ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿರುವ ಹುಂಡಿಗಳಲ್ಲಿ ಒಟ್ಟು 36,86,183 ಕಾಣಿಕೆ ಸಂಗ್ರಹ|ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನ|
ಹೂವಿನಹಡಗಲಿ(ಫೆ.16): ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿರುವ 9 ತಾತ್ಕಾಲಿಕ ಹುಂಡಿ ಹಾಗೂ 3 ಮುಖ್ಯ ಹುಂಡಿಗಳಲ್ಲಿ ಒಟ್ಟು 36,86,183 ಕಾಣಿಕೆ ಸಂಗ್ರಹವಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ ರಾವ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇಗುಲಕ್ಕೆ ಭೇಟಿ ನೀಡಿದ ಸಂಸದ ವೈ. ದೇವೇಂದ್ರಪ್ಪ, ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಮುಜರಾಯಿ ಇಲಾಖೆಯ ಬಳ್ಳಾರಿ ಅಧೀಕ್ಷಕ ಎಚ್.ಕೆ. ಮಲ್ಲಪ್ಪ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ ನಾಗಪ್ಪನವರ್, ಮುಖಂಡರಾದ ಜಗದೀಶಗೌಡ, ಮಾಲತೇಶ, ಶಂಕರಗೌಡ ಸೇರಿದಂತೆ ಇತರರಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆಯ ಹಣ ಎಣಿಕೆ ಮಾಡುವಾಗ ಸಂಸದ ವೈ. ದೇವೇಂದ್ರಪ್ಪ ಭೇಟಿ ನೀಡಿದ್ದರು.