ಚಿತ್ರದುರ್ಗ: ಭದ್ರಾದಿಂದ ಹೊಸದುರ್ಗಕ್ಕೆ 44,608 ಹೆಕ್ಟೇರ್ ನೀರಾವರಿ

Published : Feb 06, 2025, 02:04 PM IST
ಚಿತ್ರದುರ್ಗ: ಭದ್ರಾದಿಂದ ಹೊಸದುರ್ಗಕ್ಕೆ 44,608 ಹೆಕ್ಟೇರ್ ನೀರಾವರಿ

ಸಾರಾಂಶ

ಜಲಾಶಯ ಹೊಸದುರ್ಗ ತಾಲೂಕಿನಲ್ಲಿದ್ದರೂ ನೀರಿನ ಮೇಲೆ ಇದುವರೆಗೂ ಯಾವುದೇ ರೀತಿಯ ಹಕ್ಕು ಪ್ರತಿಪಾದನೆ ಮಾಡುವ ಉಸಾಬರಿಗೆ ಹೊಸದುರ್ಗದ ಜನತೆ ಹೋಗಿಲ್ಲ. ಘಟ್ಟದಲ್ಲಿ ಜನ್ಮತಾಳ ಹರಿದು ಬರುವವೇವಾವತಿ ಮೊದಲು ನಂತರ ಹಿರಿ ಯೂರಿನತ್ತ ಮಾಡುತ್ತಾಳೆ. ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ನಿರ್ಮಿಸಲಾದ ಬ್ಯಾರೇಜು ಸದ್ಯಕ್ಕೆ ಪಟ್ಟಣದ ಕುಡಿವ ನೀರಿನ ದಾಹ ಇಂಗಿಸುತ್ತಿದೆ.  

ಚಿಕ್ಕಪ್ಪನಹಳ್ಳಿ ಷಣ್ಮುಖ 

ಚಿತ್ರದುರ್ಗ(ಫೆ.06): ಭದ್ರಾ ಮೇಲ್ದಂಡೆ ಯೋಜನೆಯಡಿ ಹೊಸದುರ್ಗ ತಾಲೂಕಿನ ಬರೋಬ್ಬರಿ 44,608 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. 27 ಕೆರೆಗಳು ಭದ್ರೆಯಿಂದ ತುಂಬಿ ತುಳುಕಾಡಲಿವೆ. ಹಿರಿಯೂರು ತಾಲೂಕಿನ ನಂತರ ಅತಿ ಹೆಚ್ಚುಭದ್ರೆ ನೀರಿನ ಪಾಲು ಪಡೆದ ಖ್ಯಾತಿ ಹೊಸದುರ್ಗದ್ದು. ವಿವಿ ಸಾಗರ ಜಲಾಶಯದ ಹಿನ್ನೀರಿಗೆ ಸುಮಾರು 28 ಸಾವಿರ ಎಕರೆ ಭೂಮಿ ಬಿಟ್ಟು ತ್ಯಾಗಿಗಳಾಗಿರುವ ಹೊಸದುರ್ಗ ತಾಲೂಕಿನ ಜನತೆಗೆ ವಿವಿ ಸಾಗರದಲ್ಲಿ ಒಂದು ಹನಿ ನೀರಿನ ಪಾಲು ಸಿಕ್ಕಿಲ್ಲ.

ಜಲಾಶಯ ಹೊಸದುರ್ಗ ತಾಲೂಕಿನಲ್ಲಿದ್ದರೂ ನೀರಿನ ಮೇಲೆ ಇದುವರೆಗೂ ಯಾವುದೇ ರೀತಿಯ ಹಕ್ಕು ಪ್ರತಿಪಾದನೆ ಮಾಡುವ ಉಸಾಬರಿಗೆ ಹೊಸದುರ್ಗದ ಜನತೆ ಹೋಗಿಲ್ಲ. ಘಟ್ಟದಲ್ಲಿ ಜನ್ಮತಾಳ ಹರಿದು ಬರುವವೇವಾವತಿ ಮೊದಲು ನಂತರ ಹಿರಿ ಯೂರಿನತ್ತ ಮಾಡುತ್ತಾಳೆ. ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ನಿರ್ಮಿಸಲಾದ ಬ್ಯಾರೇಜು ಸದ್ಯಕ್ಕೆ ಪಟ್ಟಣದ ಕುಡಿವ ನೀರಿನ ದಾಹ ಇಂಗಿಸುತ್ತಿದೆ.

