ಬಸ್‌ ಡಿಕ್ಕಿ: ಕರು ಸಾವು, ಹಸುವಿನ ಮೂಕ ರೋದನೆ

Kannadaprabha News   | Asianet News
Published : Nov 23, 2020, 09:41 AM ISTUpdated : Nov 23, 2020, 09:47 AM IST
ಬಸ್‌ ಡಿಕ್ಕಿ: ಕರು ಸಾವು, ಹಸುವಿನ ಮೂಕ ರೋದನೆ

ಸಾರಾಂಶ

ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಮುಂದೆ ಪ್ರಾಣಬಿಟ್ಟ ಕರು| ಕೆಲಕಾಲ ಕರು ಮುಂದೆ ನಿಂತು ಮೂಕ ರೋದನೆ ಪಟ್ಟ ಆಕಳು| ಧಾರವಾಡದ ಮಾಳಮಡ್ಡಿಯಲ್ಲಿ ನಡೆದ ಘಟನೆ| 

ಧಾರವಾಡ(ನ.23): ನಗರದ ಮಾಳಮಡ್ಡಿಯ ಪ್ರತಿಮಾ ಅಪಾರ್ಟ್‌ಮೆಂಟ್‌ ತಿರುವಿನಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಹಾಯ್ದ ಪರಿಣಾಮ ಆಕಳು ಕರು ಮೃತಪಟ್ಟಿದೆ. ಈ ದೃಶ್ಯ ನೋಡಿ ತಾಯಿ ಆಕಳು ಮೂಕ ರೋದನೆ ಪಡುತ್ತಿದ್ದ ದೃಶ್ಯ ಜನತೆಯನ್ನು ಮಮ್ಮಲು ಮರುಗುವಂತೆ ಮಾಡಿತ್ತು.

ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಮುಂದೆ ಕರು ಪ್ರಾಣಬಿಟ್ಟಿತು. ಕೆಲಕಾಲ ಕರು ಮುಂದೆ ನಿಂತ ಆಕಳು ಮೂಕ ರೋದನೆ ಪಟ್ಟಿತು. ಆಕಳಿನ ಕಣ್ಣೀರು ನೋಡಿ ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಹ ಫಲಕಾರಿಯಾಗಲಿಲ್ಲ. ಕೊನೆಗೆ ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಯುವಕರು ಸೇರಿ ರೈಲ್ವೆ ನಿಲ್ದಾಣದ ತೋಪಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ನಾಮಫಲಕ ಎಡವಟ್ಟು ಮಾಡಿದ ನೈಋುತ್ಯ ರೈಲ್ವೆ

ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಆಕಳು ಮಾತ್ರ ಜಾಗ ಬಿಟ್ಟು ಕದಲಿಲ್ಲ. ಇದಕ್ಕೆ ಸಾರ್ವಜನಿಕರು ಮಮ್ಮಲ ಮರಗಿದರು.
 

PREV
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!