National highway-48: ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್‌ ಶಿಸ್ತು ಪಾಲಿಸದಿದ್ದರೆ ₹500 ದಂಡ

By Kannadaprabha News  |  First Published Mar 2, 2023, 11:57 AM IST

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ, ಬಸ್‌ ಇತ್ಯಾದಿ ಭಾರೀ ಸರಕು ಸಾಗಣೆ ವಾಹನಗಳಿಗೆ, ಕಾರು ಮುಂತಾದ ಲಘು ವಾಹನಗಳು ಯಾವ ಲೇನ್‌ನಲ್ಲಿ ಸಾಗಬೇಕು ಎಂಬ ನಿಯಮವಿದೆ. ಆದರೆ, ಇದನ್ನು ಈ ವರೆಗೆ ಯಾರೂ ಲೆಕ್ಕಿಸುತ್ತಿರಲಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇನ್ನು ಮುಂದೆ ನಿಗದಿಪಡಿಸಿದ ಲೇನ್‌ನಲ್ಲಿ ವಾಹನಗಳು ಸಂಚರಿಸದಿದ್ದರೆ ದಂಡ ಬೀಳುವುದು ನಿಶ್ಚಿತ.


ವಿಶೇಷ ವರದಿ

ಹಾವೇರಿ (ಮಾ.2) : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ, ಬಸ್‌ ಇತ್ಯಾದಿ ಭಾರೀ ಸರಕು ಸಾಗಣೆ ವಾಹನಗಳಿಗೆ, ಕಾರು ಮುಂತಾದ ಲಘು ವಾಹನಗಳು ಯಾವ ಲೇನ್‌ನಲ್ಲಿ ಸಾಗಬೇಕು ಎಂಬ ನಿಯಮವಿದೆ. ಆದರೆ, ಇದನ್ನು ಈ ವರೆಗೆ ಯಾರೂ ಲೆಕ್ಕಿಸುತ್ತಿರಲಿಲ್ಲ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇನ್ನು ಮುಂದೆ ನಿಗದಿಪಡಿಸಿದ ಲೇನ್‌ನಲ್ಲಿ ವಾಹನಗಳು ಸಂಚರಿಸದಿದ್ದರೆ ದಂಡ ಬೀಳುವುದು ನಿಶ್ಚಿತ.

Tap to resize

Latest Videos

undefined

ರಾಷ್ಟ್ರೀಯ ಹೆದ್ದಾರಿ 48(NH-48)ರಲ್ಲಿ ಪೊಲೀಸ್‌ ಇಲಾಖೆ(police depertment) ಕಣ್ಗಾವಲು ಹಾಕಿದೆ. ಹೆದ್ದಾರಿಯಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾ(CC Camera) ಅಳವಡಿಸಿದ್ದು, ಲೇನ್‌ ನಿಯಮ ಪಾಲಿಸದೆ ಯಾವುದೋ ಬೇರೆ ಲೇನ್‌ಗಳಲ್ಲಿ ಸಂಚರಿಸುವ ವಾಹನಗಳಿಗೆ . 500 ದಂಡ ವಿಧಿಸಲು ಉದ್ದೇಶಿಸಲಾಗಿದೆ. ಹೆದ್ದಾರಿಯಲ್ಲಿ ಇನ್ನು ಮುಂದೆ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವಂತಿಲ್ಲ. ವಾಹನಗಳಿಗೆ ನಿಗದಿಪಡಿಸಿದ ಲೇನ್‌ನಲ್ಲೇ ಚಲಾಯಿಸಬೇಕು. ಅಪ್ಪಿ ತಪ್ಪಿಯು ಬೇರೆ ಮಾರ್ಗಕ್ಕೆ ಹೋದರೆ ಅಂಥ ವಾಹನಗಳಿಗೆ ದಂಡ ಬೀಳುತ್ತದೆ.

Pune-Bengaluru Highway: ಪುಣೆಯಲ್ಲಿ ಭಾರಿ ಅಪಘಾತ, ಟ್ಯಾಂಕರ್‌ ಬಡಿದು 48 ವಾಹನಗಳು ಜಖಂ!

ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ:

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48(Pune-Bengaluru National highway) ಈಗ ಷಟ್ಪಥವಾಗಿದೆ. ಹೆದ್ದಾರಿಯಲ್ಲಿ ನಿತ್ಯ ಹತ್ತಾರು ಸಾವಿರ ವಾಹನ ಸಂಚರಿಸುತ್ತವೆ. ಹೆದ್ದಾರಿ ಅಗಲೀಕರಣವಾಗಿದ್ದರೂ ಅಲ್ಲಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಅತಿಯಾದ ವೇಗ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆಯಾಗಿದೆ. ಇದಕ್ಕೆ ಬ್ರೇಕ್‌ ಹಾಕಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಹಾವೇರಿ ಜಿಲ್ಲೆಯ ಚಳಗೇರಿ ಟೋಲ್‌ ನಾಕಾದಿಂದ ಶಿಗ್ಗಾಂವಿ ತಾಲೂಕಿನ ಹೊನ್ನಾಪುರದವರೆಗೆ ಹೆದ್ದಾರಿಯಲ್ಲಿ ಸ್ವಯಂ ಚಾಲಿತ ನಂಬರ್‌ ಪ್ಲೇಟ್‌ ಗುರುತಿಸುವ 35 ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಹೆದ್ದಾರಿಯಲ್ಲಿ ನಿಗದಿಪಡಿಸಿದ ಲೇನ್‌ನಲ್ಲಿ ಆಯಾ ವಾಹನ ಸಂಚರಿಸಬೇಕು. ಲೇನ್‌ ಬಿಟ್ಟು ಬೇರೆ ಕಡೆ ಸಂಚರಿಸಿ ನಿಯಮ ಉಲ್ಲಂಘಿಸುವ ವಾಹನಗಳನ್ನು್ನ ಈ ಕ್ಯಾಮೆರಾಗಳು ಸೆರೆ ಹಿಡಿಯುತ್ತವೆ.

ನಿಯಮವೇನು?

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿ ಜಾಗವಿದೆಯೋ ಅಲ್ಲಿ ವಾಹನ ನುಗ್ಗಿಸುವುದು ಬಹುತೇಕ ಚಾಲಕರಿಗೆ ರೂಢಿ. ಭಾರೀ ವಾಹನಗಳು ಕಾರು ಇತ್ಯಾದಿ ಲಘು ವಾಹನ ಸಂಚರಿಸುವ ಮೊದಲ ಲೇನ್‌ನಲ್ಲೇ ಇರುತ್ತವೆ. ಆಗ ಅನಿವಾರ್ಯವಾಗಿ ಕಾರು ಚಾಲಕರು ಮಧ್ಯದ ಅಥವಾ ಕೊನೆಯ ಲೇನ್‌ನಲ್ಲಿ ಹೋಗುತ್ತಾರೆ. ಹೆದ್ದಾರಿಯ ಮೊದಲ ಲೇನ್‌ ಕಾರು, ಜೀಪು ಸೇರಿದಂತೆ ಲಘು ವಾಹನಗಳಿಗೆ ಮೀಸಲಾಗಿದೆ. ಲೇನ್‌ ಎರಡರಲ್ಲಿ ಬಸ್‌, ಟ್ರಕ್‌ಗಳಿಗೆ, ಲೇನ್‌ 3ರಲ್ಲಿ ಭಾರೀ ಗಾತ್ರದ ಹಾಗೂ ಸರಕು ಸಾಗಣೆ ವಾಹನಗಳು ಸಂಚರಿಸಬೇಕು. ಹೆದ್ದಾರಿಗಳಲ್ಲಿ ಈ ಬಗ್ಗೆ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಆದರೂ ಇದನ್ನು ಚಾಲಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಇನ್ನು ಮುಂದೆ ಲೇನ್‌ ನಿಯಮ ಉಲ್ಲಂಘಿಸುವವರಿಗೆ ಪೊಲೀಸ್‌ ಇಲಾಖೆ ಬಿಸಿ ಮುಟ್ಟಿಸಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 35 ಕಡೆ ಸ್ವಯಂ ಚಾಲಿತ ನಂಬರ್‌ ಪ್ಲೇಟ್‌ ಗುರುತಿಸುವ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಸಂಚಾರಿ ನಿಯಮ ಪಾಲನೆ ಹಾಗೂ ರಸ್ತೆ ಆಪಘಾತ ಕಡಿಮೆ ಮಾಡಲು ಜಿಲ್ಲಾ ಪೊಲೀಸ್‌ ಇಲಾಖೆ ಮುಂದಾಗಿದೆ. ಇದಕ್ಕೆ ವಾಹನ ಚಾಲಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Pune Bangalore Expressway: ಊರಿಲ್ಲದ ಜಾಗದಲ್ಲಿ ಸಾಗುವ ಹೆದ್ದಾರಿ!

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿಪಡಿಸಿದ ಲೇನ್‌ನಲ್ಲಿ ವಾಹನಗಳು ಸಂಚರಿಸಬೇಕು ಎಂಬ ನಿಯಮವನ್ನು ಬಹುತೇಕ ಚಾಲಕರು ಪಾಲಿಸುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿ ಹೆದ್ದಾರಿಯ ವಿವಿಧೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಲೇನ್‌ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ.

ಡಾ. ಶಿವಕುಮಾರ ಗುಣಾರೆ, ಎಸ್ಪಿ ಹಾವೇರಿ

click me!