ಮಹಿಳಾ ಪೊಲೀಸ್ ಅಧಿಕಾರಿಯೋರ್ವರು ಲಂಚ ಡೆಯುವಾಗ ಸಿಕ್ಕಿಬಿದ್ದಿದ್ದು ಇದೀಗ ಅವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಲಬುರಗಿ (ಡಿ.10): ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿವೈಎಸ್ಪಿಯೊಬ್ಬರಿಗೆ 4 ವರ್ಷ ಜೈಲುಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಸಿಆರ್‌ಇ ಸೆಲ್)ದಲ್ಲಿ ಡಿವೈಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಜಯಲಕ್ಷ್ಮೀ ಅವರು, 2015ರಲ್ಲಿ ಶಹಬಾದ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ 7 ವರ್ಷಗಳ ಬಳಿಕ ಅಪರಾಧಿಗೆ ದಂಡ ವಿಧಿಸಿ ಜೈಲಿಗೆ ಕಳುಹಿಸಿದೆ.
undefined
ಮದುವೆಗಳೇ ಖದೀಮರ ಟಾರ್ಗೆಟ್: ಸ್ವಲ್ಪ ಯಾಮಾರಿದ್ರು ಚಿನ್ನದ ಸರ ಕಿತ್ತು ಪರಾರಿ..
2015ರ ಡಿಸೆಂಬರ್‌ನಲ್ಲಿ ವಾಹನಕ್ಕೆ ಡಿಸೇಲ್ ಹಾಕಿಸುವಾಗ ದೇವನತೇಗನೂರಿನ ಬಂಕ್‌ನ ಸಿಬ್ಬಂದಿ ಜತೆ ರಾಜು ಎಂಬುವರು ಜಗಳವಾಡಿದ್ದರು. ಈ ಸಂಬಂಧ ರಾಜು ವಿರುದ್ಧ ಶಹಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜುವನ್ನು ಬಂಧಿಸಿ, ಟಾಟಾ ಸುಮೋ ಜಪ್ತಿ ಮಾಡಲಾಗಿತ್ತು.
ಜಮೀನು ಪಡೆದು ಹೊರ ಬಂದ ರಾಜು, ತನ್ನ ವಾಹನ ಬಿಡಿಸಿಕೊಳ್ಳಲು ಬಂದಾಗ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ವಿಜಯಲಕ್ಷ್ಮೇ .25,000ಕ್ಕೆ ಬೇಡಿಕೆಯಿಟ್ಟಿದ್ದರು. ಈ ವೇಳೆ ಲೋಕಾಯುಕ್ತಕ್ಕೆ ರಾಜು ದೂರು ನೀಡಿದ್ದು, ಲಂಚ ಸ್ವೀಕರಿಸುವಾಗ ಹಣದ ಸಮೇತ ಸಿಕ್ಕಿಬಿದ್ದಿದ್ದರು. ಈ ಸಂಬಂಧ ಕಲಬುರಗಿ ಲೋಕಾಯುಕ್ತ ಕಚೇರಿಯಲ್ಲಿ ಕೇಸ್ ದಾಖಲಾಗಿ, ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್ ಸಲ್ಲಿಸಲಾಗಿತ್ತು.