ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಬಸ್ ಹಿಂದೆ ಪ್ಲಾಟ್ ಫಾರಂ ಬಳಿ ಬಾಲಕ ನಿಂತಿದ್ದನು. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ.ಈ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಜಯನಗರ(ಮಾ.19): ಸಾರಿಗೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಮೂರೂವರಿ ವರ್ಷದ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹೊಸಪೇಟೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು(ಮಂಗಳವಾರ) ನಡೆದಿದೆ. ಮೃತಪಟ್ಟ ಬಾಲಕನನ್ನ ಕೇಸರಿ ನಂದನ್ ಎಂದು ಗುರುತಿಸಲಾಗಿದೆ.
ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಬಸ್ ಹಿಂದೆ ಪ್ಲಾಟ್ ಫಾರಂ ಬಳಿ ಬಾಲಕ ನಿಂತಿದ್ದನು. ಬಸ್ ಹಿಂದೆ ಮಗು ನಿಂತಿದ್ದನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ.ಈ ವೇಳೆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗಂಗಾವತಿಗೆ ಹೋಗುವ ಪ್ಲಾಟ್ ಫಾರಂನಲ್ಲಿ ಬಾಲಕ ಮತ್ತು ಬಾಲಕನ ಪೋಷಕರು ನಿಂತಿದ್ದರು. ಮೃತ ಬಾಲಕ ಕೇಸರಿ ನಂದನ್ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿಗಳ ಪುತ್ರನಾಗಿದ್ದಾನೆ
ಮಲ್ಲಮ್ಮನ ತವರು ಮನೆ ಕೊಪ್ಪಳಕ್ಕೆ ಹೋಗಿ ವಾಪಾಸ್ ನಾಗಲಾಪುರಕ್ಕೆ ತೆರಳಿತ್ತದ್ದ ವೇಳೆ ಈ ಅವಘಡ ಸಂಭವಿಸಿದೆ.
undefined
ಹೈವೋಲ್ಟೇಜ್ ತಂತಿ ತಗುಲಿ ಬಸ್‌ಗೆ ಬೆಂಕಿ: 5 ಮಂದಿ ಸಾವು
ಘಟನೆಗೆ ಸಂಬಂಧಿಸಿದಂತೆ ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.