ಣ ಹೊಸಮನಿ ಎಂಬವವರಿಗೆ ಸೇರಿದ ಕುರಿಗಲಾಗಿವೆ. ಕುರಿಗಾಯಿಗಳು ಹುಣಸಗಿ ತಾಲೂಕಿನ ಕಮಲಾಪುರದಿಂದ ದೇವದುರ್ಗಕ್ಕೆ ತೆರಳುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆ ಬಳಿಕ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