ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಲವು ರೀತಿಯ ಕಟ್ಟೆಚ್ಚರ ಕ್ರಮ ಕೈಗೊಳ್ಳಲಾಗಿದೆ. ಜನ ಸಂಚಾರವೂ ಕಡಿಮೆಯಾಗಿದ್ದು, ಇದೀಗ ಹಲವೆಡೆ KSRTC ಬಸ್ ಸಂಚಾರ ಸ್ಥಗಿತವಾಗಿದೆ.
ಮಾ [ಮಾ.18]: ಕೊರೋನಾ ವೈರಸ್ ಕರಿನೆರಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೇಲೂ ಬಿದ್ದಿದೆ. ಇದರ ಪರಿಣಾಮ ಸಾರಿಗೆ ಸಂಸ್ಥೆಯ ಹಾಸನ ವಿಭಾಗ ಕಳೆದ 3 ದಿನಗಳಿಂದ 15 ಲಕ್ಷ ರು. ಗಳಿಗಿಂತಲೂ ಹೆಚ್ಚು ನಷ್ಟ ಅನುಭವಿಸಿದೆ.
ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದರಿಂದ 45 ರಿಂದ 50 ಬಸ್ ಸಂಚಾರವನ್ನು ಸ್ಥಗಿತಗೊಳಿ ಸಲಾಗಿದೆ. ಗ್ರಾಮಾಂತರ, ಅಂತರ ಜಿಲ್ಲೆಮತ್ತು ಅಂತರ ರಾಜ್ಯ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ನಗರ ಸಾರಿಗೆ ಬಸ್‌ಗಳನ್ನು ಸಹ! ಹೀಗೆ.. ಆರ್ಥಿಕವಾಗಿ ನಷ್ಟ ಆಗಲು ಮತ್ತು ಬಸ್‌ಗಳ ಸಂಚಾರ ಕಡಿಮೆ ಮಾಡಲು ಕಾರಣ ಜಿಲ್ಲೆಯೊಳಗಿನ ಕೊರೋನಾ ಭೀತಿ.
undefined
ಕೊರೋನಾ ಕಾಟಕ್ಕೆ ಸುಸ್ತಾದ ಜನ: ಊರಿಗೆ ಹೋಗಲು ಪ್ರಯಾಣಿಕರ ಹಿಂದೇಟು!...
ಜನರು ಹೊರಗೆ ಹೋಗುತ್ತಿಲ್ಲ ಮತ್ತು ಬೇರೆ ಜಿಲ್ಲೆ, ರಾಜ್ಯಗಳ ಜನರು ಎಂದಿನಂತೆ ಆಗಮಿಸುತ್ತಿಲ್ಲ. ತಿರುಪತಿ, ಶ್ರೀಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಇರುವ ಪುಣ್ಯ ಕ್ಷೇತ್ರಗಳಿಗೆ ಹೋಗುವ ಮತ್ತು ಬರುವ ಜನರು ಕಡಿಮೆ ಆಗಿರುವುದಲ್ಲದೇ, ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣಗಳಾದ ವಿಶ್ವ ವಿಖ್ಯಾತ ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ ಮತ್ತು ಸಕಲೇಶಪುರ ತಾಲೂಕಿನಲ್ಲಿ ಇರುವ ಸ್ಥಳಗಳನ್ನು ನೋಡಲು ಜನಾಗಮಿಸುತ್ತಿಲ್ಲ.
ಕೊರೋನಾ ಹರಡುವಿಕೆ ಬಗ್ಗೆ ಪ್ರಚಾರ ಹೆಚ್ಚಾದ ದಿನಗಳಿಂದಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿಮುಖವಾಗಿದೆ. ಶನಿವಾರದಿಂದ ಸೋಮ ವಾರ (ಮಾ.14 ರಿಂದ 16 ರವರೆಗೆ) ಸಾರಿಗೆ ಸಂಸ್ಥೆಯ ಹಾಸನ ವಿಭಾಗ ಬಸ್‌ಗಳ ಸಂಚಾರ ವನ್ನು ಹೆಚ್ಚು ಕಡಿತ ಮಾಡಲಾಗಿದೆ. ಏಕೆಂದ ರೇ, ಈ ೩ದಿನಗಳ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಆಗಿತ್ತು. ಶನಿವಾರ ಮತ್ತು ಭಾನುವಾರ ವಿಕೆಂಡ್. ಆದರೂ, ಕೊರೋನಾಗೆ ಬೆಚ್ಚಿ ಬಸ್‌ಗಳನ್ನು ಹತ್ತಿಲ್ಲ.