ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಘಟನೆ ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಬೇಟೆಗಾಗಿ ಬಳಸಲಾಗುತ್ತಿದ್ದ ಬಂಧಿತರಿಂದ ನಾಡಬಂದೂಕು, ಡೈನಾಮೇಟ್, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಟಿಟ್ಟುಬ ಪಕ್ಷಿಯನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ(ಏ.22): ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಘಟನೆ ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಬೇಟೆಗಾಗಿ ಬಳಸಲಾಗುತ್ತಿದ್ದ ಬಂಧಿತರಿಂದ ನಾಡಬಂದೂಕು, ಡೈನಾಮೇಟ್, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಟಿಟ್ಟುಬ ಪಕ್ಷಿಯನ್ನು ವಶಪಡಿಸಿಕೊಂಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನಪ್ರಕಾಶ್ ಬಂಧಿತ ಬೇಟೆಗಾರರು. ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಗಮನ ಬೇರೆಡೆಗೆ ಸೆಳೆದು ಬೇಟೆಯಾಡುತ್ತಿದ್ದರು. ಈ ಹಿಂದೆಯೂ ಬೇಟೆಯಾಡಿ ಇವರು ಸಿಕ್ಕಿಬಿದ್ದಿದ್ದರು ಎಂದು ಡಿಎಫ್‌ಒ ಡಾ.ಎಸ್. ರಮೇಶ್ ತಿಳಿಸಿದ್ದಾರೆ.
ಲಾಕ್‌ಡೌನ್ ವರದಾನ:
ಲಾಕ್‌ಡೌನ್‌ನಿಂದ ಕಳ್ಳಬೇಟೆಗಾರರ ಕರಾಮತ್ತು ಹೆಚ್ಚಾಗುತ್ತಿದ್ದು, ಈ ವರ್ಷ ಕಾವೇರಿ ವನ್ಯಜೀವಿ ಧಾಮದಲ್ಲಿ ಪದೇ ಪದೇ ಬೆಂಕಿ ಬೀಳುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿತ್ತು. ಇದರಿಂದಾಗಿ 1 ವಾರದಿಂದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಕಳ್ಳ ಬೇಟೆಗಾರರಿಂದ ಬೆಂಕಿಗೆ ಆಹುತಿಯಾಗಿತ್ತು. ಬೇಟೆಗಾರರು ಮಂಗಳವಾರವೂ ತಮ್ಮ ಚಾಳಿಯನ್ನು ಮುಂದುವಸುತ್ತಿದ್ದಾಗ ಪೊಲೀಸರ ಅತಿಥಿಯಾಗಿದ್ದಾರೆ.
ಕೊರೋನಾ ವಾರಿಯರ್ ಪೌರ್ ಕಾರ್ಮಿಕನ ಮೇಲೆ ಹಲ್ಲೆ
ಕಾರ್ಯಾಚರಣೆಯಲ್ಲಿ ಎಸಿಎಫ್ ಅಂಕರಾಜು, ಆರ್‌ಎಫ್‌ಒ ರಾಜಶೇಖರಪ್ಪ, ಅರಣ್ಯ ರಕ್ಷಕ ಮಧುಕುಮಾರ್, ಅನಿಲ್‌ವಾಲೀಕಾರ, ಪುಂಡಲೀಕ ಕಂಠೇಕರ, ರಾಘವೇಂದ್ರ ರಾಥೋಡ್, ಅನಿಲ್‌ಪಡಶೆಟ್ಟಿ, ಚಳ್ಳಕೆರೆ ಮಾದೇಶ್, ಚಾಲಕ ಮಾದೇಶ್ ಪಾಲ್ಗೊಂಡಿದ್ದರು.