ಹೋಟೆಲ್‌ನಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಬಗ ಹಾಕಲಾಗಿದೆ
ದಾವಣಗೆರೆ (ನ.23): ಬೆಳಗ್ಗಿನ ಉಪಹಾರ, ಟೀ ಸೇವಿಸಿದ 30 ಜನರು ವಾಂತಿ, ಭೇದಿ, ಹೊಟ್ಟೆನೋವಿನಿಂದ ಅಸ್ವಸ್ಥರಾದ ಘಟನೆ ಇಲ್ಲಿನ ಹಳ್ಳಿ ಸೊಗಡು ಹೋಟೆಲ್‌ನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಹಿನ್ನೆಲೆ ನಗರ ಪಾಲಿಕೆ ಆರೋಗ್ಯ ಶಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೋಟೆಲ್‌ಗೆ ಬೀಗ ಜಡಿದಿದ್ದಾರೆತಿಂಡಿ, ಟೀ ಕುಡಿದವರ ಪೈಕಿ ಕೆಲವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನಂತರ ಎಲ್ಲರೂ ಚೇತರಿಸಿಕೊಂಡಿದ್ದಾರೆ.
ಗಾಂಧೀಜಿ ರಾಷ್ಟ್ರಪಿತ ಬಿರುದು ಹಿಂಪಡೆಯಲು ಆಗ್ರಹ
ವಾರದ ರಜಾ ದಿನವಾದ ಭಾನುವಾರ ವಾಯು ವಿಹಾರಕ್ಕೆ ಹೋಗಿದ್ದವರು ಹಳ್ಳಿ ಸೊಗಡು ಹೋಟೆಲ್‌ಗೆ ಟೀ, ತಿಂಡಿಗೆಂದು ಹೋಗಿದ್ದಾರೆ. ಸಾರ್ವಜನಿಕರೂ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ, ಟೀ ಕುಡಿದಿದ್ದಾರೆ. ಹೀಗೆ