35 ಸಾವಿರ ಬಿಎಂಟಿಸಿ ನೌಕರರಿಗೆ ತಲಾ 5 ಲಕ್ಷ ರೂ. ಆರೋಗ್ಯ ವಿಮೆ

By Sathish Kumar KHFirst Published Dec 14, 2022, 4:24 PM IST
Highlights

ಆರೋಗ್ಯ ಭಾಗ್ಯ ವ್ಯಾಪ್ತಿಗೆ 35 ಸಾವಿರ ಬಿಎಂಟಿಸಿ ನೌಕರರು.
ನೌಕರರಿಗೆ ಬಿಎಂಟಿಸಿ ನೀಡುತ್ತಿದೆ ಹೊಸ ವರ್ಷದ ಬಂಪರ್ ಗಿಫ್ಟ್.
ಚಿಕಿತ್ಸೆ ಸಿಕ್ಕಿಲ್ಲವೆಂದು ನೌಕರರು ಆಸ್ಪತ್ರೆಗಳಿಗೆ ಅಲೆಯುವಂತಿಲ್ಲ
 

ಬೆಂಗಳೂರು (ಡಿ.14): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಕೆಲಸ ಮಾಡುವ ನೌಕರರು ಇನ್ನುಮುಂದೆ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಸಿಕ್ಕಿಲ್ಲವೆಂದು ಆಸ್ಪತ್ರೆಗಳಿಗೆ ಅಲೆದಾಡುವ ಅಥವಾ ಕೊರುವ ಅವಶ್ಯಕತೆಯಿಲ್ಲ. ಎಲ್ಲ ಬಿಎಂಟಿಸಿ ನೌಕರರಿಗೆ ಅನುಕೂಲ ಆಗುವಂತೆ ಸಾರಿಗೆ ಇಲಾಖೆಯಿಂದ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಹೊಂದಿರುವ ಸಾಸ್ತಾ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಈ ಆರೋಗ್ಯ ವಿಮಾ ಯೋಜನೆಯಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ 35 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಆರೋಗ್ಯ ರಕ್ಷಾ ಯೋಜನೆ ಸಿಗಲಿದೆ. ಎಲ್ಲ ಸಿಬ್ಬಂದಿಗಳಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂ. ಆರೋಗ್ಯ ವಿಮೆಯನ್ನು ಬಿಎಂಟಿಸಿ ನೀಡುತ್ತಿದೆ. ಈ ಆಯುಷ್ಮಾನ್ ಯೋಜನೆಯಡಿಯಲ್ಲಿ ಸಾಸ್ತಾ ಎಂಬ ಯೋಜನೆ ತರಲು ಸಾರಿಗೆ ನಿಗಮವು ಚಿಂತನೆ ನಡೆಸಲಾಗಿದೆ. ಇನ್ನು ಈ ಯೋಜನೆಯಡಿ ನಿಗಮದ ಸಿಬ್ಬಂದಿ ಮತ್ತು ಅವರ ಕುಟುಂಬದವರು ಯಾವುದೇ ಅನಾರೋಗ್ಯಕ್ಕೊಳಗಾದರೂ ವಿಮೆ ಸೌಲಭ್ಯವು ಲಭ್ಯವಾಗಲಿದೆ.

 

ಬಸ್‌ ಡ್ರೈವರ್‌, ಕಂಡಕ್ಟರ್‌ಗಳ ಬಳಿ ಯುಪಿಐನಲ್ಲಿ ಲಂಚ: 6 ಸಸ್ಪೆಂಡ್‌

ಆರೋಗ್ಯ ಇಲಾಖೆಯೊಂದಿಗೆ ಚರ್ಚೆ: ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮತ್ತು ಆರೋಗ್ಯ ಇಲಾಖೆ ಪ್ರಮುಖ ಅಧಿಕಾರಿಗಳೊಂದಿಗೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಸಾರಿಗೆ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳು ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸಿಬ್ಬಂದಿಯ ಅನುಕೂಲಕ್ಕೆ ಆರೋಗ್ಯ ಯೋಜನೆ ಜಾರಿಗೆ ಪ್ಲಾನ್ ಮಾಡಲಾಗುತ್ತಿದೆ. ಪ್ರತಿಯೊಬ್ಬ ನೌಕರರ ಕುಟುಂಬವೊಂದಕ್ಕೆ ಈ ಯೋಜನೆಯಡಿ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆಸ್ಪತ್ರೆ ಖರ್ಚು ಭರಿಸಲಿದೆ. 

