Haveri; ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ, 4 ಕುರಿಗಳ ಸಾವು

By Suvarna News  |  First Published Jun 7, 2022, 11:53 PM IST

ಮಗಳ ಮದುವೆ ಸಿದ್ಧತೆಯಲ್ಲಿದ್ದ  ಮನೆಗೆ ರಾತ್ರೋರಾತ್ರಿ ಬೆಂಕಿ ಬಿದ್ದು, ಇಡೀ ಮನೆಯೇ ಸುಟ್ಟು ಕರಕಲಾಗಿದೆ.   ಮದುವೆಗಾಗಿ ಜೋಡಿಸಿಟ್ಟಿದ್ದ ಬಂಗಾರದ ಆಭರಣ, ವಸ್ತ್ರ, ಹಣ ಎಲ್ಲವೂ ಬೆಂಕಿ ಪಾಲಾಗಿವೆ. 


ಹಾವೇರಿ (ಜೂ.7): ಮಗಳ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾತ್ರೋರಾತ್ರಿ ಬೆಂಕಿ ಬಿದ್ದು, ಇಡೀ ಮನೆಯೇ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ 4 ಕುರಿಗಳು ಅಸುನೀಗಿವೆ. ಮಗಳ ಮದುವೆಗಾಗಿ ಜೋಡಿಸಿಟ್ಟಿದ್ದ ಬಂಗಾರದ ಆಭರಣ, ವಸ್ತ್ರ, ಹಣ ಎಲ್ಲವೂ ಬೆಂಕಿ ಪಾಲಾಗಿವೆ. 

ಮನೆಯ ಮಾಲೀಕ ಮೈನುದ್ದೀನ್‌ ಸಾಬ್‌ ಜಾಫರ್ ಮುಲ್ಲಾನವರ ಮತ್ತು ಅವರ ಮಗ ಮಾತ್ರ ಮನೆಯಲ್ಲಿ ಮಲಗಿದ್ದರು. ಅವರ ಪತ್ನಿ, ಮಗಳು, ಇನ್ನೊಬ್ಬ ಮಗ ಸೇರಿದಂತೆ ಎಲ್ಲರೂ ಪಕ್ಕದ ಸಹೋದರನ ಮನೆಯಲ್ಲಿ ಮಲಗಿದ್ದರು. ರಾತ್ರಿ 12.30 ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿಯಿಂದ ಇಡೀ ಮನೆ ಸುಟ್ಟು ಕರಕಲಾಗಿದೆ.

Latest Videos

undefined

‘ಎರಡು ತಿಂಗಳ ನಂತರ ಮಗಳ ಮದುವೆ ಇರುವ ಕಾರಣ ಸುಮಾರು ₹1 ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಬಟ್ಟೆ, ₹1.5 ಲಕ್ಷ ನಗದು, ಬಂಗಾರದ ಆಭರಣಗಳನ್ನು ಸಂಗ್ರಹಿಸಿದ್ದೆ. ಎಲ್ಲವೂ ಸುಟ್ಟು ಹೋಗಿವೆ. ಮಗಳ ಮದುವೆ ಹೇಗೆ ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ. ಮನೆಯಲ್ಲಿದ್ದ ಆಹಾರ ಧಾನ್ಯ, ಪಾತ್ರೆ ಎಲ್ಲವೂ ಸುಟ್ಟು ಬೂದಿಯಾಗಿವೆ. ನಮಗೆ ಉಳಿದಿರುವುದು ಕಣ್ಣೀರು ಮಾತ್ರ’ ಎಂದು ಮೈನುದ್ದೀನ್‌ಸಾಬ್‌ ಎದೆಬಡಿದುಕೊಂಡು ರೋದಿಸಿದರು. 

KUD ANNUAL CONVOCATION; ಎಂ.ಎ ಪತ್ರಿಕೋದ್ಯಮದಲ್ಲಿ ಸುಜಾತ ಜೋಡಳ್ಳಿಗೆ 9 ಚಿನ್ನದ ಪದಕ!

ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ, ಬಿಇಒ ಪಿ.ಕೆ. ಚಿಕ್ಕಮಠ, ಪಿಡಿಒ ನೃಪಾರಿ ಬೋಸರಡ್ಡಿ, ಹುನಗುಂದ ಗ್ರಾ.ಪಂ ಅಧ್ಯಕ್ಷ ಗಡಿಗೆಪ್ಪ ಹೆಳವರ, ಕಂದಾಯ ನಿರೀಕ್ಷಕ ಆರ್.ಎಂ.ನಾಯಕ, ಗ್ರಾಮಲೆಕ್ಕಾಧಿಕಾರಿ ಖ್ವಾಜಾಮೈದುನ್ ಕಿಲ್ಲೆದಾರ ಭೇಟಿ ನೀಡಿ, ಹಾನಿಯಾದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಜತೆಗೆ ಸರ್ಕಾರದಿಂದ ಬರುವ ಸೌಲಭ್ಯಗಳು ತಕ್ಷಣ ಸಿಗುವಂತೆ ವರದಿ ಕಳುಹಿಸುವದಾಗಿ ತಿಳಿಸಿದರು.

