50 ಮುಖಂಡರು ಕಾಂಗ್ರೆಸ್ ಸೇರ್ಪಡೆ : ಮೆಲಿಂದ ಮೇಲಿಂದ ಹೆಚ್ಚಾದ ಕೈ ಒಲವು

By Kannadaprabha NewsFirst Published Oct 2, 2021, 11:20 AM IST
Highlights
  • ಕಾಂಗ್ರೆಸ್ ಆಡಳಿತ ವಿಚಾರಗಳಿಗೆ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದೇವೆಂದ ಮುಖಂಡರು
  • 50 ಮುಖಂಡರು ಸಾಮೂಹಿಕವಾಗಿ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ 

 ಸುತ್ತೂರು (ಅ.02):  ವರುಣಾ ಕ್ಷೇತ್ರಕ್ಕೆ (Varuna Constituency) ಸೇರುವ ತೊರವಳ್ಳಿ ಗ್ರಾಮದಲ್ಲಿ ಈ ಹಿಂದಿನ ಕಾಂಗ್ರೆಸ್‌ (Congress) ಸರ್ಕಾರದ ಆಡಳಿತಾವಧಿಯಲ್ಲಿ ಮಾಡಿದ್ದ ಅಭಿವೃದ್ಧಿಯನ್ನು ಗಮನಿಸಿ ಸುಮಾರು 50ಕ್ಕೂ ಹೆಚ್ಚು ವೀರಶೈವ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ (Dr.Yathindra Siddaramaiah) ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಸರ್ಕಾರ ಬಡವರ ಪರ ಇರುವದನ್ನು ಬಿಟ್ಟು ದೊಡ್ಡ ದೊಡ್ಡ ಕಂಪೆನಿಗಳ ಪರ ನೀತಿ ರೂಪಿಸುವ ಮೂಲಕ ಶ್ರೀಮಂತರ ಪರ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ. ಈ ನಿಟ್ಟಿನಲ್ಲಿ ಬಡವರ ಪರ ನಿಲ್ಲುವ ಪಕ್ಷವೆಂದರೆ ಅದು ಕಾಂಗ್ರೇಸ್‌ ಪಕ್ಷ ಮಾತ್ರ. ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ (Election) ಎಲ್ಲರೂ ಕಾಂಗ್ರೆಸ್‌ ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಕಮಲದತ್ತ ಪ್ರಭಾವಿ ಕಾಂಗ್ರೆಸ್‌ ಮುಖಂಡ: ರಾಜಕೀಯದಲ್ಲಿ ಭಾರೀ ಸಂಚಲನ..!

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಸ್ವಾಮಿ, ಗ್ರಾಪಂ ಅಧ್ಯಕ್ಷೆ ಸವಿತಾ ಲೋಕೇಶ್‌, ನಾಗೇಶ್‌, ತಾಪಂ ಮಾಜಿ ಸದಸ್ಯ ಪದ್ಮನಾಭ, ಗುರುಸಿದ್ದಯ್ಯ, ಸೇರ್ಪಡೆಗೊಂಡ ಮುಖಂಡರಾದ ನಟರಾಜು, ಚಿನ್ನಸ್ವಾಮಿ, ವೀರಭದ್ರಸ್ವಾಮಿ, ಪರಶಿವಮೂರ್ತಿ, ಬಸವರಾಜು, ಬಸವಣ್ಣ, ರವಿಕುಮಾರ್‌, ಮರಿಸ್ವಾಮಿ, ರೇವಣ್ಣ, ಮಹದೇವಪ್ರಸಾದ್‌, ನಿರಂಜನ್‌, ಸಿದ್ದಮಲ್ಲಪ್ಪ, ಶಿವರುದ್ರಪ್ಪ, ಮಹದೇವಸ್ವಾಮಿ, ಮಂಚಪ್ಪ, ಪುಟ್ಟಣ್ಣ ಸೇರಿ ಹಲವರು ಇದ್ದರು.

ರೇವಣ್ಣ ಸಿಡಿಮಿಡಿ

ಜೆಡಿಎಸ್‌ (JDS) ನಾಯಕರು ಒಬ್ಬರಿಂದೊಬ್ಬರಂತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಇದರಿಂದ ಜೆಡಿಎಸ್ ನಾಯಕ ಎಚ್‌ಡಿ ರೇವಣ್ಣ (HD Revanna) ಕೆರಳಿದ್ದು, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ  ಮಾತನಾಡಿದ ರೇವಣ್ಣ, ಜೆಡಿಎಸ್‌ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಯತ್ನವಾಗ್ತಿದೆ. ಕಾಂಗ್ರೆಸ್‌ಗೆ ಈ ಸ್ಥಿತಿ ಬಂತು ಎಂದು ನನಗೆ ವ್ಯಥೆ ಆಗುತ್ತೆ ಎಂದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅತ್ತ ಮೈಸೂರಿನ ಹಿರಿಯ ಮುಖಂಡ ಜಿ ಟಿ ದೇವೇಗೌಡರು (GT Devegowda) ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಅಧಿಕೃತವಾಗಿಯೇ ಘೋಷಣೆ ಮಾಡಿದ್ದಾರೆ. ಇನ್ನು ಕೋಲಾರ ಶಾಸಕ ಶ್ರೀನಿವಾಸ  ಗೌಡರು (Shrinivas Gowda) ಶೀಘ್ರ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಾಳಯಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಇಬ್ಬರು ಮುಖಂಡರು ಸಹ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಹೊಂದಿದ್ದಾರೆ. ಅಲ್ಲದೇ ಇಗಾಗಲೇ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಮಾತುಕತೆನ್ನು ನಡೆಸಲಾಗಿದೆ.

click me!