ಹಾರ್ಟ್ ಬೈಪಾಸ್ ಸರ್ಜರಿಗೂ ಅವಕಾಶ: ಪ್ರತಿದಿನ ಬಸ್‌ಗಳಲ್ಲಿ ಒತ್ತಡಗಳಿಂದ ಕೆಲಸ ಮಾಡುವ ಚಾಲಕರು ಮತ್ತು ನಿರ್ವಾಹಕರು ಅತಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವಿಮೆಯ ಮೂಲಕ ಚಿಕಿತ್ಸೆ ಭಾಗ್ಯವನ್ನು ನೀಡಿದಲು ಬೆಂಗಳೂರು ಸಾರಿಗೆ ನಿಗಮವು ನಿರ್ಧರಿಸಿದೆ.  ಈ ಯೋಜನೆಯಡಿ ಧೀರ್ಘಕಾಲಿಕ ರೋಗ, ಹೃದಯ ಬೈಪಾಸ್ ಸರ್ಜರಿ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿರುವ ನೌಕರರು ನಿಶ್ಚಿಂತೆಯಿಂದ ಚಿಕಿತ್ಸೆ ಪಡೆದುಕೊಳ್ಳಬಹುದು.  ಜೊತೆಗೆ, ಖಾಸಗಿ ಆಸ್ಪತ್ರೆಗಳಲ್ಲಿ ಬಿಎಂಟಿಸಿ ನೌಕರರಿಗೆ ಚಿಕಿತ್ಸೆ ಸಿಗದೆ ಒದ್ದಾಡುತ್ತಿದ್ದರು. ಜೊತೆಗೆ ಹಣಪಾವತಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಆರೋಗ್ಯ ವಿಮೆ ಯೋಜನೆಗೆ ಬಿಎಂಟಿಸಿ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಬಿಎಂಟಿಸಿಯಿಂದ ಗುಡ್‌ ನ್ಯೂಸ್‌: ಇನ್ಮುಂದೆ ಸ್ಕ್ಯಾನಿಂಗ್‌ ಕೋಡ್‌ ಮೂಲಕ ಸಿಗುತ್ತೆ ಟಿಕೆಟ್‌

ಆನ್‌ಲೈನ್‌ ಪೇಮೆಂಟ್‌ಗೆ ಅವಕಾಶ: ಬೆಂಗಳೂರಿನಲ್ಲಿ ತಂತ್ರಜ್ಞಾನ ಮುಂದುವರೆದಿದ್ದರೂ ಬಿಎಂಟಿಸಿ ಬಸ್‌ನಲ್ಲಿ ಹಳೆಯ ಮಾದರಿಯಲ್ಲಿ ನಗದು ಹಣವನ್ನು ಕೊಟ್ಟು ಟಿಕೆಟ್‌ ಖರೀದಿ ಮಾಡಬೇಕಿತ್ತು. ಆದರೆ, ಕಳೆದ ತಿಂಗಳು ಸ್ಮಾರ್ಟ್ ಟಿಕೆಟ್‌ ನೀಡುವ ಬಗ್ಗೆ ಯೋಚನೆ ಮಾಡಿತ್ತು. ಜೊತೆಗೆ, ಪ್ರಯಾಣಿಕರು ನಗದು ಹಣವಿಲ್ಲದಿದ್ದರೂ ಫೋನ್‌ ಪೇ ಮತತು ಗೂಗಲ್‌ ಪೇ ಮೂಲಕ ಹಣವನ್ನು ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಈ ತಿಂಗಳಾಂತ್ಯದಲ್ಲಿ ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ಇಟಿಎಂ) ನೀಡಲಾಗುತ್ತಿದೆ. ಇದರಲ್ಲಿ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಅಳವಡಿಸಿದ್ದು, ಪ್ರಯಾಣಿಕರು ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಆನ್‌ಲೈನ್‌ ಪಾವತಿ ಮಾಡಿ ಟಿಕೆಟ್‌ ಪಡೆಯಬಹುದು ಎಂದು ತಿಳಿಸಿತ್ತು. ಈಗ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಿ ಸಾರ್ವಜನಿಕ ಮತ್ತು ಉದ್ಯೋಗಿಗಳ ಸ್ನೇಹಿ ಸಂಸ್ಥೆಯಾಗಿ ಮಾರ್ಪಾಡು ಆಗುತ್ತಿದೆ. 

click me!