ತಾಲ್ಲೂಕು ಪಶು ವೈದ್ಯರಾದ ಡಾ.ದೊಡ್ಡಮನಿ, ಡಾ.ಅರವಟ್ಟಿ ಭೇಟಿ ನೀಡಿ, ‘4 ಕುರಿ ಸತ್ತಿದ್ದು, ಪಾರಾದ 30 ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ಸತ್ತಿರುವ ಕುರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸುತ್ತೇವೆ’ ಎಂದು ತಿಳಿದರು.ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Charmadi Ghatನಲ್ಲಿ 20 ಅಡಿ ಕಂದಕಕ್ಕೆ ಬಿದ್ದ ಇನೋವಾ ಕಾರು, 5 ಮಂದಿ ಪಾರು 

ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ ಕಳ್ಳತನ: ಮಠದಲ್ಲಿನ ಪುರಾತನ ಸ್ಪಟಿಕಲಿಂಗವನ್ನ ದುಷ್ಕರ್ಮಿಗಳು ಕಳ್ಳತನ ಮಾಡಿದ ಘಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. 

ಲಿಂಗದಹಳ್ಳಿ ಗ್ರಾಮದಲ್ಲಿ ಲಿಂಗದಹಳ್ಳಿ ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗವನ್ನ ಖದೀಮರು ಕದ್ದಿದ್ದಾರೆ.  ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿರುವ ಈ‌ ಮಠ ಬಹಳಷ್ಟು ಹೆಸರುವಾಸಿಯಾಗಿದೆ. 

ಸ್ವಾಮೀಜಿ ಮಠದಲ್ಲಿ ಇಲ್ಲದಿದ್ದಾಗ ಕೃತ್ಯ ನಡೆದಿದೆ ಅಂತ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಮಾಹಿತಿ ನೀಡಿದ್ದಾರೆ. ಸುಮಾರು 8ನೇ ಶತಮಾನದ ಬೆಲೆಕಟ್ಟಲಾಗದ ಸ್ಪಟಿಕಲಿಂಗವನ್ನ ಖದೀಮರಿ ಕದ್ದಿದ್ದಾರೆ. ಸ್ವಾಮೀಜಿ ದುಷ್ಕರ್ಮಿಗಳು ಇಲ್ಲದಿದ್ದಾಗ ಹೊಂಚುಹಾಕಿ ಕಳ್ಳತನ ಮಾಡಿದ್ದಾರೆ. 

ಚಿಕ್ಕಮಗಳೂರು ಬಿಜೆಪಿಯಿಂದ ಕೆಪಿಸಿಸಿ ಕಚೇರಿಗೆ ಚಡ್ಡಿ ರವಾನೆ

ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ  ಪ್ರಾಧ್ಯಾಪಕ: ಪ್‌ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ‌ವೊಂದು ಕೇಳಿ ಬಂದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು(ಮಂಗಳವಾರ) ನಡೆದಿದೆ.  

ಬಂಕಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ನಿಂಗಪ್ಪ ಕಲಕೋಟಿ ಎಂಬುವವರು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿ ಪಾಠ ಹೇಳಿಕೊಡುವುದಾಗಿ ಮನೆಗೆ ಕರೆಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ಒಂದೂವರೆ ವರ್ಷಗಳಿಂದ ನಿಂಗಪ್ಪ ಕಲಕೋಟಿ ವಿದ್ಯಾರ್ಥಿನಿ ಮೇಲೆ ಏಳೆಂಟು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಲೈಂಗಿನ ದೌರ್ಜನ್ಯ ಎಸಗಿದ್ದಲ್ಲದೆ ನಿಂಗಪ್ಪ ಕಲಕೋಟಿ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿದ್ದಾರೆ. 

ಆರೋಪಿ ನಿಂಗಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಂಗಪ್ಪ ಎಸಗಿದ ಕೃತ್ಯದಿಂದ ಕಾಲೇಜು ವಿದ್ಯಾರ್ಥಿನಿ ಇದೀಗ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. 
ಸದ್ಯ ಸಂತ್ರಸ್ತ ವಿದ್ಯಾರ್ಥಿನಿಯನ್ನು ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ನೊಂದ ವಿದ್ಯಾರ್ಥಿನಿ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. 

click me!