ಶಿಗ್ಗಾಂವಿ: ಬಿಸಿಯೂಟ ಸೇವಿಸಿ 37 ವಿದ್ಯಾರ್ಥಿಗಳು ಅಸ್ವಸ್ಥ

By Kannadaprabha News  |  First Published Jul 26, 2023, 12:53 PM IST

ಮಧ್ಯಾಹ್ನ ಬಿಸಿಯೂಟಕ್ಕಾಗಿ ಪಲಾವು ಮಾಡಿದ್ದು, ಒಟ್ಟು 166 ವಿದ್ಯಾರ್ಥಿಗಳು ಪಲಾವನ್ನು ಸೇವಿಸಿದ್ದರು. ಇದನ್ನು ಸೇವಿಸಿದ ಒಂದು ಗಂಟೆಯ ನಂತರ 2-3 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಹಲವು ವಿದ್ಯಾರ್ಥಿಗಳಲ್ಲಿ ತಲೆ ಸುತ್ತುವುದು, ವಾಂತಿ ಕಂಡು ಬಂದಿದೆ. 

ಶಿಗ್ಗಾಂವಿ(ಜು.26):  ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿಯೂಟ ಸೇವಿಸಿ 37 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. 

ಮಧ್ಯಾಹ್ನ ಬಿಸಿಯೂಟಕ್ಕಾಗಿ ಪಲಾವು ಮಾಡಿದ್ದು, ಒಟ್ಟು 166 ವಿದ್ಯಾರ್ಥಿಗಳು ಪಲಾವನ್ನು ಸೇವಿಸಿದ್ದರು. ಇದನ್ನು ಸೇವಿಸಿದ ಒಂದು ಗಂಟೆಯ ನಂತರ 2-3 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಹಲವು ವಿದ್ಯಾರ್ಥಿಗಳಲ್ಲಿ ತಲೆ ಸುತ್ತುವುದು, ವಾಂತಿ ಕಂಡು ಬಂದಿದೆ. 

Tap to resize

Latest Videos

undefined

ಗುಂಡ್ಲುಪೇಟೆ: ಕಲುಷಿತ ಆಹಾರ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಸಾರ್ವಜನಿಕರು, ಶಿಕ್ಷಕರು ಶಿಗ್ಗಾಂವಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಇವರನ್ನು ದಾಖಲಿಸಿದರು. ಬಳಿಕ, ಇವರನ್ನೆಲ್ಲಾ ಮನೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಮಸಾಲೆ ಹಾಗೂ ಇತರ ಪದಾರ್ಥಗಳಿಂದ ಗ್ಯಾಸ್ಟ್ರಬಲ್‌ ಆಗಿ ಈ ರೀತಿಯಾಗುವುದು ಉಂಟು. ವಿದ್ಯಾರ್ಥಿಗಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಹನುಮಂತಪ್ಪ ಪಿ.ಎಚ್‌. ತಿಳಿಸಿದ್ದಾರೆ.

click me!