ಬೆಳಗಾವಿ: ನಾಣ್ಯ ಹಾಕಿ ನೀರು ಪಡೆಯಿರಿ..!

By Kannadaprabha NewsFirst Published Aug 31, 2019, 3:37 PM IST
Highlights

ಮಹತ್ವಾಕಾಂಕ್ಷೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ನಗರದ ಐದು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗುರು​ವಾರದಿಂದ ಪ್ರಾರಂಭಿಸಲಾಗಿದೆ. 1 ನಾಣ್ಯ ಹಾಕಿದರೆ 1 ಲೀಟರ್‌, 2 ಹಾಕಿದರೆ 2 ಲೀಟರ್‌ ಮತ್ತು 5 ನಾಣ್ಯ ಹಾಕಿದರೆ 10 ಲೀಟರ್‌ ಶುದ್ಧ ನೀರನ್ನು ಪಡೆಯಬಹುದಾಗಿದೆ. ಸಾರ್ವಜನಿಕರು 5 ರೀತಿಯ ನಾಣ್ಯಗಳನ್ನು ಬಳಸಬಹುದಾಗಿದೆ.

ಬೆಳಗಾವಿ(ಆ.31): ಮಹತ್ವಾಕಾಂಕ್ಷೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ನಗರದ ಐದು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗುರು​ವಾರದಿಂದ ಪ್ರಾರಂಭಿಸಲಾಗಿದೆ.

ಶ್ರೀನಗರ, ಜಿಲ್ಲಾಡಳಿತ ಆವರಣ, ಬೋಗಾರವೇಸ್‌, ಗೋವಾವೇಸ್‌, ನರಗುಂದಕರ ಭಾವೆ ಚೌಕದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿ​ಸ​ಲಾ​ಗಿದೆ.

ಈ ಶುದ್ಧ ಕುಡಿಯುವ ನೀರಿನ ಘಟಕಗಳ ಅನುಷ್ಠಾನದಿಂದ ಕಚ್ಚಾ ನೀರಿನಲ್ಲಿರುವ ಕಲ್ಮಶಗಳನ್ನು ಸೋಸುವುದಾಗಿದೆ. ಉಳ್ಳವರು ಕೆಲವರು ಮನೆಗಳಲ್ಲಿ ವಾಟರ್‌ ಫä್ಯರಿಪಾಯರ್‌ಗಳನ್ನು ಅಳವಡಿಸಿರುತ್ತಾರೆ. ಶುದ್ಧ ನೀರನ್ನು ಪಡೆಯುತ್ತಲಿದ್ದಾರೆ. ಆದರೆ ಸಾಮಾನ್ಯ ಜನರಿಗೂ ಶುದ್ಧ ನೀರು ಪೂರೈಸುವುದು ಸ್ಮಾರ್ಟ್‌ ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಶಿರೀನ್‌ ನದಾಫ್‌ ತಿಳಿಸಿದ್ದಾರೆ.

ಲಕ್ಷ್ಮಣ ಸವದಿ ಮುಂದಿನ ಸಿಎಂ: ಭವಿಷ್ಯ ನುಡಿದ ಸ್ವಾಮೀಜಿ!

ಈ ಒಂದು ಘಟಕವನ್ನು ಅಳವಡಿಸಲು 7.28 ಲಕ್ಷ ವೆಚ್ಚವಾಗಿದೆ. ಇದನ್ನು ವಿಜಯಪುರದ ರಾಥೋಡರವರಿಗೆ ಗುತ್ತಿಗೆ ನೀಡಲಾಗಿದೆ. ಮತ್ತು ಒಂದು ವರ್ಷದ ಕಾಲ ಸೆಪ್ಟೆಂಬರ್‌ 2020ರವರೆಗೆ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆ ಅವರದ್ದೇ ಆಗಿರುತ್ತದೆ.

ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯ:

ಪ್ರತಿಯೊಂದು ಘಟಕದಲ್ಲಿ 150 ಲೀಟರ್‌ ಸಾಮರ್ಥ್ಯವುಳ್ಳ ಟ್ಯಾಂಕ್‌ ಅಳವಡಿಸಲಾಗಿದೆ. ಇದಕ್ಕೆ ಕಾರ್ಪೋರೇಶನ್‌ ನಲ್ಲಿ ಸಂಪರ್ಕ ಪಡೆದಿದ್ದು, ನೀರಿನ ಟ್ಯಾಂಕ್‌ ತುಂಬಿದ ತಕ್ಷಣ ಸ್ವಯಂ ಚಾಲಿತವಾಗಿ ನಲ್ಲಿ ಬಂದ್‌ ಆಗುತ್ತದೆ. ಆ ನೀರು ವಿವಿಧ ಹಂತಗಳಲ್ಲಿ ಸಂಸ್ಕರಣೆಗೊಂಡು ಮೇನ್‌ ಟ್ಯಾಂಕ್‌ಗೆ ಬಂದು ಉಪಯೋಗಕ್ಕೆ ಸಿದ್ಧವಾಗುತ್ತದೆ.

ಹಣ ಹಾಕಿ ನೀರು ಪಡೆಯಿರಿ:

1 ನಾಣ್ಯ ಹಾಕಿದರೆ 1 ಲೀಟರ್‌, 2 ಹಾಕಿದರೆ 2 ಲೀಟರ್‌ ಮತ್ತು 5 ನಾಣ್ಯ ಹಾಕಿದರೆ 10 ಲೀಟರ್‌ ಶುದ್ಧ ನೀರನ್ನು ಪಡೆಯಬಹುದಾಗಿದೆ. ಸಾರ್ವಜನಿಕರು 5 ರೀತಿಯ ನಾಣ್ಯಗಳನ್ನು ಬಳಸಬಹುದಾಗಿದೆ. ಅಂದರೆ 5ರ ಸ್ಟೀಲ್‌ ಮತ್ತು ದಪ್ಪದಾದ ತಾಮ್ರದ ನಾಣ್ಯ, 2ರ ದೊಡ್ಡ ನಾಣ್ಯ, 1ರ ಸಣ್ಣ ಮತ್ತು ದೊಡ್ಡ ನಾಣ್ಯಗಳನ್ನು ಬಳಸಿ ನೀರು ಪಡೆಯಬಹುದಾಗಿದೆ.

ಎರಡನೇ ಹಂತದಲ್ಲಿ ಇನ್ನೂ ಏಳು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

click me!