ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

Published : Jul 28, 2024, 09:32 PM ISTUpdated : Jul 29, 2024, 11:30 AM IST
ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಸಾರಾಂಶ

ಸಮೃದ್ಧಿ ಆಟವಾಡಲು ಹೋಗಿ ಬಾಲಕಿ ಕೃಷ್ಣಾ ನದಿ ಪಾಲಾಗಿದ್ದಳು. ಸಮೃದ್ಧಿ ಹುಡುಗಾಟಕ್ಕೆ ಅಗ್ನಿಶಾಮಕ ಸಿಬ್ಬಂದಿ ,ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯ ಆರಂಭಿಸಿದ್ದರು. ಶೋಧಕಾರ್ಯಕ್ಕೆ ಸ್ಥಳೀಯ ಮೀನುಗಾರರು ಕೂಡ ಸಾಥ್ ಕೊಟ್ಟಿದ್ದರು. 

ಬಾಗಲಕೋಟೆ(ಜು.28):  ಕೃಷ್ಣಾ ನದಿಯ ಹಿನ್ನೀರಿನಲ್ಲಿ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಸಮೃದ್ಧಿ ತಿಮ್ಮಪ್ಪನವರ್ (4) ಮೃತ ಬಾಲಕಿ. 

ಸಮೃದ್ಧಿ ಆಟವಾಡಲು ಹೋಗಿ ಬಾಲಕಿ ಕೃಷ್ಣಾ ನದಿ ಪಾಲಾಗಿದ್ದಳು. ಸಮೃದ್ಧಿ ಹುಡುಗಾಟಕ್ಕೆ ಅಗ್ನಿಶಾಮಕ ಸಿಬ್ಬಂದಿ ,ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯ ಆರಂಭಿಸಿದ್ದರು. ಶೋಧಕಾರ್ಯಕ್ಕೆ ಸ್ಥಳೀಯ ಮೀನುಗಾರರು ಕೂಡ ಸಾಥ್ ಕೊಟ್ಟಿದ್ದರು. 

ಶಿರೂರು ಗುಡ್ಡ ಕುಸಿತ ದುರ್ಘಟನೆ, ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ಪ್ರಣವಾನಂದ ಶ್ರೀ ಆಗ್ರಹ

ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ, ಪೊಲೀಸ್‌ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಹಿನ್ನೀರಿನಿಂದ ಸಮೃದ್ಧಿ ಶವ ಹೊರತೆಗೆದಿದ್ದಾರೆ. ಸಮೃದ್ಧಿ ಶವ ಸಿಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಸ್ಥಳಕ್ಕೆ ತಹಶೀಲ್ದಾರ ಸದಾಶಿವ ಮುಕ್ಕೋಜಿ, ಜಮಖಂಡಿ ಗ್ರಾಮಿಣ ಠಾಣೆಯ ಪಿ.ಎಸ್.ಐ  ಎಚ್.ಎಮ್.ಹೊಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!