ಮದುವೆ ದಿಬ್ಬಣದ ಬಸ್ ಉರುಳಿ 30 ಮಂದಿ ಗಾಯ

Kannadaprabha News   | Asianet News
Published : Mar 21, 2021, 11:47 AM IST
ಮದುವೆ ದಿಬ್ಬಣದ ಬಸ್ ಉರುಳಿ 30 ಮಂದಿ ಗಾಯ

ಸಾರಾಂಶ

ಮದುವೆ ದಿಬ್ಬಣದ ಬಸ್ ಉರುಳಿ ಬಿದ್ದು 30 ಕ್ಕೂ ಅಧಿಕ ಮಂದಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಸಂಪೂರ್ಣ ದುಃಖದ ವಾತಾವರಣ ಮನೆ ಮಾಡಿದೆ. 

ನಂಜನಗೂಡು (ಮಾ.21):  ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಬಸ್ ಕಂದಕಕ್ಕೆ ಉರುಳಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕಂದೇಗಾಲ ಗ್ರಾಮದಲ್ಲಿ ಘಟನೆ ನಡೆದಿದ್ದು,  ರಾತ್ರಿ ರಿಸೆಪ್ಷನ್ ಮುಗಿಸಿ ಗ್ರಾಮಸ್ಥರನ್ನ ವಾಪಸ್ ಕರೆದೊಯ್ಯುತ್ತಿದ್ದ ವೇಳೆ ಖಾಸಗಿ ಬಸ್  ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. 

ಕಂದೇಗಾಲದ ನಾಗೇಂದ್ರ ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ಬೊಪ್ಪನಹಳ್ಳಿ ಗ್ರಾಮದ ನಾಗದೇವಿ ಎಂಬುವರ ವಿವಾಹಕಾರ್ಯಕ್ರಮ  ಸರಗೂರು ತಾಲೂಕಿನ ಅಂಬೇಡ್ಕರ್ ಸಮುದಾಯಭವನದಲ್ಲಿ ನಡೆಸಲಾಗಿತ್ತು. 

ಆಸಿಡ್ ಲಾರಿ ಪಲ್ಟಿ : ಇಬ್ಬರು ಸಜೀವ ದಹನ ...

 ಈ ದುರ್ಘಟನೆಯಿಂದ ಮದುವೆ ಮನೆಯಲ್ಲಿ ಸಂಪೂರ್ಣ ದುಃಖದ ವಾತಾವರಣ ನಿರ್ಮಾಣವಾಗಿದೆ. ಗಾಯಾಳುಗಳಿಗೆ ಮೈಸೂರು ಹಾಗೂ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ದುರ್ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ಬೇಜವಾಬ್ದಾರಿಯಿಂದ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ  ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ. 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!