ಚಾಮರಾಜನಗರ: ಬಂಡಿಪುರ ಹುಲಿ ರಕ್ಷಿತಾರಣ್ಯಕ್ಕೆ 50 ಸಂಭ್ರಮ

By Girish GoudarFirst Published Nov 9, 2022, 2:30 AM IST
Highlights

1973 ರಲ್ಲಿ ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು.

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ(ನ.09): ಅದು ದೇಶದ ಮೊದಲ ಹುಲಿ ರಕ್ಷಿತಾರಣ್ಯ.ಆ ಅರಣ್ಯಕ್ಕಿಗ 50 ವರ್ಷದ ಸಂಭ್ರಮ. ಹುಲಿಗಳು ಭಾರತದಲ್ಲಿ ಅಳಿವಿನಂಚಿನಲ್ಲಿದ್ದ ಪ್ರಾಣಿ. ಆದ್ರೀಗ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೇವಲ 13 ಹುಲಿಗಳಿದ್ದ ಆ ಅರಣ್ಯದಲ್ಲಿಗ 140 ಕ್ಕೂ ಹೆಚ್ಚು ಹುಲಿಗಳ ಆವಾಸಸ್ಥಾನವಾಗಿದೆ. ಅತಿಹೆಚ್ಚು ಹುಲಿಗಳ ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅರಣ್ಯ, ಹುಲಿರಕ್ಷಿತಾರಣ್ಯವಾಗಿ 50 ನೇ ವಸಂತಕ್ಕೆ ಕಾಲಿಟ್ಟಿದೆ. ಹೌದು, 1973 ರಲ್ಲಿ ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು. ಅಂದು ಹುಲಿ ರಕ್ಷಿತಾರಣ್ಯವಾಗುವ ಸಂದರ್ಭದಲ್ಲಿ ಇಡೀ 1200 ಚದರ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿದಿದ್ದು ಕೇವಲ 10 ರಿಂದ 13 ಹುಲಿಗಳಷ್ಟೆ ಎಂದು ಅಂದಾಜು ಮಾಡಲಾಗಿತ್ತು. ಇದಾದ ಬಳಿಕ ಉತ್ತಮವಾದ ಸಂರಕ್ಷಣೆಯಿಂದ ಇದೀಗ ಬಂಡೀಪುರದಲ್ಲಿ 140 ಕ್ಕೂ ಹೆಚ್ಚು ಹುಲಿಗಳಿದೆ ಅಂತ ಕಳೆದ ಹುಲಿಗಣತಿ ವೇಳೆ ಅಂದಾಜು ಮಾಡಲಾಗಿದೆ. ಈ ಹುಲಿಗಳ ಉಳಿಸುವುದೆ ಹಿಂದೆ ದೊಡ್ಡ ಸವಲಾಗಿತ್ತು. ಆದ್ರೀಗಾ ಹುಲಿಗಳ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದ್ರಲ್ಲೂ ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿದೆ. ಹಾಗೆ ಮಲೈ ಮಹದೇಶ್ವರ ವನ್ಯಜೀವಿ ಧಾಮ ಕೆಲವೆ ದಿನಗಳಲ್ಲಿ ರಕ್ಷಿತಾರಣ್ಯ ಆಗುವ ನಿರೀಕ್ಷೆ ಕೂಡ ಇದೆ. ಅದಷ್ಟೆ ಅಲ್ಲದೆ ಉತ್ತಮವಾದ ಸಂರಕ್ಷಣೆಯಿಂದ ಕಾಡಿನಲ್ಲಿ ಪ್ರಾಣಿಗಳ ಭೇಟೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ. ಇದೀಗ ಹುಲಿಗಳಂತ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೇ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿಯೇ ಚಾಮರಾಜನಗರ ಜಿಲ್ಲೆಯನ್ನ ಹುಲಿಗಳ ನಾಡು ಎಂದು ಕರೆಯಲು ಕಾರಣವಾಗಿದೆ. 

CHAMARAJANAGAR : ಅರೇಪುರ - ತೊಂಡವಾಡಿ ಗೇಟ್‌ ನಡುವೆ ರಸ್ತೆ ಕುಸಿತ

ಬಂಡೀಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಇನ್ನು ಹುಲಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಅಂದ್ರೆ ಸಂರಕ್ಷಣೆ ವಿಚಾರವಾಗಿ ಅರಣ್ಯ ಇಲಾಖೆ ತೆಗೆದುಕೊಂಡ ಹೆಜ್ಜೆಗಳ. ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಬೇಟೆಗಾರರು ಮೇಲೆ ಇಲಾಖೆ ಸಾಕಷ್ಟು ನಿಗ ಇಟ್ಟಿತು. ಇದ್ರಿಂದ ಹುಲಿಗಳ ಸಂಖ್ಯೆ ಹೆಚ್ಚಾಯ್ತು. ಅದ್ರಲ್ಲೂ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲೆಗೆ ವಿಶೇಷ ಗರಿಮೂಡಿದಂತಾಗಿದೆ. ಈ ರೀತಿ ಹುಲಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದಲೇ ಬಂಡೀಪುರಕ್ಕೆ ಬರುವಂತ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಬರುವಂತ ಪ್ರವಾಸಿಗರು ಬಂಡೀಪುರದಲ್ಲಿ ಸಫಾರಿ ಮಾಡಿ ಎಂಜಾಯ್ ಮಾಡಿ ಹೋಗುತ್ತಿದ್ದಾರೆ. ಆದ್ರೆ ಪರಿಸರವಾದಿಗಳು ಮಾತ್ರ ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ. ಬಂಡೀಪುರ ಹುಲಿ ರಕ್ಷಿತಾರಣ್ಯವಾಗಿ 50 ವರ್ಷ ಪೂರೈಕೆಯಾಗಿದೆ ಇದು ಖುಷಿಯ ವಿಚಾರ. ಆದ್ರೆ ಜನರಿಗೆ ಕಾಡಿನ ಮಾಹತ್ವ ಅಥವ ಸಂರಕ್ಷಣೆಯ ಮಹತ್ವ ಬಗ್ಗೆ ತಿಳಿಸಲು ವಿಫಲವಾಗಿದ್ದಾರೆ. ಕೇವಲ ಅಂಕಿಗಳಿಗಷ್ಟೆ ಮಹತ್ವಕೊಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ಜನರಿಗೆ ಕಾಡಿನ ಪರಿಚಯ ಮಾಡುವತ್ತ ಕೆಲಸ ಮಾಡಲಿ ಎನ್ನುವ ಸಲಹೆ ನೀಡುತ್ತಿದ್ದಾರೆ. 

ಒಟ್ಟಾರೆ, ದೇಶದ ಮೊದಲ ಹುಲಿರಕ್ಷಿತಾರಣ್ಯಕ್ಕೆ 50 ವರ್ಷ ಪೂರೈಕೆಯಾಗಿರೋದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಚಾರವೆ. ಹೀಗೆ ಪರಿಸರ ಸಂರಕ್ಷಣೆ ಕಾರ್ಯ ಮುಂದುವರೆದು ನಮ್ಮ ಸಂಪತ್ತನ್ನ ಮುಂದಿನ ಪೀಳಿಗೆಗು ಉಳಿಸುವ ಕೆಲಸವಾಗಲಿ ಎಂಬುದೆ ನಮ್ಮ ಆಶಯ. 
 

click me!