ರಕ್ಷಾ ಫೌಂಡೇಷನ್ ನೀಡುತ್ತಿರುವ ಉಚಿತ ತುರ್ತು ವಾಹನ ವ್ಯವಸ್ಥೆಗೆ ಚಾಲನೆ ನೀಡಿದ ಸಂಸದ ತೇಜಸ್ವಿ ಸೂರ್ಯ| . ಸಾರ್ವಜನಿಕರು ಆಕ್ಸಿಜನ್ ಕುರಿತಂತೆ ಸಮಸ್ಯೆಗಳಿದ್ದರೆ ಕೂಡಲೇ ರಕ್ಷಾ ಫೌಂಡೇಷನ್ ಸಂಪರ್ಕಿಸಬೇಕು|
ಬೆಂಗಳೂರು(ಏ.28): ಕೊವಿಡ್‌ನಂತ ತುರ್ತು ಸೇವೆಗೆ ಉಚಿತ ವಾಹನ ಹಾಗೂ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿರುವ ‘ರಕ್ಷಾ ಫೌಂಡೇಶನ್’ ಕಾರ್ಯವನ್ನು ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದ್ದಾರೆ.
ರಕ್ಷಾ ಫೌಂಡೇಷನ್ ನೀಡುತ್ತಿರುವ ಉಚಿತ ತುರ್ತು ವಾಹನ ವ್ಯವಸ್ಥೆಗೆ ಚಾಲನೆ ನೀಡಿದ ಮಾತನಾಡಿದ ಅವರು, ಫೌಂಡೇಷನ್‌ನ ಸಿ.ಕೆ.ರಾಮಮೂರ್ತಿ ಮತ್ತು ನಾಗರತ್ನ ರಾಮಮೂರ್ತಿ ಅವರು ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗುವ ಕಾರ್ಯ ಮಾಡಿದ್ದಾರೆ. ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಯಲ್ಲಿ ದಾಖಲಾಗುವವರಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಈಗಾಗಲೇ ಜಯ ನಗರದಾದ್ಯಂತ ಅನೇಕ ಕೊರೋನಾ ಲಸಿಕೆ ಅಭಿಯಾನಗಳನ್ನು ಅವರು ಆಯೋಜಿಸಿದ್ದರು. ಸಾರ್ವಜನಿಕರು ಆಕ್ಸಿಜನ್ ಕುರಿತಂತೆ ಸಮಸ್ಯೆಗಳಿದ್ದರೆ ಕೂಡಲೇ ರಕ್ಷಾ ಫೌಂಡೇಷನ್ ಅನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಜೀವ ಉಳಿಸುವ ಸಂಜೀವಿನಿಗಾಗಿ ಕೇಂದ್ರದ 'ಆಪರೇಷನ್ ಆಕ್ಸಿಜನ್'!
ಕೊರೋನಾ ತುರ್ತು ಸೇವೆಗೆ ‘ರಕ್ಷಾ ಫೌಂಡೇಶನ್’ ನೀಡಲಿರುವ ಉಚಿತ ಆಕ್ಸಿಜನ್ ಹಾಗೂ ವಾಹನ ವ್ಯವಸ್ಥೆಗೆ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಬಿಜೆಪಿ ಮುಖಂಡ ಸಿ.ಕೆ.ರಾಮಮೂರ್ತಿ, ಪಾಲಿಕೆ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿ, ಪೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.