
ಕಲಬುರಗಿ(ಆ.31): ಪರವಾನಗಿ ಪಡೆಯದೆ ಫ್ಲೆಕ್ಸ್ ಹಾಕಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಹಾನಗರ ಪಾಲಿಕೆ 5 ಸಾವಿರ ರುಪಾಯಿ ದಂಡ ವಿಧಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಸ್ವಾಗತ ಕೋರಿ ಆಳಂದ ಚೆಕ್‌ಪೋಸ್ವ್ ಬಳಿ ಬೆಂಬಲಿಗರು ಅನುಮತಿ ಪಡೆಯದೆ ಬ್ಯಾನರ್ ಹಾಕಿದ್ದರು. ಬ್ಯಾನರ್‌ನಲ್ಲಿ ಅದನ್ನು ಹಾಕಿದವರ ಹೆಸರು, ವಿವರ ಇರದ ಹಿನ್ನೆಲೆಯಲ್ಲಿ ಕಲಬುರಗಿ ಪಾಲಿಕೆಯವರು ಸಚಿವರಿಗೆ ದಂಡ ವಿಧಿಸಿದ್ದಾರೆ.
ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ: ಸಚಿವ ಪ್ರಿಯಾಂಕ್ ಖರ್ಗೆ
ದಂಡದ ಹಣ ಪಾವತಿಸಲು ಒಪ್ಪಿಕೊಂಡಿರೋ ಪ್ರಿಯಾಂಕ್ ಖರ್ಗೆ ತಮ್ಮ ಸಿಬ್ಬಂದಿ ಮೂಲಕ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಪರವಾನಗಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಕ್ಕೆ ಸೂಚಿಸಿ ಪ್ರಿಯಾಂಕ್ ಖರ್ಗೆ ಅವರು ಪಾಲಿಕೆಗೆ ಆದೇಶಿಸಿದ್ದರು. ಇದೀಗ ಪಾಲಿಕೆ ಸಿಬ್ಬಂದಿ ಅವರಿಗೇ ದಂಡ ವಿಧಿಸಿ ಗಮನ ಸೆಳೆದಿದೆ.