ಕೇವಲ 50 ಸಾವಿರದಲ್ಲಿ ಇಂಜಿನಿಯರಿಂಗ್ ಶಿಕ್ಷಣ

Kannadaprabha News   | Asianet News
Published : Nov 06, 2020, 10:07 AM IST
ಕೇವಲ 50 ಸಾವಿರದಲ್ಲಿ ಇಂಜಿನಿಯರಿಂಗ್ ಶಿಕ್ಷಣ

ಸಾರಾಂಶ

ಕೇವಲ 50 ಸಾವಿರದಲ್ಲಿ ವಿದ್ಯಾರ್ಥಿಗಳು ಇಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಳ್ಳಬಹುದು. 

ತಿಪಟೂರು (ನ.06):  ಕೋವಿಡ್‌-19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗರದ ಎಸ್‌ಬಿಐಟಿ ಇಂಜಿನಿಯರಿಂಗ್‌ ಕಾಲೇಜು ಅತಿ ಕಡಿಮೆ ಪ್ರಮಾಣದ ಶುಲ್ಕದಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ನೀಡಲು ಮುಂದಾಗಿದೆ.

ಕಾಲೇಜಿನಲ್ಲಿ ಬೋಧಿಸಲಾಗುವ 5 ಬ್ರಾಂಚ್‌ಗಳಿಗೂ 2020-21ನೇ ಸಾಲಿಗೆ ಇಂಜಿನಿಯರಿಂಗ್‌ ಪದವಿಗೆ ಪ್ರವೇಶಾತಿ ಪಡೆಯಲು ಬಯಸುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು 2 ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದೆ. ಅಲ್ಲದೆ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಉಚಿತವಾಗಿ ಪ್ರವೇಶಾತಿ ನೀಡಲಾಗುತ್ತಿದೆ.

ಆಂಧ್ರ ಆಯ್ತು.. ಕಾಲೇಜು ಆರಂಭಕ್ಕೆ ಡೇಟ್ ಫಿಕ್ಸ್, ಕೆಲ ಕಂಡಿಶನ್!

ಈ ಬಗ್ಗೆ ಮಾಹಿತಿ ನೀಡಿದ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಯಣ್ಣ ಕಂಚಿಕೆರೆ, ಈ ಸೌಲಭ್ಯದ ಜೊತೆಗೆ ಹಾಸ್ಟೆಲ್‌, ಬಸ್‌ ವ್ಯವಸ್ಥೆ, ಕ್ಯಾಂಟೀನ್‌, ಆಧುನಿಕ ಪ್ರಯೋಗಾಲಯ, ಹಾಗೂ ಅನುಭವಿ, ನುರಿತ ಪ್ರಾಧ್ಯಾಪಕ ವೃಂದವನ್ನು ಕಾಲೇಜು ಹೊಂದಿದೆ ಎಂದು ತಿಳಿಸಿದ್ದಾರೆ.

PREV
click me!

Recommended Stories

ಹೆಗಡೆ ಪುತ್ರನ ಪಾಸ್‌ಪೋರ್ಟ್‌ಗೆ ಅಡ್ಡಿಯಾದ ರಸ್ತೆ ಗಲಾಟೆ, ಹೈಕೋರ್ಟ್‌ಗೆ ಅನಂತ್ ಮನವಿ, ಏನಿದು ಪ್ರಕರಣ?
Karnataka news live: ಸಂಪುಟ ಪುನಾರಚನೆಗೆ ತೀವ್ರ ಒತ್ತಡ: 25 ಶಾಸಕರು ದೆಹಲಿಗೆ