ತಿಪಟೂರು (ಸೆ.02): ನಗರದ ನ್ಯಾಯಾಲಯದಲ್ಲಿ (Court) ಸೆ.30ರಂದು ನಡೆದ ಮೆಗಾ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಆಸ್ತಿ ವಿಚಾರಕ್ಕೆ ಸಂಬಂಧಸಿದ ಪ್ರಕರಣಗಳು, ಚೆಕ್ ಬೌನ್ಸ್ (Cheque Bounce) ಅಪಘಾತ, ವಿಮೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 4390 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.
ಅದಾಲತ್‌ನಲ್ಲಿ ಮುಖ್ಯವಾಗಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ (Civil Court) ವಿವಾಹ ವಿಚ್ಛೆದನಕ್ಕೆ (Divorce) ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ 2 ಜೋಡಿಗಳಾದ ಕಿರಣ್ ಮತ್ತು ತೇಜಸ್ವಿನಿ ಹಾಗು ಕೇಶವಮೂರ್ತಿ ಮತ್ತು ಗಾಯತ್ರಿ ಮತ್ತೆ ಒಟ್ಟಾಗಿ ಜೀವನ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ರಿಯೂನಿಯನ್ ಆಗಿ ಈ ಮೆಗಾ ಲೋಕ ಅದಲಾತ್‌ನಲ್ಲಿ ಒಂದಾದ ಘಟನೆ ನಡೆಯಿತು.
ಸಮಂತಾ-ನಗಚೈತನ್ಯ ವಿಚ್ಛೇದನೆ: ಸ್ಟಾರ್ ಜೋಡಿಗೆ ನಟಿ ಶ್ರೀರೆಡ್ಡಿ ಕಿವಿಮಾತಿದು
ಪ್ರಕರಣಗಳಿಗೆ ಹಿರಿಯ ವಕಿಲರಾದ ವೇಣು, ಎಚ್ ಎಲ್ ಸುಧಾಕರ್, ಭರತ್ರಾತ್, ಎಚ್ ಎಲ್ ಬಸವರಾಜು ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತವಾಯಿತು.
ಈ ರೀತಿಯ ಅನೇಕ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೂ (Mysuru) ಇದೇ ರೀತಿಯಾದ ಘಟನೆಯೊಂದು ನಡೆದಿತ್ತು.
ಗದಗದಲ್ಲಿಯೂ ಲೋಕ ಅದಾಲತ್ ನಲ್ಲೆ ಒಂದಾಗಿತ್ತು ಜೋಡಿ :
ಮದುವೆಯಾದ ಬಳಿಕ ವಿವಿಧ ಕಾರಣಗಳಿಂದ ದೂರವಿದ್ದು ಹಲವು ವರ್ಷಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳು ಗದಗ (Gadag) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಮತ್ತೊಮ್ಮೆ ಹೊಸ ಜೀವನಕ್ಕೆ ಕಾಲಿರಿಸಿದರು.
ವಿಧಿಯ ಆಟಕ್ಕೆ ಸಿಲುಕಿ ಬೇರೆ ಬೇರೆಯಾಗಿದ್ದ ಜೋಡಿಗಳು ಒಂದೆಡೆಯಾದರೆ ಮಕ್ಕಳು ಸಹ ತಂದೆ-ತಾಯಿ ಪ್ರೀತಿ ಸಿಗದೆ ಅನಾಥರಂತಾಗಿದ್ದರು. ಆದರೆ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್ ಇದಕ್ಕೆಲ್ಲ ಇತಿಶ್ರೀ ಹಾಡಿದ್ದು ದಂಪತಿಗಳನ್ನು ಒಂದಾಗಿಸಿ ಮಕ್ಕಳ ಸಂತಸಕ್ಕೂ ಕಾರಣವಾಗಿತ್ತು.
ಜಗಳವಾಡ್ತಾ ಬಾಲ್ಕನಿಯಿಂದ ಬಿದ್ರು ಗಂಡ-ಹೆಂಡತಿ
ಜಿಲ್ಲೆಯ ರವಿಕುಮಾರ ಸೊಪ್ತಿಮಠ ಹಾಗೂ ಕೊಪ್ಪಳ ಮೂಲದ ಪೂಜಾ 2014ರಲ್ಲಿ ಮದುವೆಯಾಗಿದ್ದರು. ಕೆಲ ವರ್ಷಗಳ ಕಾಲ ಜೀವನ ನಡೆಸಿದ್ದ ಇವರು ಎರಡು ಮಕ್ಕಳಾದ ಮೇಲೆ ಕೌಟುಂಬಿಕ ಕಲಹ ಉಂಟಾಗಿತ್ತು. ಮನೆಯಲ್ಲಿ ಅತ್ತೆ ಹಾಗೂ ನಾದನಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪತಿ ರವಿಕುಮಾರ ಅವರನ್ನು ಬಿಟ್ಟು ಪೂಜಾ ತವರುಮನೆ ಸೇರಿದ್ದರು. ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಆದರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ಪತಿ-ಪತ್ನಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ಮೆಗಾ ಲೋಕ್ ಅದಾಲತ್‌ನಲ್ಲಿ ಒಂದಾಗಿದ್ದರು.