ಒಂದೇ ಗ್ರಾಮದಲ್ಲಿ 45 ಮಂದಿಗೆ ಸೋಂಕು : ಸಂಪೂರ್ಣ ಸೀಲ್ಡೌನ್

By Kannadaprabha News  |  First Published Apr 28, 2021, 8:51 AM IST

ಒಂದೇ ಗ್ರಾಮದ ಸುಮಾರು 45 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್‌ ವಲಯವನ್ನಾಗಿ ಘೋಷಿಸಲಾಗಿದೆ. 


ಮುಂಡಗೋಡ (ಏ.28): ಒಂದೇ ಗ್ರಾಮದಲ್ಲಿ 45 ಮಂದಿಗೆ ಕೋವಿಡ್‌ ಪಾಸಿಟಿವ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್‌ ಡೌನ್‌ ಮಾಡಿ ಕಂಟೈನ್ಮೆಂಟ್‌ ವಲಯವನ್ನಾಗಿ ಘೋಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಿಂದ ವರದಿಯಾಗಿದೆ.

ತಾಲೂಕಿನ ಕರವಳ್ಳಿ ಗ್ರಾಮದಲ್ಲಿ ಸೋಮವಾರ ಹಾಗೂ ಮಂಗಳವಾರದ ನಡುವೆ 45 ಜನರ ಕೋವಿಡ್‌ ವರದಿ ಪಾಸಿಟಿವ್‌ ಬಂದ ಕಾರಣ ಮಂಗಳವಾರ ಸಂಜೆ ತಹಸೀಲ್ದಾರ್‌ , ತಾಲೂಕು ವೈದ್ಯಾಧಿಕಾರಿ ಮತ್ತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

Latest Videos

undefined

ಕೋವಿಡ್ : ಬೆಂಗಳೂರಿಂದ ಬರುವವರಿಗೆ ಇಲ್ಲ ಗ್ರಾಮಕ್ಕೆ ಎಂಟ್ರಿ

ಬಳಿಕ ಗ್ರಾಮವನ್ನು ಸಂಪೂರ್ಣ ಸ್ಯಾನಿಟೈಜ್‌ ಮಾಡುವ ಮೂಲಕ ಸೀಲ್‌ಡೌನ್‌ ಮಾಡಿದರಲ್ಲದೇ ಗ್ರಾಮದ ಮನೆ ಮನೆಗೆ ತೆರಳಿ 100 ಕ್ಕೂ ಅಧಿಕ ಜನರ ಗಂಟಲು ದ್ರವ ಸಂಗ್ರಹಿಸಲಾಯಿತು.

click me!