ಸಾರಿಗೆ ಸಿಬ್ಬಂದಿಗೆ ಚೇತನ್ ಬಲ,  ಹೋರಾಟ ಇಲ್ಲಿಗೆ ನಿಲ್ಲಲ್ಲ

By Suvarna News  |  First Published Apr 12, 2021, 5:39 PM IST

ಸಾರಿಗೆ ಸಿಬ್ಬಂದಿ ಮುಷ್ಕರ/ ಸಾಆರಿಗೆ ನೌಕರರಿಗೆ ನಟ ಚೇತತ್ ಸಾಥ್/ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ/ ರೈತ, ಕಾರ್ಮಿಕರ ಪರವಾಗಿ ಇರುವವರನ್ನು ಸರ್ಕಾರ ಬಂಧಿಸುತ್ತಿದೆ


ಬೆಂಗಳೂರು (ಏ.12) ಸಾರಿಗೆ ನೌಕಕರ ಮುಷ್ಕರಕ್ಕೆ ಬೆಂಬಲ ನೀಡಿದ್ದ ನಟ ಚೇತನ್ ಇದೀಗ ಧಾರವಾಡದಲ್ಲಿ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಎರತಡು ದಿನದ ಹಿಂದೆ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಮುಂದಿಟ್ಟಿದ್ದರು.

ನೌಕರರು ನ್ಯಾಯಯುತವಾದ ಹೋರಾಟವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ರೈತ, ಕಾರ್ಮಿಕರ ಪರವಾಗಿ ಇರುವವರನ್ನು ಬಂಧಿಸಲಾಗುತ್ತಿದೆ. ನಾವು ಇದನ್ನು ಸಹಿಸುವುದಿಲ್ಲ. ಸಾರಿಗೆ ನೌಕರರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಇದ್ದು ರಾಜ್ಯಾದ್ಯಂತ  ಹೋರಾಟ ಮಾಡಲಾಗುವುದು ಎಂದಿದ್ದರು.

Tap to resize

Latest Videos

ಚಳವಳಿಗೆ ಇಳಿದ ಸಾರಿಗೆ ಸಿಬ್ಬಂದಿ ಕುಟುಂಬ

KSRTC, ಬಿಎಂಟಿಸಿ ಹೆಮ್ಮೆಯ ಸಂಸ್ಥೆಗಳು. ಆದರೆ, ಅಲ್ಲಿನ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ವೇತನ ತಾರತಮ್ಯವಿದೆ. ರಾಜ್ಯ ಸರ್ಕಾರದ 77 ನಿಗಮಗಳ ಪೈಕಿ 75ಕ್ಕೆ ಸರಿಯಾದ ವೇತನ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಸಾರಿಗೆ ಸಂಸ್ಥೆಗಳಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಒಂದು ವಾರದಿಂದ ಕೆಎಸ್‌ ಆರ್‌ ಟಿಸಿ ಸಿಬ್ಬಂದಿ ಮುಷ್ಕರ ಮನಡೆಸುತ್ತಿದ್ದಾರೆ. ಆರನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಬೇಕು ಎನ್ನುವುದು ಪ್ರಮುಖ  ಬೇಡಿಕೆ. ಸರ್ಕಾರ ಮಾತುಕತೆಗೆ ಬನ್ನಿ ಎಂದು ಆಹ್ವಾನ  ನೀಡಿದ್ದರೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ. ಸಾಮಾನ್ಯ ಜನ ಮಾತ್ರ ಹೈರಾಣವಾಗುತ್ತಿದ್ದಾರೆ.

 

click me!