46 ಎಕರೆ ಅರಣ್ಯ ಒತ್ತುವರಿ ಆರೋಪ: ಅನ್ನಪೂರ್ಣೇಶ್ವರಿ ದೇಗುಲದ ಟ್ರಸ್ಟಿನ ರಾಮನಾರಾಯಣ ಜೋಷಿಗೆ ನೋಟಿಸ್

Published : Jan 17, 2025, 07:23 PM IST
46 ಎಕರೆ ಅರಣ್ಯ ಒತ್ತುವರಿ ಆರೋಪ: ಅನ್ನಪೂರ್ಣೇಶ್ವರಿ ದೇಗುಲದ ಟ್ರಸ್ಟಿನ ರಾಮನಾರಾಯಣ ಜೋಷಿಗೆ ನೋಟಿಸ್

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒತ್ತುವರಿದಾರರಿಗೆ ಮತ್ತೆ ಅರಣ್ಯ ಇಲಾಖೆ ನೋಟಿಸ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.ಕಳೆದ ಒಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯ ಸೇರಿದಂತೆ ನೋಟೀಸ್ ನೀಡುವ ಪ್ರಕ್ರಿಯೆ ಸ್ಥಗಿತವಾಗಿತ್ತು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜ.17): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒತ್ತುವರಿದಾರರಿಗೆ ಮತ್ತೆ ಅರಣ್ಯ ಇಲಾಖೆ ನೋಟಿಸ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.ಕಳೆದ ಒಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯ ಸೇರಿದಂತೆ ನೋಟೀಸ್ ನೀಡುವ ಪ್ರಕ್ರಿಯೆ ಸ್ಥಗಿತವಾಗಿತ್ತು. ಇದೀಗ ಮತ್ತೆ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿರುವ ರೈತರಿಗೆ ನೋಟೀಸ್ ನೀಡುತ್ತಿದೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪದ ಮೇಲೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಟ್ರಸ್ಟಿನ  ರಾಮನಾರಾಯಣ ಜೋಷಿ ಅವರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. 

46 ಎಕರೆ ಒತ್ತುವರಿ ಆರೋಪ: ಕಳಸ ವಲಯದ ಹೊರನಾಡು ಅರಣ್ಯ ಸರ್ವೆ ನಂಬರ್ 166ರಲ್ಲಿ 26 ಎಕರೆ ಮತ್ತು ಸರ್ವೆ ನಂಬರ್ 175ರಲ್ಲಿ 20 ಎಕರೆ ಅರಣ್ಯ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿದ್ದು, ಒತ್ತುವರಿಗೆ ಸಂಬಂಧಿಸಿದ ದಾಖಲೆಗಳಿದ್ದರೆ ಬಾಳೆಹೊನ್ನೂರು ಎಸಿಎಫ್ ಕಚೇರಿಗೆ ಹಾಜರಾಗಿ ಲಿಖಿತ ಹೇಳಿಕೆ ಸಲ್ಲಿಸುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. 

ಸಂತೆಯಲ್ಲಿ ಹೆಸರಿಗೆ ಸ್ವೀಟ್ ಅಂಗಡಿ, ಆದ್ರೆ ಗೌಪ್ಯವಾಗಿ ಗೋಮಾಂಸ ಮಾರಾಟ: ಯುವಕರು ಪೊಲೀಸರ ವಶಕ್ಕೆ

ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ: ಒತ್ತುವರಿ ಜಮೀನಿನ ಸರ್ವೆ ನಡೆಸಿ ವರದಿ ಸಲ್ಲಿಸಬೇಕು, ಪಹಣಿ ಪ್ರತಿ, ಸರ್ವೆ ನಕಾಶೆ ಸೇರಿ ಎಲ್ಲಾ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಎಸಿಎಫ್ ಅವರು ವಲಯ ಅರಣ್ಯಾಧಿಕಾರಿ(ಆರ್ಎಫ್ಒ) ಮತ್ತು ಉಪವಲಯ ಅರಣ್ಯಾಧಿಕಾರಿ(ಡಿಆರ್ಎಫ್ಒ) ಅವರಿಗೂ ಸೂಚನೆ ನೀಡಿದ್ದಾರೆ.ಇನ್ನು ಈ ಒತ್ತುವರಿ ತೆರವು ಮಾಡದಂತೆ ರಾಮನಾರಾಯಣ ಜೋಷಿಯವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