* ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಬಳಿ ನಡೆದ ಘಟನೆ
* ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆ ಹೊರಟಿದ್ದ ಲಾರಿ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಕೂಡ್ಲಿಗಿ(ಸೆ.01): ಮೇಯಲು ಹೋಗುತ್ತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿಯೇ 40ಕ್ಕೂ ಅಧಿಕ ಕುರಿಗಳು ಮೃತಪಟ್ಟು, ಕುರಿಗಾಹಿ ಹಾಗೂ 20 ಕುರಿಗಳು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಶಿವಪುರ ಗೊಲ್ಲರಹಟ್ಟಿಯ ಚನ್ನಜ್ಜರ ಸಣ್ಣಚಿತ್ತಪ್ಪ, ರುದ್ರಪ್ಪ ಎಂಬವರಿಗೆ ಸೇರಿದ ಕುರಿಗಳಾಗಿದ್ದು ಕುರಿಗಾಹಿ ಮಹಾಲಿಂಗನಿಗೆ ಗಾಯವಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಪುರ ಅರಣ್ಯ ಪ್ರದೇಶದೆಡೆ ಹೋಗುತ್ತಿರುವಾಗ ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದಿದೆ.
ಮಾರುತಿ ಓಮ್ನಿ ಹರಿದು 7 ಕುರಿ ಸಾವು : 6 ಗಂಭೀರ
ಘಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಶರತಕುಮಾರ ಮತ್ತು ಕ್ರೈಂ ಪಿಎಸ್‌ಐ ಮಲೀಕ್ಸಾಬ್ ಕಲಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.