ಮದುವೆಗೆ ನಿರ್ಬಂಧ : ಕಲ್ಯಾಣ ಮಂಟಪಗಳಿಗೆ 50 ಕೋಟಿ ನಷ್ಟ!

Kannadaprabha News   | Asianet News
Published : Mar 14, 2020, 08:20 AM IST
ಮದುವೆಗೆ ನಿರ್ಬಂಧ : ಕಲ್ಯಾಣ ಮಂಟಪಗಳಿಗೆ 50 ಕೋಟಿ ನಷ್ಟ!

ಸಾರಾಂಶ

ಬೆಂಗಳೂರು ನಗರದಲ್ಲಿ ಸುಮಾರು 900ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ. ಜೊತೆಗೆ, ಒಂದು ಸಾವಿರಕ್ಕೂ ಹೆಚ್ಚು ಪಾರ್ಟಿ ಹಾಲ್‌ಗಳಿವೆ. ಈ ಹಾಲ್‌ಗಳಲ್ಲಿ ಈಗಾಗಲೇ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಶೇ.70 ರಷ್ಟುಕಲ್ಯಾಣ ಮಂಟಪಗಳು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಆದರೆ ಕಾರ್ಯಕ್ರಮ ರದ್ದಿನಿಂದ ಕೋಟ್ಯಂತರ ರು. ನಷ್ಟವಾಗಲಿದೆ.

ಬೆಂಗಳೂರು[ ಮಾ.14]:  ಕೊರೋನ ವೈರಸ್‌ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ವಿವಾಹ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಕಲ್ಯಾಣ ಮಂಟಪಗಳ ಮಾಲಿಕರಿಗೆ ಒಂದೇ ವಾರದಲ್ಲಿ ಅಂದಾಜು 50 ಕೋಟಿ ರು. ನಷ್ಟಉಂಟಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿ ಸುಮಾರು 900ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳಿವೆ. ಜೊತೆಗೆ, ಒಂದು ಸಾವಿರಕ್ಕೂ ಹೆಚ್ಚು ಪಾರ್ಟಿ ಹಾಲ್‌ಗಳಿವೆ. ಈ ಹಾಲ್‌ಗಳಲ್ಲಿ ಈಗಾಗಲೇ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಶೇ.70 ರಷ್ಟುಕಲ್ಯಾಣ ಮಂಟಪಗಳು ಮುಂಗಡವಾಗಿ ಕಾಯ್ದಿರಿಸಲಾಗಿದೆ.

ಬೆಂಗಳೂರು ನಗರದಲ್ಲಿ 10 ಸಾವಿರದಿಂದ 50 ಲಕ್ಷ ರು. ಬಾಡಿಗೆ ಪಡೆಯುವ ಕಲ್ಯಾಣ ಮಂಟಪಗಳಿವೆ. ಈ ಎಲ್ಲ ಕಲ್ಯಾಣ ಮಂಟಪಗಳಲ್ಲಿ ಮಾ.14ರಿಂದ 20ರವರೆಗೂ ವಿವಾಹ ಮುಹೂರ್ತಕ್ಕೆ ಉತ್ತಮ ದಿನಗಳಾಗಿವೆ. ನಗರದ ಬಹುತೇಕ ಕಲ್ಯಾಣ ಮಂಟಪಗಳು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಆದರೆ, ಇದೀಗ ಏಕಾಏಕಿ ವಿವಾಹಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ನಷ್ಟಅನುಭವಿಸಬೇಕಾಗಿದೆ ಎಂದು ಬನಶಂಕರಿಯ ಪಂಚವಟಿ ಕಲ್ಯಾಣ ಮಂಟಪದ ಮಾಲೀಕ ಗೋವಿಂದರಾಜು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ

ಮಾ.14ರಿಂದ ಒಂದು ವಾರದಲ್ಲಿ ಗುರುವಾರ, ಶುಕ್ರವಾರ ಮತ್ತು ವಾರಾಂತ್ಯ ಮಾತ್ರ ವಿವಾಹಕ್ಕೆ ಒಳ್ಳೆಯ ದಿನಗಳಾಗಿವೆ. ಸರ್ಕಾರ ವಿಧಿಸಿರುವ ನಿರ್ಬಂಧ ಪೋಷಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅರ್ಚಕ ಮೋಹನ್‌ಪುರೋಹಿತ್‌ ಎಂಬುವರು ಹೇಳಿದರು.

ಗುರು ಡೆಕೋರೇಟ​ರ್ಸ್ ಮಾಲಿಕ ಗುರು ಪ್ರಸಾದ್‌ ಮಾತನಾಡಿ, 16 ರಿಂದ ನಾಲ್ಕು ದಿನಗಳ ಕಾಲ ಮದುವೆ ಮತ್ತು ಇತರೆ ಸಮಾರಂಭಗಳ ಅಲಂಕಾರಕ್ಕಾಗಿ ಮುಂಗಡವಾಗಿ ಕಾಯ್ದಿರಿಸಲಾಗಿದೆ. ಇದಕ್ಕಾಗಿ ಅಲಂಕಾರಿಕ ಹೂವು ಸೇರಿ ಇತರೆ ಸಾಮಾಗ್ರಿಗಳ ಖರೀದಿಗೆ ಹಣ ಪಾವತಿ ಮಾಡಲಾಗಿದೆ. ಸರ್ಕಾರದ ಆದೇಶದಿಂದ ದೊಡ್ಡ ಮಟ್ಟದಲ್ಲಿ ನಷ್ಟವುಂಟಾಗಲಿದೆ ಎಂದರು.

ವಿವಾಹ ಕಾರ್ಯಕ್ರಮಗಳನ್ನು ಸರ್ಕಾರ ನಿಷೇಧಿಸಿರುವುದಾಗಿ ಹೇಳಿದೆ. ಆದರೆ, ಈಗಾಗಲೇ ನಿಶ್ಚಯಿಸಿರುವವರಿಗೆ ಪರ್ಯಾಯ ಮಾರ್ಗವನ್ನು ತಿಳಿಸಿಲ್ಲ. ಇದರಿಂದ ಹಲವು ಪೋಷಕರು ಗೊಂದಲಕ್ಕೆ ಸಿಲುಕುವಂತಾಗಿದೆ.

PREV
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