ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಹಾಗೂ ಕೆಲಸಗಳನ್ನು ಮಾಡಲು ಶೇ.30 ಕಮೀಷನ್ ಕೊಡಬೇಕಿದ್ದು, ಇದನ್ನು ಕೊಡಲಾಗದೇ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ (ಫೆ.22): ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಹಾಗೂ ಕೆಲಸಗಳನ್ನು ಮಾಡಲು ಶೇ.30 ಕಮೀಷನ್ ಕೊಡಬೇಕಿದ್ದು, ಇದನ್ನು ಕೊಡಲಾಗದೇ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಘಟನೆ ನಡೆದಿದೆ.
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಶೇ.40% ಕಮೀಷನ್ ಪಡೆಯಲಾಗುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಆದರೆ, ಗ್ರಾಮ ಪಂಚಾಯಿತಿಯಲ್ಲಿಯೂ ಸಾರ್ವಜನಿಕ ಕೆಲಸ ಹಾಗೂ ಕಾಮಗಾರಿಗಳನ್ನು ಮಾಡಿಸಲು ಪಂಚಾಯಿತಿ ಸದಸ್ಯರಿಂದ ಶೇ.30 ಕಮೀಷನ್ ಕೇಳಲಾಗುತ್ತಿದೆ. ಈ ಕಮೀಷನ್ ಹಣವನ್ನು ಭರಿಸಲಾಗದ ಕಾರಣ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ಇನ್ನು ಪಂಚಾಯಿತಿ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿರುವ ರಾಜೀನಾಮೆ ಪತ್ರದಲ್ಲಿ ಇದೆಲ್ಲವನ್ನೂ ಉಲ್ಲೇಖ ಮಾಡಿದ್ದಾರೆ.
ಬೆಳಗಾವಿ: ಫೆ.24ರಂದು ವಿಟಿಯು 22ನೇ ಘಟಿಕೋತ್ಸವ
ಸುಧಾ ಸಿದ್ದಪ್ಪ ರಾಜಂಗಳೆ ರಾಜೀನಾಮೆ ಸಲ್ಲಿಕೆ: ರಾಯಭಾಗ ತಾಲೂಕಿನ ಮೇಖಲಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕ್ಷೇತ್ರದಲ್ಲಿ ಕಮಿಷನ್ ಕಿರುಕುಳ ನೀಡುತ್ತಿದ್ದಾರೆ. ಕಾಮಗಾರಿ ಅನುಮೋದನೆಗೆ ಅಧಿಕಾರಿಗಳಿಂದ ಶೇ.30 ಕಮಿಷನ್‌ಗೆ ಬೇಡಿಕೆ ಒಡ್ಡುತ್ತಾರೆ. ಕಮಿಷನ್ ನೀಡಿದರೆ ಮಾತ್ರ ಗ್ರಾಮ ಪಂಚಾಯತಿ ಕಾಮಗಾರಿಗಳಿಗೆ ಅಸ್ತು ನೀಡಲಾಗುತ್ತದೆ. ಇಲ್ಲವಾದರೆ ಯಾವುದೇ ಕೆಲಸಗಳನ್ನು ಮಾಡಲು ಅನುಮತಿ ಸಿಗುವಿಲ್ಲ. ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಒಟ್ಟು 10 ಮಂದಿ ರಾಜೀನಾಮೆ ಸಲ್ಲಿಕೆಗೆ ಸಿದ್ಧತೆ: ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಪಂಚಾಯತಿ ಅಧಿಕಾರಿಗಳ ಕಮಿಷನ್ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ಸುಧಾ ಸಿದ್ದಪ್ಪ ಅವರಂತೆ ಇನ್ನೂ 10 ಮಂದಿ ಸದಸ್ಯರು ತಮ್ಮ ಸದಸ್ಯತವಕ್ಕೆ ರಾಜಿನಾಮೆ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಈ ಮೂಲಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸೇರಿ ಎಲ್ಲ ವಿಭಾಗಗಳಲ್ಲಿ ಹಂಚಿಕೆ ಆದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲ ಹಂತಗಳ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಕಮಿಷನ್ ನೀಡಲು ಆಗದೆ ಕಾರಣ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಪಂಚಾಯತಿಯ 14 ಮತ್ತು 15ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆಗೆ ಕಮಿಷನ್ ಬೇಡಿಕೆ ಇಡಲಾಗಿದೆ. ಕ್ರಿಯಾಯೋಜನೆ ಅನುಮೋದನೆಗೆ ಮುಂಗಡ ಶೇ. 3 ಪರ್ಸೆಂಟ್ ಹಣ ನೀಡಬೇಕು. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ದಳವಾಯಿ ಅವರಿಂದ ಕಮಿಷನ್ ಬೇಡಿಕೆ ಬಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಆರೋಪ ಮಾಡಿದ್ದಾರೆ.
ಯಾವುದಕ್ಕೆ ಎಷ್ಟು ಕಮೀಷನ್ ಕೊಡಬೇಕು.?
Petrol, Diesel Price Today: ಬೆಳಗಾವಿಯಲ್ಲಿ ಇಳಿಕೆಯಾದ, ಶಿವಮೊಗ್ಗದಲ್ಲಿ ಹೆಚ್ಚಾದ ಪೆಟ್ರೋಲ್, ಡೀಸೆಲ್ ಬೆಲೆ
ಸಮಸ್ಯೆ ಬಗೆಹರಿಸದ ಜಿಪಂ ಸಿಇಒ: ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗದೇ ಗ್ರಾಮ ಪಂಚಾಯಿತಿ ಸದಸ್ಯರು ಪರದಾಡುತ್ತಿದ್ದಾರೆ. ಇನ್ನು ಕಾಮಗಾರಿ ಬಿಲ್‌ಗೂ ಮುನ್ನವೇ ಹಣವನ್ನು ಪಾವತಿ ಮಾಡುವುದು ಅಸಾಧ್ಯವಾಗಿದ್ದು, ಈ ಹುದ್ದೆಯ ಸಹವಾಸವೇ ಬೇಡ ಎನ್ನುವಷ್ಟರಮಟ್ಟಿಗೆ ಬೇಸತ್ತಿದ್ದಾರೆ. ಈಗ ಸುಧಾ ಸಿದ್ದಪ್ಪ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಯಾವುದೇ ಪ್ರಯೋಜನೆ ಆಗಿಲ್ಲ. ಇನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 26 ಸದಸ್ಯರ ಪೈಕಿ 24 ಸದಸ್ಯರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಭೇಟಿ ಮಾಡಿದ್ದಾರೆ. ಆದರೆ, ಎಲ್ಲರನ್ನೂ ನೀವು ಶಾಸಕರನ್ನು ಹೋಗಿ ಭೇಟಿ ಮಾಡುವಂತೆ ಕಳುಹಿಸಿದ್ದಾರೆ.