ಶಿವಮೊಗ್ಗ: ಅಡಕೆ ಬೇಯಿಸುವ ಹಂಡೆಗೆ ಬಿದ್ದಿದ್ದ ಮಗು ಸಾವು

By Suvarna NewsFirst Published Sep 12, 2021, 10:45 PM IST
Highlights

* ಅಡಕೆ ಬೇಯಿಸುವ ಹಂಡೆಗೆ ಬಿದ್ದಿದ್ದ ಮಗು ಸಾವು
* ಆ. 29ರಂದು ಧನರಾಜ್ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ ಮಗು
* ಮಂಜುನಾಥ್ ಎಂಬುವವರ ಪುತ್ರ 4 ವರ್ಷದ ಧನರಾಜ್

ಶಿವಮೊಗ್ಗ, (ಸೆ.12): ಕುದಿಯುತ್ತಿರುವ ಅಡಕೆ ಬೇಯಿಸುವ ಹಂಡೆಗೆ ಬಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಭದ್ರಾಾವತಿ  ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಎಂಬುವವರ ಪುತ್ರ 4 ವರ್ಷದ ಧನರಾಜ್ ಮೃತಪಟ್ಟ ಮಗುವಾಗಿದೆ. ಆ. 29ರಂದು ಧನರಾಜ್ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾನೆ.

ಶಿವಮೊಗ್ಗ ಗಣಿ ಸ್ಫೋಟ ಕೇಸ್: DNA ಪರೀಕ್ಷೆಯಿಂದ 6ನೇ ಮೃತ ವ್ಯಕ್ತಿ ಗುರುತು ಪತ್ತೆ

ಮಂಜುನಾಥ್ ಅವರ ಮನೆ ಹಿಂಭಾಗ ಅಡಕೆ ಬೇಯಿಸುವ ಕೆಲಸ ನಡೆಯುತ್ತಿತ್ತು. ಅಡಕೆ ಬೇಯಿಸುವ ಹಂಡೆಯ ಪಕ್ಕದಲ್ಲಿಯೇ ಸ್ಟೂಲ್ ಒಂದನ್ನು ಇರಿಸಲಾಗಿತ್ತು. ಮನೆಯವರ ಗಮನಕ್ಕೆ ಬಾರದೆ ಈ ಕಡೆ ಬಂದ ಮಗು ಸ್ಟೂಲ್ ಹತ್ತಿಹಂಡೆಯ ಕಡೆ ಬಗ್ಗಿದಾಗ ಈ ಘಟನೆ ನಡೆದಿದೆ. 

ಕುದಿಯುತ್ತಿದ್ದ ಅಡಕೆ ಹಂಡೆಗೆ ಬಿದ್ದ ಮಗು ಕೂಗಿದಾಕ್ಷಣ ಧಾವಿಸಿದ ಪೋಷಕರು ಮಗುವನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತೀವ್ರ ಸುಟ್ಟ ಗಾಯಗಳಾಗಿತ್ತು. ತಕ್ಷಣವೇ ಮಗುವನ್ನು ಶಿವಮೊಗ್ಗದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. 13 ದಿನಗಳ ಸತತ ಹೋರಾಟದ ಬಳಿಕ ಮಗು ಚಿಕಿತ್ಸೆ ವಿಫಲಕಾರಿಯಾಗದೇ ಸಾವು ಕಂಡಿದೆ.

ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಡಕೆ ಗೊನೆ ತೆಗೆಯುವಾಗ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಸಾಕಷ್ಟು ನಡೆದಿದೆ. ಆದರೆ ಅಡಕೆ ಬೇಯಿಸುವ ಹಂಡೆಗೆ ಬಿದ್ದು ಮೃತಪಟ್ಟ ಘಟನೆ ಇತ್ತೀಚಿನ ದಶಕದಲ್ಲಿ ಇದೇ ಮೊದಲು ಎನ್ನಲಾಗಿದೆ.

click me!