ಚಿಕ್ಕಬಳ್ಳಾಪುರ : ನಿವೃತ್ತ ದಿನಗೂಲಿ ನೌಕರರಿಗೆ 5 ಲಕ್ಷ ನೆರವು

By Kannadaprabha NewsFirst Published Sep 15, 2021, 1:17 PM IST
Highlights
  • ನಗರಸಭೆಯಲ್ಲಿ ಕರ್ತವ್ಯ ಬಹಳ ವರ್ಷಗಳಿಂದ ಸೇವೆ ನಿರ್ವಹಿಸುತ್ತಿರುವ (ಕನಿಷ್ಠ ವೇತನದ) ದಿನಗೂಲಿ ನೌಕರರು
  • ದಿನಗೂಲಿ ನೌಕರರಿಗೆ ನಿವೃತ್ತಿಯಾದಾಗ ಬರಿಗೈಯಲ್ಲಿ ಕಳುಹಿಸುತ್ತಿರುವುದು ನೋವಿನ ಸಂಗತಿ
  • ದೀರ್ಘ ಸೇವೆಯನ್ನು ಗಣನೆಗೆ ತೆಗೆದುಕೊಂಡು ಅವರ ನಿವೃತ್ತಿಯಂದು ಸೇವಾ ಅವಧಿಗೆ ಅನುಗುಣವಾಗಿ ಮಾನವೀಯ ದೃಷ್ಟಿಯಿಂದ ಗರಿಷ್ಠ 5 ಲಕ್ಷ ನೆರವು

ಶಿಡ್ಲಘಟ್ಟ (ಸೆ.15): ನಗರಸಭೆಯಲ್ಲಿ ಕರ್ತವ್ಯ ಬಹಳ ವರ್ಷಗಳಿಂದ ಸೇವೆ ನಿರ್ವಹಿಸುತ್ತಿರುವ (ಕನಿಷ್ಠ ವೇತನದ) ದಿನಗೂಲಿ ನೌಕರರಿಗೆ ನಿವೃತ್ತಿಯಾದಾಗ ಬರಿಗೈಯಲ್ಲಿ ಕಳುಹಿಸುತ್ತಿರುವುದು ನೋವಿನ ಸಂಗತಿಯಾಗಿದ್ದು, ಅವರ ದೀರ್ಘ ಸೇವೆಯನ್ನು ಗಣನೆಗೆ ತೆಗೆದುಕೊಂಡು ಅವರ ನಿವೃತ್ತಿಯಂದು ಸೇವಾ ಅವಧಿಗೆ ಅನುಗುಣವಾಗಿ ಮಾನವೀಯ ದೃಷ್ಟಿಯಿಂದ ಗರಿಷ್ಠ 5 ಲಕ್ಷ ರುಪಾಯಿಗಳನ್ನು ನೀಡವ ಕುರಿತಂತೆ ನಗರಸಭಾ ಪೌರಾಯುಕ್ತ ಶ್ರೀಕಾಂತ್‌ ಮನವಿಗೆ ಅವಿರೋಧವಾಗಿ ಸಮ್ಮತಿ ಸೂಚಿಸಲಾಯಿತು.

ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ರಮೇಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 15 ನೇ ಹಣಕಾಸು ಯೋಜನೆಯಲ್ಲಿನ 1 ಕೋಟಿ 80 ಲಕ್ಷ ರೂ ಗಳ ವೆಚ್ಚಕ್ಕೆ ಒಪ್ಪಿಗೆ ಸೂಚಿಸಲಾಯಿತು.

ತಿಂಗಳಲ್ಲಿ 11,436 ಮಂದಿಗೆ ಪಿಂಚಣಿ ಮಂಜೂರು

ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಪೌರಾಯುಕ್ತ ಶ್ರೀಕಾಂತ್‌ ಬಹುತೇಕ ನಗರಸಭೆಗಳಿಗೆ 15 ನೇ ಹಣಕಾಸು ಯೋಜನೆಯಲ್ಲಿ 6 ರಿಂದ 7 ಕೋಟಿ ರೂ ಗಳನ್ನು ನೀಡುತ್ತಿದ್ದು ಶಿಡ್ಲಘಟ್ಟನಗರ ಸಭೆಗೆ ಸರ್ಕಾರ ಕೇವಲ 1 ಕೋಟಿ ರೂ ಮಾತ್ರ ಬರುತ್ತಿದೆ ಈ ಸಹಾಯ ಧನದಿಂದ ಹೆಚ್ಚಿನ ಅಭಿವೃದ್ಧಿಗೆ ತೊಡಕಾಗಿದ್ದು ನಗರಸಭೆಯ ಸದಸ್ಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗತ್ತಿಲ್ಲ ಎಂದರು ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುಧಾನ ತರಬೇಕೆಂದು ಕೋರಿದರು.

ಸರ್ಕಾರದ ಖಾಲಿ ಜಾಗದಲ್ಲಿ ಅಕ್ರಮ ನಿರ್ಮಾಣಗಳಿಗೆ ಹಕ್ಕು ಪತ್ರಗಳನ್ನು ನೀಡುವುದಿಲ್ಲ. ಆನ್‌ ಲೈನ್‌ ಮುಖಾಂತರ ಪಾರದರ್ಶಕವಾಗಿ ಅರ್ಜಿಗಳನ್ನು ಸ್ವೀಕರಸಿ 20/30 ನಿವೇಶನಗಳನ್ನು ನೀಡಬಹುದಾಗಿದ್ದು ಈ ಬಗ್ಗೆ ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಲಾಗುವುದೆಂದರು.

ನಗರದಲ್ಲಿನ ಅಂಗನವಾಡಿ ಕಟ್ಟಡಗಳು ಬಾಡಿಗೆಗೆ ಪಡೆಯಲಾಗಿದ್ದು ಹೆಚ್ಚಿನ ವೆಚ್ಚ ಬರುತ್ತಿದ್ದು ಸ್ವಂತ ಕಟ್ಟಡಗಳನ್ನು ನಗರಸಭೆಯ ವತಿಯಿಂದ ನಿರ್ಮಿಸಲು ಅನುಮತಿ ಕೋರಿದರು, ಹೆಚ್ಚಿನ ಚರ್ಚೆ ಇಲ್ಲದೆ 1.20 ಕೊಟಿರೂಗಳ ವೆಚ್ಚದ ಪ್ರಸ್ತಾವನೆಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು

click me!