ಚಂದ್ರದರ್ಶನ, ಮಂಗಳವಾರದಿಂದ ರಂಝಾನ್ ಉಪವಾಸ ಆರಂಭ

By Suvarna News  |  First Published Apr 12, 2021, 8:28 PM IST

ರಂಝಾನ್ ತಿಂಗಳ ಚಂದ್ರದರ್ಶನ/ ಮಂಗಳವಾರದಿಂದ ಆಚರಣೆ/ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರಿಂದ ಪ್ರಕಟಣೆ


ಉಡುಪಿ(ಏ. 12) ರಂಝಾನ್ ತಿಂಗಳ ಚಂದ್ರದರ್ಶನವಾಗಿದೆ.  ಸೋಮವಾರ ರಂಝಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಮಂಗಳವಾರ ರಂಝಾನ್ ಚಾಂದ್ 1 ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ತಿಳಿಸಿದ್ದಾರೆ.

ರಂಝಾನ್ ಉಪವಾಸ ಯಾಕೆ ಮಾಡಬೇಕು? 

Latest Videos

undefined

ಮಂಗಳವಾರದಿಂದ ರಂಝಾನ್ ಉಪವಾಸ ಆರಂಭವಾಗಲಿದೆ ಎಂದು ಮುಹಮ್ಮದ್ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ, ಈದ್ಗಾ ಮಸೀದಿ ಮಂಗಳೂರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಂಗಳವಾರದಿಂದ ರಂಝಾನ್ ಆಚರಣೆ ಶುರುವಾಗಲಿದೆ. 

ಚಂದ್ರದರ್ಶನ್ ಕ್ಯಾಲಿಕಟ್ ನಲ್ಲಿ ಆಗಿದೆ.  ರಂಝಾನ್ ಉಪವಾಸಕ್ಕೆ ಅದರದ್ದೆ ಪ್ರಾಮುಖ್ಯ ಇದ್ದು ಇಸ್ಲಾಂನಲ್ಲಿ ಆಚರಣೆಗೆ ಪ್ರಮುಖ ಸ್ಥಾನವಿದೆ. 

click me!