ಪಂಚ ಗ್ಯಾರಂಟಿ ಚುನಾವಣೆಯ ಗಿಮಿಕ್ ಅಲ್ಲ: ಎಚ್.ಎಂ.ರೇವಣ್ಣ

ಡ್ಯಾಂ ಹೊಸದುರ್ಗ ಬೌಂಡರಿಯಲ್ಲಿ ಇದ್ದರೂ ಜಲಾ ಶಯದ ಕುಡಿವ ನೀರಿನ ಭಾಗ್ಯ ಕಲ್ಪತರು ನಾಡು ಹೊಸ ದುರ್ಗಕ್ಕೆ ಇಲ್ಲ, ಬೇಸಗೆಯಲ್ಲಿ ತಾಲೂಕಿನ ಹಲವು ಹಳ್ಳಿಗಳು ಕುಡಿವ ನೀರಿನ ಅಭಾವ ಎದುರಿಸುತ್ತಿವೆ. ಯೋಜನಾ ವ್ಯಾಪ್ತಿಯ ಮೇಲ್ಬಾಗದಲ್ಲಿ ಹೊಸ ದುರ್ಗ ಇರುವುದರಿಂದ ಭದ್ರಾ ಮೇಲ್ದಂಡೆಯಡಿ ಸಹಜವಾಗಿಯೇ ತಾಲೂಕಿಗೆ ಹೆಚ್ಚಿನ ನೀರಿನ ಪಾಲು ಸಿಕ್ಕಿದೆ. ಹಿರಿಯೂರು ತಾಲೂಕು 67 ಸಾವಿರ ಹೆಕ್ಟೇರ್ ಪಡೆದಿದ್ದರೆ ನಂತರದ ಸ್ಥಾನದಲ್ಲ ಹೊಸದುರ್ಗವಿದೆ. ಭದ್ರಾ ನೀರಿನಲ್ಲಿ ಪಾಲು ಕೇಳುವುದಕ್ಕಿಂತ ಮಿಗಿಲಾಗಿ ಹೊಸದುರ್ಗ ತಾಲೂಕಿನ ಜನತೆ ವಿವಿ ಸಾಗರ ಜಲಾಶಯದಹಿನ್ನೀರಿನಬಾಧೆಯಿಂದನರಳುತ್ತಿದ್ದಾರೆ. ಜಲಾಶಯದ ನೀರಿನ ಮಟ್ಟ 130 ಅಡಿ ದಾಟಿದ ನಂತರ ಹೊಸದುರ್ಗದ ರೈತರ ಜಮೀನುಗಳು ಮುಳುಗಡೆಯಾಗುತ್ತವೆ ಎಂಬ ಆತಂಕ ಇಲ್ಲಿಯ ವರದು. ಹಾಗಾಗಿ ಜಲಾಶಯದ ನೀರನ್ನು 130 ಅಡಿಗೆ ಕಾಯ್ದುಕೊಂಡು ಕ್ರಸ್ಟ್ ಗೇಟ್ ಅಳವಡಿಸಿ ಬೇಕೆಂಬುದು ಹೊಸದುರ್ಗ ಜನರವಾದ ಈಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕ‌ರ್ ಅವರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಶಾಸಕ ಬಿ.ಜಿ.ಗೋವಿಂದಪ ಬಹಿರಂಗವಾಗಿ ಆರೋಪಿಸಿ ದ್ದರು.ಸಾಲದೆಂಬಂತೆಜಲಾಶಯುನೇಬಾರಿಕೋಡಿ ಬಿದ್ದಾಗ ಬಾಗಿನ ಬಿಡಲು ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರೂ ಶಾಸಕ ಗೋವಿಂದಪ್ಪ ಪಾಲ್ಗೊಳ್ಳದೆ ತಮ್ಮ ಅಂತರಂಗದ ಆಕ್ರೋಶವ ಹೊರ ಹಾಕಿದ್ದರು.

