ಬೆಂಗ್ಳೂರಲ್ಲಿ 6 ತಿಂಗಳ ಬಳಿಕ ಕೊರೋನಾಗೆ 40 ಬಲಿ..!

By Kannadaprabha News  |  First Published Apr 13, 2021, 7:06 AM IST

ಮೃತಪಟ್ಟವರಲ್ಲಿ ಪುರುಷರೇ ಹೆಚ್ಚು| ಏರುತ್ತಲೇ ಇರುವ ಸೋಂಕಿತರ ಸಂಖ್ಯೆ| ಒಂದೇ ದಿನ 6,387 ಹೊಸ ಸೋಂಕಿತ ಪ್ರಕರಣ ಪತ್ತೆ| ಸಕ್ರಿಯ ಪ್ರಕರಣಗಳ ಸಂಖ್ಯೆ 56,545ಕ್ಕೆ ಏರಿಕೆ| ಒಟ್ಟು ಸೋಂಕಿತರ ಸಂಖ್ಯೆ 4,88,369ಕ್ಕೆ ಹೆಚ್ಚಳ| 


ಬೆಂಗಳೂರು(ಏ.13): ಯುಗಾದಿ ಹಬ್ಬದ ಮುನ್ನ ದಿನವೂ ಕೂಡ ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಒಂದೇ ದಿನ 6387 ಹೊಸ ಪ್ರಕರಣಗಳು ದೃಢಪಟ್ಟಿವೆ. ಜೊತೆಗೆ ಕಳೆದ ಆರು ತಿಂಗಳ ಬಳಿಕ 40 ಮಂದಿ ಸಾವನ್ನಪ್ಪಿದ್ದಾರೆ.

ಭಾನುವಾರ ದಾಖಲಾದ ಪ್ರಕರಣಗಳೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 56,545ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,88,369ಕ್ಕೆ ಹೆಚ್ಚಳವಾಗಿದೆ. 1075 ಮಂದಿ ಬಿಡುಗಡೆಯಾಗಿದ್ದು ಈವರೆಗೆ ಸೋಂಕಿನಿಂದ 4,26,968 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕಕ್ಕೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಶನಿವಾರ 160ಕ್ಕೂ ಹೆಚ್ಚು ಇದ್ದ ಸಂಖ್ಯೆ 176ಕ್ಕೆ ಹೆಚ್ಚಳವಾಗಿದೆ. 40 ಮಂದಿ ಮೃತ ಪಡುವುದರೊಂದಿಗೆ ಒಟ್ಟು ಮರಣ ಹೊಂದಿದವರ ಸಂಖ್ಯೆ 4855ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

Latest Videos

undefined

ಕೊರೋನಾ ಅಟ್ಟಹಾಸ: ಬೆಡ್‌ ಸಿಗದೆ 3 ಆಸ್ಪತ್ರೆಗೆ ಅಲೆದು ವ್ಯಕ್ತಿ ಸಾವು

ಮೃತಪಟ್ಟವರಲ್ಲಿ ಪುರುಷರೇ ಹೆಚ್ಚು:

ಸೋಮವಾರ ಮೃತಪಟ್ಟ40 ಮಂದಿ ಪೈಕಿ 70 ವರ್ಷ ಮೇಲ್ಪಟ್ಟಒಟ್ಟು 19 ಮಂದಿ ಮೃತಪಟ್ಟಿದ್ದು, 6 ಮಹಿಳೆಯರು ಮತ್ತು 13 ಪುರುಷರು ಸಾವನ್ನಪ್ಪಿದ್ದಾರೆ. ಉಳಿದಂತೆ 60-69 ವರ್ಷದೊಳಗಿನ 7 ಮಹಿಳೆಯರು, 5 ಪುರುಷರು, 50- 59 ವರ್ಷದೊಳಗಿನ 5 ಪುರುಷರು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 30-39 ವರ್ಷದೊಳಗಿನ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ಒಟ್ಟು 25 ಮಂದಿ ಪುರುಷರು 15 ಮಹಿಳೆರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಪುರುಷರಲ್ಲೇ ಹೆಚ್ಚು ಸೋಂಕು: 

ಸೋಂಕು ದೃಢಪಟ್ಟ 6384 ಮಂದಿ ಪೈಕಿ 9 ವರ್ಷದೊಳಗಿನ 188 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದರೆ, ಪೈಕಿ 10-19 ವರ್ಷದೊಳಗಿನ 474, 20-29 ವರ್ಷದೊಳಗಿನ 1394 ಮತ್ತು 30-39 ವಯಸ್ಸಿನೊಳಗಿನ 1628 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 40-49 ವರ್ಷದೊಳಗಿನ 1113 ಮಂದಿ, 50-59 ವಯಸ್ಸಿನೊಳಗಿನ 738, 60-69 ವರ್ಷದೊಳಗಿನ 512 ಜನರಲ್ಲಿ ಸೋಂಕು ಪತ್ತೆಯಾಗಿದೆ. 70 ವರ್ಷ ವಯೋಮಿತಿಯ ನಂತರದ 331ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಹೀಗೆ ಒಟ್ಟು 3770 ಪುರುಷರು ಮತ್ತು 2614 ಮಹಿಳೆಯರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
 

click me!