ಶಿವಮೊಗ್ಗ (ಆ.29): ಶಿವಮೊಗ್ಗ ತುಂಗಾನಗರ ಪೋಲಿಸರು ಭರ್ಜರಿ ಬೇಟೆ ನಡೆಸಿದ್ದು, ನಾಲ್ವರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.
ತುಂಗಾನಗರ ಪಿಐ ದೀಪಕ್ ನೇತೃತ್ವದಲ್ಲಿಂದು ಕಾರ್ಯಾಚರಣೆ ನಡೆದಿದ್ದು 10,52,450 ರು. ಮೌಲ್ಯದ 22 ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
undefined
ಬಂಧಿತರನ್ನು ಭದ್ರಾವತಿಯ ಸುಹೇಲ್ ಪಾಷಾ (22), ಶಿವಮೊಗ್ಗದ ಮೊಹಮದ್ ಹ್ಯಾರೀಸ್ (22), ಫಜಲ್ (20), ಸಾಹೀಲ್ ಶೇಟ್ (20) ಎನ್ನಲಾಗಿದೆ.
ಅರಣ್ಯಾಧಿಕಾರಿ ಗುಂಡೇಟು : ಶ್ರೀಗಂಧ ಕಳ್ಳ ಬಲಿ
ತುಂಗಾನಗರ ಪೊಲೀಸ್ ಠಾಣೆಯ 03 ಪ್ರಕರಣ , ದೊಡ್ಡಪೇಟೆ ಪೊಲೀಸ್ ಠಾಣೆಯ 5 ಪ್ರಕರಣ , ವಿನೋಬನಗರ ಪೊಲೀಸ್ ಠಾಣೆಯ 2 ಪ್ರಕರಣ , ಜಯನಗರ ಪೊಲೀಸ್ ಠಾಣೆಯ 02 ಪ್ರಕರಣ , ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ 1 ಪ್ರಕರಣ , ಶಿವಮೊಗ್ಗ ಗ್ರಾಮಾಂತರ ಠಾಣೆಯ 1 ಪ್ರಕರಣ ಕುಂಸಿ ಪೊಲೀಸ್ ಠಾಣೆಯ 1 ಪ್ರಕರಣ , ಶಿರಾಳಕೊಪ್ಪ ಠಾಣೆಯ 03 ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿತ್ತು.
ದಾವಣೆಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ 02 ಪ್ರಕರಣ, ಚಿಕ್ಕಮಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣೆಯ 01 ಪ್ರಕರಣ ಮತ್ತು ಕಡೂರು ಪೊಲೀಸ್ ಠಾಣೆಯ 1 ಪ್ರಕರಣ ಒಟ್ಟು 22 ಪ್ರಕರಣಗಳಲ್ಲಿ ಈ ನಾಲ್ವರು ಅರೋಪಿಗಳಾಗಿದ್ದಾರೆ.
ಒಟ್ಟು 10,52,450 ರು. ಮೌಲ್ಯದ 22 ಬೈಕ್ ಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.