ಹಿರಿಯೂರಿನ ಜನತೆ ವೇದಾವತಿ ಹಾಗೂ ಭದ್ರೆ ನೀರಿನಲ್ಲಿ ಮತ್ತೆ ಹೆಚ್ಚಿನ ಪಾಲು ಕೇಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ವಾಣಿವಿಲಾಸ ಸಾಗರ ಜಲಾಶಯ ಹೊಸ ದುರ್ಗ ತಾಲೂಕಿನಲ್ಲಿದೆ. ಈ ಸಂಬಂಧ ಕಂದಾಯ ಹಾಗೂ ನೀರಾವರಿ ಇಲಾಖೆ ಬಳಿ ಎಲ್ಲ ದಾಖಲೆಗಳಿವೆ ಎಂದು ಅಬ್ಬರಿಸಿದ್ದರು. ಹಿರಿಯೂರಿನವರ ನೀರಿನ ನಿಯಂತ್ರಣಗೊಳ್ಳಬೇಕೆಂದು ಹೇಳಿದ್ದರು. 

ಭದ್ರಾ ಮೇಲ್ದಂಡೆಯಡಿ ತುಂಬಿಸಲಾಗುತ್ತಿರುವ ಹೊಸದುರ್ಗ ತಾಲೂಕಿನ ಕೆರೆಗಳು ಬೆಲಗೂರು, ಶ್ರೀರಾಂಪುರ, ಸುಕಾಲರಹಟ್ಟಿ, ಕಬ್ಬಳ, ಬೊಮ್ಮೇನಹಳ್ಳಿ, ತೊಣಚೇನಹಳ್ಳಿ, ಕೈ ನಡು, ಗಂಜಿಗೆರೆ, ದಳವಾಯಿಕಟ್ಟೆ, ಕಾಚಾಪುರ, ವೆಂಗಳಾಪುರ, ಹೆಗ್ಗೆರೆ-1, ಹೆಗ್ಗರ-2, ಕುರುಬರಹಟ್ಟಿ, ಗೌಡನಪಾಳ್ಯ, ಲಕ್‌ಷ್ಟದೇವನಹಳ್ಳಿ, ತೆರಿಕೆರೆ, ಕಾವಲರಮನೆ, ನಗರಗೆರೆ-1, ನಗರಗೆರೆ-2, ಆಗಲಕೆರೆ, ಗೊಲ್ಲರಹಳ್ಳಿ, ಕಡಯುಗೆರೆ, ದೊಡ್ಡಿಯಾನಪಾಳ್ಯ

ಛಲ ಬಿಡದ ತ್ರಿವಿಕ್ರಮ ಸಚಿವ ಸುಧಾಕರ್

ಹಿರಿಯೂರಿನ ಜನತೆ ಹೆಚ್ಚುವರಿ ನೀರಿನ ಬೇಡಿಕೆ ಮಂಡಿಸುತ್ತಿರುವುದರ ಕುರಿತು ಜಿಲ್ಲೆಯ ವಿವಿದ ಕಡೆ ಅಸಮಧಾನದ ಹೊಗೆ ಆಡುತ್ತಿದ್ದರೂ ಸಚಿವ ಡಿ.ಸುಧಾಕರ್‌ತಲೆಕೆಡಿಸಿಕೊಳ್ಳುತ್ತಿಲ್ಲ. ಹಿರಿಯೂರು ತಾಲೂಕಿನ ಗಾಯತ್ರಿ, ಜಲಾಶಯಕ್ಕೆ ಏನಕೇನ ನೀರು ಹರಿಸಲೇ ಬೇಕೆಂಬ ಹಠ ತೊಟ್ಟಿರುವ ಅವರು ಫೆ.6 ರಂದು ಸಣ್ಣನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತಿದ್ದಾರೆ. ಭದ್ರಾ ಮೇಲ್ದಂಡೆಯಡಿ ನೀರು ಲಭ್ಯವಾಗದಿದ್ದರೂ ಸಣ್ಣ ನೀರಾವರಿ ಯೋಜನೆಯಡಿ ಸಿಗಬಹುದೆಂಬ ನಿರೀಕ್ಷೆ ಸಚಿವ ಡಿ.ಸುಧಾಕ‌ರ್ ಅವರದ್ದು. ಹಾಗಾಗಿ ಗುರುವಾರ ನಡೆಯುವ ಸಭೆ ಮಹತ್ವ ಪಡೆದಿದೆ.

