ಫಾಸ್ಟ್ಯಾಗ್‌ ರೀಜಾರ್ಜ್ ಹೆಸರಲ್ಲಿ 50 ಸಾವಿರ ಎಗರಿಸಿದ ಕಳ್ಳ!

By Kannadaprabha NewsFirst Published Jan 19, 2020, 7:41 AM IST
Highlights

 ಸೈಬರ್‌ ಕ್ರೈಂ ಕಿಡಿಗೇಡಿಗಳು ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಇದೀಗ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ವ್ಯಕ್ತಿಯೊಬ್ಬರಿಂದ 50 ಸಾವಿರ ಎಗರಿಸಿದ್ದಾರೆ. 

ಬೆಂಗಳೂರು [ಜ.19]:  ಫಾಸ್ಟ್‌ಟ್ಯಾಗ್‌ ಕಡ್ಡಾಯ ಆದೇಶವನ್ನೇ ದುರ್ಬಳಕೆ ಮಾಡಿಕೊಂಡ ಸೈಬರ್‌ ಕ್ರೈಂ ಕಿಡಿಗೇಡಿಗಳು, ಈಗ ಬ್ಯಾಂಕ್‌ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ 50 ಸಾವಿರ ರು. ದೋಚಿದ್ದಾರೆ.

ಬಾಬುಸಾ ಪಾಳ್ಯದ ರಾಹುಲ್‌ ಎಂಬುವರೇ ವಂಚನೆಗೊಳಗಾಗಿದ್ದು, ಕೆಲ ದಿನಗಳ ಹಿಂದೆ ರಾಹುಲ್‌ ಮೊಬೈಲ್‌ ಕರೆ ಮಾಡಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ.11ರಂದು ರಾಹುಲ್‌ ಮೊಬೈಲ್‌ಗೆ ಫಾಸ್ಟ್‌ಟ್ಯಾಗ್‌ ರಿಚಾರ್ಜ್ ಸಮಸ್ಯೆ ಪರಿಹರಿಸಿಕೊಳ್ಳಲು ಕರೆ ಮಾಡುವಂತೆ ಬ್ಯಾಂಕ್‌ ಸಹಾಯವಾಣಿ ಸಂದೇಶ ಬಂದಿತ್ತು. ಎರಡು ದಿನಗಳ ಬಳಿಕ ರಾಹುಲ್‌ ಮೊಬೈಲ್‌ಗೆ ಕರೆ ಮಾಡಿದ ಆರೋಪಿ, ಆಕ್ಸಿಸ್‌ ಬ್ಯಾಂಕ್‌ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ಫಾಸ್ಟ್‌ಟ್ಯಾಗ್‌ ರಿಚಾರ್ಜ್ ಮಾಡಲು ನಿಮ್ಮ ಮೊಬೈಲ್‌ಗೆ ಸರ್ಪೋಟ್‌ ಆಗುವಂತೆ ಒಂದು ಲಿಂಕ್‌ ಕಳುಹಿಸುತ್ತೇವೆ. ಅದರ ಮೇಲೆ ಕ್ಲಿಕ್‌ ಮಾಡಿ ಯುಪಿಎ ಪಿನ್‌ ನಮೂದಿಸಿ ಕಳುಹಿಸುವಂತೆ’ ಸೂಚಿಸಿದ್ದಾನೆ.

ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಕೇಂದ್ರದಿಂದ ಸಿಹಿ ಸುದ್ದಿ..!...

ಬ್ಯಾಂಕ್‌ ಅಧಿಕಾರಿ ಇರಬೇಕೆಂದು ನಂಬಿದ ರಾಹುಲ್‌, ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಯುಪಿಎ ನಮೂದಿಸಿ ಕಳುಹಿಸಿದಾಗ .5 ಸಾವಿರ ಬ್ಯಾಂಕ್‌ ಖಾತೆಯಿಂದ ಕಡಿತವಾಗಿದೆ. ತಕ್ಷಣ ಎಚ್ಚೆತ್ತ ರಾಹುಲ್‌, ಕರೆ ಮಾಡಿ ವಿಚಾರಿಸಿದಾಗ ವಾಪಸ್‌ ಕೊಡುತ್ತೆವೆ. ಲಿಂಕ್‌ನಲ್ಲಿ ಇರುವ ಫಾಮ್‌ರ್‍ ತುಂಬಿ ಮತ್ತೊಮ್ಮೆ ಕಳುಹಿಸುವಂತೆ ಸೂಚಿಸಿದ್ದಾರೆ. ಆಗಲೂ ನಂಬಿದ ರಾಹುಲ್‌, ಆತ ಹೇಳಿದಂತೆ ಮಾಡಿದಾಗ ಹಂತ ಹಂತವಾಗಿ .50 ಸಾವಿರ ಕಳವಾಗಿದೆ. ಕೊನೆಗೆ ವಂಚನೆಗೆ ಒಳಗಾಗಿರುವುದು ಖಚಿತವಾಗಿ ರಾಹುಲ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಹೆಣ್ಣೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

click me!