ಚಾಮರಾಜನಗರ ಜಿಲ್ಲೆಯ ಪ್ರಸಾದ ದುರಂತ ಮಾಸುವ ಮುನ್ನವೇ ಬಾಗಲಕೋಟೆ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಬಾಗಲಕೋಟೆ, [ಡಿ.16]: ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಡಿಸ್ಟಿಲರಿ ಫ್ಯಾಕ್ಟರಿಯ ಬಾಯ್ಲರ್ ಬ್ಲಾಸ್ಟ್ ಆಗಿ 6 ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.
ಹಾಗೇ ಐವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಈ ಡಿಸ್ಟರ್ ಫ್ಯಾಕ್ಟರಿಯು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸೇರಿದೆ.
ಮುರುಗೇಶ್ ನಿರಾಣಿ ಅವರು ಹಲವು ವರ್ಷಗಳಿಂದ ಈ ಫ್ಯಾಕ್ಟರಿಯನ್ನ ನಡೆಸಿಕೊಂಡು ಬರುತ್ತಿದ್ದಾರೆ. ಇಂದು [ಭಾನುವಾರ] ಮಧ್ಯಹ್ನ 12 ಗಂಟೆ ಸುಮಾರಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟಗೊಂಡು ದುರ್ಘಟನೆ ನಡೆದಿದೆ.
ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ, ಮುಧೋಳ ಪೊಲೀಸರು ಸ್ಥಳಕ್ಕೆ ಬಂದು ಘಟನೆ ಹೇಗೆ ನಡೆಯಿತು ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.