ಜಮೀನು ಮಂಜೂರು ಅಧಿಕಾರ ನನ್ನ ಕೈಯಲ್ಲಿ ಇಲ್ಲ: ಸಚಿವ ಕೆ.ವೆಂಕಟೇಶ್‌

ವಿವಿ ಸಾಗರ ಜಲಾಶಯಕ್ಕೆ ಹೊಸದುರ್ಗ ತಾಲೂಕಿನ ಜನತೆ 28 ಸಾವಿರ ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಇಲ್ಲಿನ ಜನರ ತ್ಯಾಗವ ಯಾರೂ ಪರಿಗಣಿಸುತ್ತಿಲ್ಲ. ಹೊಳಲ್ಕೆರೆಗೆ, ಚಳ್ಳಕೆರೆ, ಚಿತ್ರದುರ್ಗ ಎಲ್ಲ ಕಡೆಗೆ ಕುಡಿವ ನೀರು ಒಯ್ಯಲಾಗಿದ್ದು ಹೊಸದುರ್ಗ ತಾಲೂಕಿ ಜನತೆ ಬೊಗಸೆ ನೀರು ಕುಡಿಯುತ್ತಿಲ್ಲ, ಹಾಗಾಗಿ ನಮ್ಮ ನೀರು, ನಮ್ಮ ಹಕ್ಕು ಹೋರಾಟ ಆರಂಭಿಸುತ್ತಿದ್ದೇವೆ. ವಿವಿ ಸಾಗರ ಜಲಾಶಯ ನಿರ್ಮಿಸಿ ಶತಮಾನವಾಗಿರುವುದರಿಂದ ಪರ್ಯಾಯ ಜಲಾಶಯ ನಿರ್ಮಾಣ ಅಗತ್ಯ. ಹಾಗಾಗಿ ಹೊಸದುರ್ಗದ ಬಳಿ ಪರ್ಯಾಯ ಜಲಾಶಯ ನಿರ್ಮಿಸಲು ಸರ್ಕಾರದ ಮೇಲೆ ಹೋರಾಟದ ಮೂಲಕ ಆಗ್ರಹಿಸಲಾಗುವುದು ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ. 

ವಿವಿ ಸಾಗರ ಜಲಾಶಯದ ಹಿನ್ನೀರಿನಿಂದ ಹೊಸದುರ್ಗ ತಾಲೂಕಿನ ರೈತರು ಅತೀವ ವೇದನೆ ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸುವುದು ನನ್ನ ಕರ್ತವ್ಯ. ವಿವಿ ಸಾಗರ ಕೋಡಿ ಬಳಿ ಕ್ರಸ್ಟ್‌ ಗೇಟ್ ಅಳವಡಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಕ್ರಸ್ಟ್ ಗೇಟ್ ಅಳವಡಿಕೆಯಿಂದ ಜಲಾಶಯದ ನೀರಿನ ಮಟ್ಟ ಕಡಿಮೆಯಾಗದು. ಸಂಘರ್ಷಗಳಿಗೆ ಅವಕಾಶ ಮಾಡಿಕೊಡದೆ ಸರ್ಕಾರ ಕ್ರಸ್ಟ್‌ ಗೇಟ್ ಅಳವಡಿಕೆಗೆ ಮುಂದಾಗಲಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