ಶಿರೂರು ಗುಡ್ಡ ಕುಸಿತ ದುರ್ಘಟನೆ, ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ಪ್ರಣವಾನಂದ ಶ್ರೀ ಆಗ್ರಹ

By Girish Goudar  |  First Published Jul 28, 2024, 8:45 PM IST

ಕೇರಳದ ಅರ್ಜುನ್‌ಗೆ ಕೇರಳಿಗರಿಂದ ದೊರೆತ ಧ್ವನಿ, ಮೃತಪಟ್ಟ ನಮ್ಮ ಸ್ಥಳೀಯರಿಗೆ ದೊರೆತಿಲ್ಲ ಅನ್ನೋದು ವಿಪರ್ಯಾಸ. ಐಆರ್‌ಬಿ ವಿರುದ್ಧ ಅಂಕೋಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಯಾರೂ ಕೂಡಾ ಐಆರ್‌ಬಿ ವಿರುದ್ಧ ಕ್ರಮಕ್ಕೆ ಮುಂದಾಗ್ತಿಲ್ಲ, ಎಲ್ಲರೂ ಅದರ ಜತೆ ಶಾಮೀಲಾಗಿದ್ದಾರೆ. ಐಆರ್‌ಬಿ ಕಂಪನಿಯೇ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಶ್ರೀ ಪ್ರಣವಾನಂದ ಸ್ವಾಮೀಜಿ 
 


ಕಾರವಾರ(ಜು.28):  ಅಂಕೋಲಾದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರ್ಘಟನೆಯಲ್ಲಿ 7 ಈಡಿಗ ಸಮುದಾಯದ ಜನರು ಮೃತರಾಗಿದ್ದು, ಅವರಿಗೆ ಅನ್ಯಾಯವಾಗಿದೆ. ಇನ್ನೂ ಕೂಡಾ ಸ್ಥಳೀಯರಾದ ಜಗನ್ನಾಥ್ ನಾಯ್ಕ್ ಹಾಗೂ ಲೋಕೇಶ್ ಅವರ ಮೃತದೇಹ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಮೃತರಾದವರ ಅಂತ್ಯಸಂಸ್ಕಾರಕ್ಕೆ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದಿಲ್ಲ. ಮೃತರ ಕುಟುಂಬಕ್ಕೆ ಕೇವಲ 5 ಲಕ್ಷ ರೂ.‌ಪರಿಹಾರ ಕೊಟ್ಟಿದೆ, ಇದನ್ನು 1 ಕೋಟಿ ರೂ.ಗೆ ಏರಿಸಬೇಕು. ಸಂಸದ ಕಾಗೇರಿ ಎರಡು ದಿನಗಳಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಸಭೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ರೆ ಈ ಕುಟುಂಬಗಳ ಜತೆ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸ್ತೇನೆ ಎಂದು ಸಂಬಂಧಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾತನಾಡಿದ ಪ್ರಣವಾನಂದ ಶ್ರೀಗಳು, ಕೇರಳದ ಅರ್ಜುನ್‌ಗೆ ಕೇರಳಿಗರಿಂದ ದೊರೆತ ಧ್ವನಿ, ಮೃತಪಟ್ಟ ನಮ್ಮ ಸ್ಥಳೀಯರಿಗೆ ದೊರೆತಿಲ್ಲ ಅನ್ನೋದು ವಿಪರ್ಯಾಸ. ಐಆರ್‌ಬಿ ವಿರುದ್ಧ ಅಂಕೋಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಯಾರೂ ಕೂಡಾ ಐಆರ್‌ಬಿ ವಿರುದ್ಧ ಕ್ರಮಕ್ಕೆ ಮುಂದಾಗ್ತಿಲ್ಲ, ಎಲ್ಲರೂ ಅದರ ಜತೆ ಶಾಮೀಲಾಗಿದ್ದಾರೆ. ಐಆರ್‌ಬಿ ಕಂಪೆನಿಯೇ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ. 

Tap to resize

Latest Videos

undefined

ಶಿರೂರು ದುರ್ಘಟನೆ ನಡೆದು 12 ದಿನವಾದ್ರೂ ಸಿಗದ ಜಗನ್ನಾಥ್ ಮೃತದೇಹ, ಈಗಲೂ ತಂದೆಗಾಗಿ ಕಾಯುತ್ತಿರೋ ಪುತ್ರಿಯರು..!

ಶೋಧ ಕಾರ್ಯಾಚರಣೆ ನಡೆಸಿ ತಂದೆಯ ಮೃತದೇಹ ಹುಡುಕಿಕೊಡುವಂತೆ ಜಗನ್ನಾಥ್ ಪುತ್ರಿಯರು ಆಗ್ರಹಿಸಿದ್ದಾರೆ. 

click me!